ಗೋವಿನ ಕೆಚ್ಚಲು ಸೀಳಿದ ಪ್ರಕರಣಕ್ಕೆ ಪೇಜಾವರ ಶ್ರೀ ದಿಗ್ಭ್ರಮೆ; ಆಮರಣಾಂತ ಉಪವಾಸದ ಎಚ್ಚರಿಕೆ

Upayuktha
0

ಅಯ್ಯೋ......! ರಾಮಾ....!! ಗೋವಿನ ಮೇಲಿನ ಕ್ರೌರ್ಯಕ್ಕೆ ಅಂತ್ಯವೂ,  ಶಿಕ್ಷೆಯೂ ಇಲ್ಲದಾಯಿತೇ? 

\


ಉಡುಪಿ: ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ದೇಶವೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ನಡೆದಿರುವ ಗೋವಿನ ಕೆಚ್ಚಲು ಸೀಳಿದ ಭೀಭತ್ಸ ಕೃತ್ಯಕ್ಕೆ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.


ಪ್ರಕರಣದ ಬಗ್ಗೆ ತಿಳಿದ ತಕ್ಷಣ ಹ್ಞಾಂ ...ಅಯ್ಯೋ ...ರಾಮಾ....ಗೋವಿನ ಮೇಲಿನ ಕ್ರೌರ್ಯಕ್ಕೆ ಯಾವ ಅಂತ್ಯವೂ ಶಿಕ್ಷೆಯೂ ಈ ನೆಲದಲ್ಲಿ ಇಲ್ಲದಾಯಿತೇ ಎಂದು ಮಮ್ಮಲ ಮರುಗಿದ್ದಾರೆ.

 


ಬಹುಸಂಖ್ಯಾತರಾಗಿದ್ದೂ ಜಾತ್ಯತೀತ ನ್ಯಾಯದ ನೆಪದಲ್ಲಿ ನಮ್ಮ ಭಾವನೆ ಶ್ರದ್ಧೆಗಳಿಗೆ ಕೊಡಲಿ ಏಟು ಕೊಡುವ ದುಷ್ಟ ಪ್ರವೃತ್ತಿಗಳನ್ನು ಇನ್ನೂ ಎಷ್ಟು ಸಹಿಸಬೇಕು ಎಂದು ಸರ್ಕಾರಗಳನ್ನು ಖಾರವಾಗಿಯೇ ಪ್ರಶ್ನಿಸಿರುವ ಶ್ರೀಗಳು ಈಗ ನಡೆದಿರುವ ಕೃತ್ಯ ಅತ್ಯಂತ ಪೈಶಾಚಿಕವಾಗಿದೆ.‌ ಕೋಟ್ಯಂತರ ಹಿಂದುಗಳಿಗೆ ಇದು ಅತ್ಯಂತ ಕೆಟ್ಟ ದಿನವಾಗಿದೆ. ಸರ್ಕಾರ ಕುರುಡು ನೆಪ ಹೇಳದೇ ಅಪರಾಧಿಗಳಿಗೆ ಘೋರ ಶಿಕ್ಷೆಯನ್ನು ತ್ವರಿತ ಗತಿ ನ್ಯಾಯಾಲಯದ ಮೂಲಕ ವಿಧಿಸಬೇಕು.‌ 


ಈ ಘಟನೆಯ ಬಗ್ಗೆ ಕೇಳಿ ತೀವ್ರ ದುಃಖವಾಗಿದೆ. ದೇಶದಲ್ಲಿ ಗೋವಿನ ಮೇಲಿನ ಕ್ರೌರ್ಯಕ್ಕೆ ತಾತ್ವಿಕ ಅಂತ್ಯ ಹಾಡಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಆಮರಣ ಉಪವಾಸ ಕುಳಿತಾದರೂ ಸರಿ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top