ಆಳ್ವಾಸ್ ವಿದ್ಯಾರ್ಥಿಗಳು ಪ್ರತಿನಿಧಿಸಿದ ಮಂಗಳೂರು ವಿವಿ ರನ್ನರ್ಸ್ ಅಪ್

Upayuktha
0




ಮೂಡುಬಿದಿರೆ: ಲವ್ಲೀ ಪ್ರೊಫೆಷನಲ್ ವಿ. ವಿ ಜಲಂಧರ್ ಪಂಜಾಬ್ ನಲ್ಲಿ ನಡೆದ  ಅಖಿಲ ಭಾರತ ಅಂತರ್ ವಿ. ವಿ ವೇಟ್ ಲಿಫ್ಟಿಂಗ್ ಚಾಂಪಿಯಶಿಪ್ ನಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಪ್ರತಿನಿಧಿಸಿದ್ದ ಮಂಗಳೂರು ವಿ. ವಿ ರನ್ನರ್ಸ್ ಅಪ್  ಪ್ರಶಸ್ತಿಯನ್ನು ಪಡೆದುಕೊಂಡಿತು. 32 ವರ್ಷಗಳ ಬಳಿಕ ರನ್ನರ್ಸ್ ಅಪ್ ಪ್ರಶಸ್ತಿ ಪಡೆದು ಮಂಗಳೂರು ವಿವಿ ಪ್ರಶಂಸೆಗೆ ಪಾತ್ರವಾಗಿದೆ.    


ವಿವಿ ಮಂಗಳೂರು ವಿವಿಯ ಒಟ್ಟು  9 ವಿದ್ಯಾರ್ಥಿಗಳ ತಂಡದಲ್ಲಿ  ಆಳ್ವಾಸ್ ಸಂಸ್ಥೆಯ 6 ವಿದ್ಯಾಥಿಗಳು ಭಾಗಿಯಾಗಿದ್ದರು . ಆಳ್ವಾಸ್ ಕಾಲೇಜಿನ ಪ್ರಶಾಂತ್‌ಗೆ ಬೆಳ್ಳಿ, ಪ್ರತ್ಯುಶ್‌ಗೆ ನಾಲ್ಕನೇ ಸ್ಥಾನ, ಜೋಸುವ ರಾಜಕುಮಾರ್‌ಗೆ ನಾಲ್ಕನೇ ಸ್ಥಾನ ಪಡೆದರು. ಮಂಗಳೂರು ವಿವಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯಲು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳ ಕೊಡುಗೆ ಪ್ರಮುಖವಾಗಿದೆ .


ಡಿಸೆಂಬರ್‌ನಲ್ಲಿ ಆಚಾರ್ಯ ನಾಗಾರ್ಜುನ ಯೂನಿವರ್ಸಿಟಿ ಗುಂಟೂರ್‌ನಲ್ಲಿ  ನಡೆದ  ದಕ್ಷಿಣ ಭಾರತ ಅಂತರ್ ವಿ. ವಿ ಚಾಂಪಿಯಶಿಪ್‌ನಲ್ಲಿ 3 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿತ್ತು. ಇತಿಹಾಸದಲ್ಲೇ ಮೊದಲ ಬಾರಿ ಈ ಸಾಧನೆ ಮಾಡಿದ ಹೆಗ್ಗಳಿಕೆ ಮಂಗಳೂರು ವಿವಿಗೆ ಸಲ್ಲುತ್ತದೆ .


ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top