ಜೀವನದಲ್ಲಿ ಯಶಸ್ಸನ್ನು ಪಡೆಯಲು ಕಠಿಣ ಪರಿಶ್ರಮ ಬೇಕೇ ಬೇಕು. ಇಚ್ಚಾ ಶಕ್ತಿಯು ಒಂದೊಂದು ಸಾರಿ ನಮ್ಮ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಜೀವನವೆಂಬ ರೈಲಿಗೆ ನಮ್ಮ ಇಚ್ಚಾ ಶಕ್ತಿಯು ಎಂಜಿನ್ನಂತೆ ಕೆಲಸ ಮಾಡುತ್ತದೆ. ಅದಕ್ಕೇ ಹೇಳುವುದು "We can do anything if we are having will power."
ಎಷ್ಟೋ ಜನರು ಇಚ್ಚಾ ಶಕ್ತಿಯಿಂದ ದೊಡ್ಡ ದೊಡ್ಡ ಖಾಯಿಲೆಗಳಿಂದ ಗುಣಮುಖರಾದ ಉದಾಹರಣೆಗಳಿವೆ. ಇಚ್ಛಾಶಕ್ತಿಯ ನಮ್ಮ ಜೀವನದ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ನಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯು ಇಚ್ಛಾಶಕ್ತಿಯ ಕೊಂಡೊಯ್ಯುವಲ್ಲಿಗೆ ಹೋಗುತ್ತವೆ. ಅದು ಒಂದು ರೀತಿಯ "One man Army" ಇದ್ದ ಹಾಗೆ.
ಎಷ್ಟೋ ಅಂಗ ವೈಕಲ್ಯ ಇದ್ದ ವ್ಯಕ್ತಿಗಳು ತಮ್ಮ ದೌರ್ಬಲ್ಯವನ್ನು ಕೇವಲ ಇಚ್ಚಾ ಶಕ್ತಿಯಿಂದ ಗೆದ್ದ ಉದಾಹರಣೆಗಳಿವೆ. ಸ್ಟೀಫನ್ ಹಾಕಿಂಗ್, ಕೇವಲ ಇಚ್ಛಾಶಕ್ತಿಯಿಂದ ತಮ್ಮ ಅಂಗ ವೈಕಲ್ಯ ಮೆಟ್ಟಿ ನಿಂತು ವೈದ್ಯಕೀಯ ಜಗತ್ತಿಗೆ ಸವಾಲಾಗಿದ್ದಾರೆ.
ನಮ್ಮಲ್ಲಿ ಇಚ್ಛಾಶಕ್ತಿ ಪ್ರಬಲ ಇದ್ದಲ್ಲಿ ಅದು ನಮ್ಮನ್ನು ನಿದ್ದೆ ಮಾಡಲು ಸಹ ಬಿಡುವುದಿಲ್ಲ. ಕನಸಿನಲ್ಲಿಯೂ ಸಹ ಕನವರಿಸಲು ಹಚ್ಚುತ್ತದೆ. ಇದು ಒಂದು ರೀತಿಯ ಬೆಂಕಿ ಕಡ್ಡಿ ಇದ್ದ ಹಾಗೆ. ನಾವು ದೀಪವನ್ನು ಹಚ್ಚಬಹುದು ಅಥವಾ ಒಂದು ಮನೆಯನ್ನು ಸುಡಬಹುದು.
ನಾವು ಇಚ್ಚಾ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಉಪಯೋಗಿಸೋಣ. ಏನಂತೀರಾ?
-ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ