ಶಿವಮೊಗ್ಗ: ಕಟೀಲ್‍ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ "ಒಂದು ದಿನದ ಕಥಾಕಮ್ಮಟ"

Upayuktha
0


ಶಿವಮೊಗ್ಗ: ಕಟೀಲ್‍ ಅಶೋಕ್ ಪೈ ಸ್ಮಾರಕ ಕಾಲೇಜು, ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಹಾಗೂ ಇಂಗ್ಲಿಷ್‌ ವಿಭಾಗದ ವತಿಯಿಂದ ಶುಕ್ರವಾರ ಯುವ ಬರಹಗಾರರಿಗೆ "ಒಂದು ದಿನದ ಕಥಾಕಮ್ಮಟ" ವನ್ನುಆಯೋಜಿಸಲಾಗಿತ್ತು.


ಶಿವಮೊಗ್ಗದ ವಿವಿಧ ಕಾಲೇಜುಗಳಿಂದ ಹಲವಾರು ವಿದ್ಯಾರ್ಥಿಗಳು ಮತ್ತು ಯುವ ಬರಹಗಾರರು ಕಮ್ಮಟದಲ್ಲಿ ಭಾಗವಹಿಸಿದ್ದರು. ಸುಮಾರು ಹತ್ತು ಆಯ್ದ ಕಥೆಗಳನ್ನು ಚರ್ಚಿಸಲಾಯಿತು. ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿಕಮ್ಮಟ ವನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿಯವರು ಯುವ ಬರಹಗಾರರ ಕ್ರಿಯಾಶೀಲತೆಗೆ ಇಂತಹ ಕಾರ್ಯಾಗಾರಗಳು ಅಗತ್ಯವಾಗಿವೆ ಎಂದು ಹೇಳಿದರು.


ಸಂಪನ್ಮೂಲ ವ್ಯಕ್ತಿಗಳಾದ ಪ್ರಸಿದ್ಧ ವಿಮರ್ಶಕರು, ಅನುವಾದಕರು, ಬರಹಗಾರರಾದ ಡಾ.ಗಂಗಾಧರಯ್ಯ ಹಾಗೂ ಡಾ.ರಾಮಲಿಂಗಪ್ಪ ಟಿ ಬೇಗೂರು ಮಾತನಾಡಿ ಕಮ್ಮಟದ ಉದ್ದೇಶ ಮತ್ತು ಸ್ವರೂಪವನ್ನು ತಿಳಿಸಿದರು. ವಿದ್ಯಾರ್ಥಿಗಳ ಮತ್ತು ಯುವ ಬರಹಗಾರರ ಕ್ರಿಯಾಶೀಲತೆಗೆ ಮತ್ತು ಶ್ರೇಯಸ್ಸಿಗೆ ಶ್ರಮಿಸುವುದೆ ಪ್ರಾಧ್ಯಪಕರ ಮತ್ತು ಕಾಲೇಜುಗಳ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಮತ್ತು ವಿದ್ಯಾರ್ಥಿಗಳ ಸಂವಹನ ಉತ್ತಮವಾಗಿದೆ ಎಂದು ಹರ್ಷಿಸಿದರು.


ಸಮಾರೋಪ ನುಡಿಗಳನ್ನಾಡಿದ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ರಾಜೇಂದ್ರ ಚೆನ್ನಿಅವರು ನಾವು ಜಗತ್ತನ್ನು, ನಮ್ಮ ಸುತ್ತಲಿನ ವ್ಯಕ್ತಿಗಳನ್ನು ಅರಿಯುವುದು ಕಥೆಗಳ ಮೂಲಕ, ಕಥೆಗಳು ನಮ್ಮ ಜೀವನದ ಬಹುಮುಖ್ಯ ಭಾಗವಾಗಿವೆ ಎಂದು ಹೇಳಿದರು.


ಪ್ರಾಸ್ತವಿಕ ನುಡಿಗಳನ್ನಾಡಿದ ಸಹಾಯಕ ಪ್ರಾಧ್ಯಾಪಕ ಗಣೇಶ್ ಪ್ರಸಾದ್‍ರವರು ಸಾಹಿತ್ಯವನ್ನು ಓದುವುದರ ಮೂಲಕ ನಾವು ಜೀವಂತಿಕೆ ಉಳಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಕಾಲೇಜಿನ ವಿದ್ಯಾರ್ಥಿಗಳಾದ ಹರ್ಷವರ್ಧನ್ ಮಾತನಾಡಿ, ಇಂತಹ ಕಮ್ಮಟಗಳು ಯುವ ಬರಹಗಾರರಿಗೆ ಉತ್ತಮವಾದ ಕಥೆಗಳನ್ನು ರಚಿಸಲು ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು. ವಿಭಾಗದ ಮುಖ್ಯಸ್ಥೆ  ರೇಷ್ಮರವರು ವಂದಿಸಿದರು. ಕು.ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top