ಸ್ಫೂರ್ತಿ ಸೆಲೆ: ಲೈಫು ಇಷ್ಟೇನಾ...

Upayuktha
1 minute read
0




ದನ್ನು ನೋಡಿದಾಗ ಯೋಗರಾಜ್ ಭಟ್ಟರ ಹಾಡು ನೆನಪಾಗುತ್ತದೆ. ಪ್ರತಿಯೊಬ್ಬರ ದೃಷ್ಟಿಯಲ್ಲಿ ಬದುಕು ಒಂದೊಂದು ಅರ್ಥ ಕೊಡುತ್ತದೆ.


ಬದುಕು ನಮಗೆ ಗೊತ್ತಿಲ್ಲದಂತೆ ಒಂದೊಂದು ಪಾಠವನ್ನು ಕಲಿಸುತ್ತದೆ. ಬದುಕೆಂಬ ವಿಶ್ವವಿದ್ಯಾನಿಲಯದಲ್ಲಿ ನಾವೆಲ್ಲರೂ ವಿದ್ಯಾರ್ಥಿಗಳೇ.


ನಾವು ಬದುಕನ್ನು ಐದು ದಿನಗಳ ಟೆಸ್ಟ್‌ ಸೀರೀಸ್ ಎಂದುಕೊಂಡಿರುವಾಗಲೇ ಅದು ನಮಗೆ ಗೊತ್ತಿಲ್ಲದಂತೆ 20 ಓವರ್ ಗಳ ಕ್ರಿಕೆಟ್ ಮ್ಯಾಚಿಗೆ ಮಾರ್ಪಾಡು ಆಗಿರುತ್ತದೆ. ಪುರಾಣಗಳ ಪ್ರಕಾರ ನಮ್ಮ ಅರ್ಧ ಆಯುಷ್ಯವನ್ನೂ ನಿದ್ದೆಯಲ್ಲಿ ಕಳೆಯುತ್ತೇವೆ. ಕೆಲವರು ಬದುಕನ್ನು "ಹುಟ್ಟು ಸಿಸೇರಿಯನ್‌ನಲ್ಲಿ ಮತ್ತು ಸಾವು ವೆಂಟಿಲೇಟರ್ ನಲ್ಲಿ" ಎಂದು ಎಂದು ಜೋಕಾಗಿ ಹೇಳುವುದುಂಟು.


ನಾವು ಬದುಕನ್ನು ಎಷ್ಟು ಅರ್ಥಪೂರ್ಣವಾಗಿ ಕಳೆಯಬೇಕೆಂದರೆ ಸಾವು ನಮ್ಮ ಹತ್ತಿರ ಬಂದಾಗ ಸಂಭ್ರಮಿಸಬೇಕು. ಎಷ್ಟೋ ಹಿರಿಯರು ಅರ್ಥ ಪೂರ್ಣವಾಗಿ ಬದುಕಿ ತುಳಸಿ. ತೀರ್ಥ, ಗಂಗಾ ಜಲ ಸೇವಿಸಿ ನೆಮ್ಮದಿಯಿಂದ ಪ್ರಾಣ ಬಿಟ್ಟ ಉದಾಹರಣೆ ನೋಡಿದ್ದೇನೆ.


ಅದಕ್ಕೆ ಹೇಳುತ್ತಾರೆ

"ಬದುಕೆಂಬುದು ಬೆಣ್ಣೆ

ಹದವಿಟ್ಟು ಕಾಸಿದರೆ 

ಬರುವುದು ತುಪ್ಪ

ಇಲ್ಲವಾದರೆ ಬರೀ ಚಟ್ಟ"


ಇದು ಅರ್ಥ ಪೂರ್ಣ ಬದುಕಿನ ಮಹತ್ವವನ್ನು ತಿಳಿಸಿಕೊಡುತ್ತದೆ.


ಭಗವದ್ಗೀತೆಯಲ್ಲಿ ಕೃಷ್ಣ "ಉದ್ದರೆತಾತ್ಮಾನಮ್ ಎಂದು ಹೇಳಿದ್ದಾನೆ. ಅಂದರೆ ನಮ್ಮ ಉದ್ಧಾರವು ನಮ್ಮ ಕೈಯಲ್ಲಿದೆ. ನಮ್ಮ ಬದುಕು ಏನೋ, ಹೇಗೋ ಆಗ ಬಾರದೇ ಹೀಗೇ ಇರಬೇಕು ಎಂದು ಚಿಂತಿಸಿ ನಡೆಯಬೇಕು, ಆಗ ಮಾತ್ರ ಲೈಫು ಇಷ್ಟೇ ಆಗದೆ ಲೈಫು ಇಷ್ಟೇನಾ ಆಗುತ್ತದೆ.


ಏನಂತೀರಾ? ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.


- ಗಾಯತ್ರಿ ಸುಂಕದ, ಬದಾಮಿ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter



Post a Comment

0 Comments
Post a Comment (0)
To Top