ಕವನ: ಕಲಿಗಾಲ

Upayuktha
0


ಹಿಂದಿನ ಕಾಲದಂತಿಲ್ಲವೋ ಈ ಕಾಲ 

ಹುಷಾರ್ ಆಗಿರಿ  ಬೇಗ ನೀವೆಲ್ಲ 

ವಾಟ್ಸಪ್ಪ್ ಫೇಸ್ಬುಕ್ ಕಾಲವಪ್ಪ 

ಇನ್ಸ್ಟಾಗ್ರಾಮ್ ಟ್ವಿಟ್ಟರ್ ಕಾಲವಪ್ಪ 


ಬೆಪ್ಪನಂತೆ ಲಿಂಕ್ನ್ ಓಪನ್ ಮಾಡಿ 

ಆಗಬೇಡಿ ನೀವು ಬೆಪ್ಪುತಕ್ಕಡಿ 

ಮೆಸ್ಸೆಂಜರ್ ನಲ್ಲಿ ಮೆಸೇಜ್ ಮಾಡಿ 

ಮಳ್ಳನಂತೆ ವರ್ತಿಸಿ ಮೂರ್ಖರಾಗಬೇಡಿ 


ಯಾರೋ ಬೆಂಬತ್ತಿದರು ಅಂತ ನೀವು 

ಮೊಬೈಲ್ ಕೊಡಬೇಡಿ ಅವರಿಗೆ ನೀವು 

ಯಾರ್ ಯಾರ್ ಏನಾಗಿರ್ತಾರೋ 

ಯಾವಾಗ  ಹೇಗೆ ಯಾಮಾರಿಸ್ತಾರೋ 


ಡಿಜಿಟಲ್ ಅರೆಸ್ಟ್ ಅನ್ನೋರ ಮಾತು 

ಸುಳ್ಳುಬುರುಕ  ಮಾತು ಕಳ್ಳರ ಮಾತು 

ಬೆದರಿಸಿ ದುಡ್ಡು ಹೊಡೆಯೋರ ಮಾತು 

ಹುಷಾರ್ ಆಗಿರಿ ಕೇಳಿ ನನ್ಮಾತು


-ರೇಖಾ ಮುತಾಲಿಕ್

Tags

Post a Comment

0 Comments
Post a Comment (0)
To Top