ತಾಯಿ ಹೃದಯ, ಹೇಗೆ ತೀರಿಸಲಿ ಹೆತ್ತವಳ ಋಣ

Upayuktha
0



ಮಾತಿಗೆ ನಿಲುಕದ ಪದಗಳಿಗೆ ಎಟುಕದ ಪ್ರೀತಿ ಅವಳ ಪ್ರೀತಿಗೆ ಕಾರಣ ಬೇಕಿಲ್ಲ. ತಾಯಿ ಹೆತ್ತ ಮಗುವಿಗಾಗಿ ಎಂತಹ ಕಷ್ಟಗಳನ್ನು ಎದುರಿಸುತ್ತಾಳೆ. ಎಲ್ಲ ತ್ಯಾಗಕ್ಕೂ ಮುಂದಾಗುತ್ತಾಳೆ. ಅವಳ ಕೋಪದಲ್ಲಿ ಸ್ವಾರ್ಥವಿಲ್ಲ. ಕೋಟಿ ಕೋಟಿ ದೇವರನ್ನು ಹಿಂದಿಕ್ಕಿ ಕಾಣುವ ಮೊದಲ ದೇವತೆ ಅಮ್ಮ. ನನ್ನಮ್ಮನ ಕುರಿತು ಬರೆಯಲು ಪದಗಳೇ ಸಾಲದು. ಅಮ್ಮ ಅಂದರೆ ಹಾಗೆ ಪದಗಳಿಗೂ ಸಿಗದ ಕವಿತೆ, ವರ್ಣನೆಗೂ ಎಟುಕದ ಕಾವ್ಯ. ನಾನು ಕಂಡ ಪ್ರತ್ಯಕ್ಷ ದೇವತೆ, ಎಡಬಿಡದೆ ಬಿಡುವಿಲ್ಲದೆ ದುಡಿಯುವ ತ್ಯಾಗಮಯಿ ಸಹನೆಗೆ ಪರಿಶ್ರಮ ವಾತ್ಸಲ್ಯಕ್ಕೆ ಪ್ರತಿರೂಪ ನನ್ನಮ್ಮ. ಅಮ್ಮನೊಂದಿಗೆ ಕಳೆದ ಕ್ಷಣಗಳನ್ನು ವಿವರಿಸಲು ಆಕಾಶದಷ್ಟು ಅಗಲದ ಪುಸ್ತಕವು ಸಾಲದು.


ಹೊತ್ತು ಹೆತ್ತು ಸಾಕಿ ನಮಗಾಗಿ ತನ್ನ ಜೀವನವನ್ನು ಮುಡ್ಡಿಪಾಗಿಟ್ಟವಳು. ವಿನಯದ ಜೊತೆ ಸಂಸ್ಕಾರ ತುಂಬಿದ ಜೀವ ಇವಳು. ಮುದ್ದಿನ ಮಿತಿಯ ಜೊತೆ ಮಿತಿಯಿಲ್ಲದ ನಂಬಿಕೆ ಇಟ್ಟ ನನ್ನ ಆರಾಧ್ಯ ದೈವ. ಬದುಕಲಿ ಹಠಕ್ಕಿಂತ ಛಲ ಮುಖ್ಯ ಎಂದು ಅರ್ಥ ಮಾಡಿಸಿ ತಪ್ಪು ದಾರಿಯ ದೊಡ್ಡ ಗುಂಪಿಗಿಂತ ಸರಿ ದಾರಿಯ ಒಂಟಿತನವೇ ಮೇಲು ಎಂದು ಸದಾ ಬೋಧಿಸುವ ನನ್ನ ಗುರು ಕೂಡ ಇವಳೇ. ತನ್ನ ಗಂಡ ಮಕ್ಕಳ ಸಂತೋಷಕ್ಕಾಗಿ ಅದೆಷ್ಟೋ ಆಸೆ ಕನಸುಗಳನ್ನು ಸೆರಗಲ್ಲೇ ಮುಚ್ಚಿಟ್ಟ ತ್ಯಾಗಮಯಿ. ಜೀವನದ ಎಷ್ಟೋ ಕಷ್ಟ ನೋವುಗಳನ್ನು ಯಾರಿಗೂ ಹೇಳದೆ ಮನಸಲ್ಲೇ ನುಂಗುವ ಸಹನಾಮೂರ್ತಿ ಇವಳು ನನ್ನ ಪಾಲಿಗೆ ಬೆಲೆಕಟ್ಟಲಾಗದ ಬಂಗಾರವೂ ಇವಳೇ ಭರವಸೆಯ ಬೆಳಕು ಇವಳೇ.


ನನ್ನ ಪುಟ್ಟ ಜಗತ್ತಿನ ಅದ್ಭುತ ಶಕ್ತಿಯಾದ ನನ್ನಮ್ಮನಿಗೆ ಕೋಟಿ ಕೋಟಿ ನಮನಗಳು. ಜೀವನ ಎಂಬುವುದು ಹೇಗಿರುತ್ತದೆ ಅದರಲ್ಲಿ ನಾವು ಹೇಗಿರಬೇಕು ಎಂಬುವುದನ್ನು ತಿಳಿಸಿಕೊಟ್ವಳು. ಪ್ರತೀ ಕ್ಷಣಗಳಲ್ಲೂ ಮಗುವಿನಂತೆ ಸಂತೈಸಿ ಕೈ ತುತ್ತು ಕೊಟ್ಟು ಮಕ್ಕಳ ಸಂತೋಷ್ ಮತ್ತು ದುಃಖಗಳಲ್ಲಿ ಭಾಗಿಯಾದವಳು. ಅಮ್ಮನ ಪ್ರೀತಿ, ಮಮಕಾರವನ್ನು ಯಾರಿಂದಲೂ ಪಡೆಯಲು ಸಾಧ್ಯವಿಲ್ಲ. ತನಗಾಗಿ ಏನನ್ನೂ ಬಯಸದೆ ತನ್ನ ಮಕ್ಕಳಿಗಾಗಿ ದುಡಿಯುವವಳು. ರುಚಿಕರವಾದ ಅಡುಗೆ ಮಾಡಿ ಕೊನೆಗೆ ಉಳಿದದ್ದನ್ನು ತಿನ್ನುವವಳು.


ನಿಸ್ವಾರ್ಥ ಪ್ರೀತಿ ತ್ಯಾಗದ ಸ್ವರೂಪ ಅಮ್ಮ ಕಾಣದ ದೇವರಿಗಾಗಿ ಇನ್ನೆಲ್ಲೋ ಹುಡುಕುವ ಬದಲು ಅಮ್ಮನಲ್ಲೇ ದೇವರನ್ನು ಕಾಣಬಹುದು. ಅಮ್ಮ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿಯಿದೆ. ಮಗಳ ವಿಚಾರಕ್ಕೆ ಬಂದರೆ ಅವಳು ಜಗತ್ತಿನ ಅತಿ ದೊಡ್ಡ ಯೋಧೆ. ಅಮ್ಮನ ನಗುವಲ್ಲೇ ನನ್ನೆಲ್ಲ ಗೆಲುವು ತಾಯಿಯ ಬದುಕು. ಎಲ್ಲರಿಗಿಂತ ಭಿನ್ನ ಯಾರು ತೀರಿಸಲು ಸಾಧ್ಯ ಹೆತ್ತವಳ ಋಣ? ನನಗೆ ಜೀವಕೊಟ್ಟು ಈ ಜಗತ್ತಿಗೆ ಪರಿಚಯಿಸಿ ಭವ್ಯತೆಯ ಮಡಿಲಿನಲ್ಲಿ ನನ್ನನ್ನೂ ಜೋಪಾನವಾಗಿ ಕಾಪಾಡಿದ ಅಮ್ಮ ನಿನಗೆ ಧನ್ಯವಾದ.


- ಮಂಜುಳಾ ಪ್ರಕಾಶ್

ಎಂಸಿಜೆ, ಆಳ್ವಾಸ್ ಕಾಲೇಜು ಮೂಡುಬಿದಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top