ಗೋಮಾತೆಯ ರಕ್ಷಣೆಗೆ ಕಂಕಣಬದ್ಧರಾಗಿ ಬನ್ನಿ

Upayuktha
0

ಮಾಣಿ ಮಠದಲ್ಲಿ ಜ. 25ರಂದು ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಉಪವಾಸ ಸತ್ಯಾಗ್ರಹ 





ಪೆರಾಜೆ: ಗೋಸಂರಕ್ಷಣೆಗಾಗಿ ರಾಷ್ಟ್ರವ್ಯಾಪಿ ಅಭಿಯಾನ, ಗೋಯಾತ್ರೆಗಳನ್ನು ಕೈಗೊಂಡು ಮನೆಮಾತಾಗಿರುವ ರಾಮಚಂದ್ರಾಪುರ ಮಠ, ರಾಜ್ಯದಲ್ಲಿ ಗೋವಂಶ ಸುರಕ್ಷೆಗೆ ಸಂಪ್ರಾರ್ಥಿಸಿ ಈ ತಿಂಗಳ 25ರಂದು ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ.


ಈ ತಿಂಗಳ 23 ರಿಂದ 29ರವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಮಾಡುವಂತೆ ಪೇಜಾವರ ಶ್ರೀಗಳು ನೀಡಿದ ಕರೆಗೆ ಸ್ಪಂದಿಸಿ ಹವ್ಯಕ ಸಮಾಜ ಕೈಗೊಂಡಿರುವ ಸರಣಿ ಕಾರ್ಯಕ್ರಮದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಿದೆ.


ಹೆತ್ತ ತಾಯಿ ಕೆಲ ವರ್ಷ ಹಾಲುಣಿಸಿದರೆ ಗೋಮಾತೆ ನಮ್ಮ ಜೀವನವಿಡೀ ಹಾಲೆಂಬ ಅಮೃತಧಾರೆ ಉಣಿಸಿ ಮನುಕುಲವನ್ನು ಸಂರಕ್ಷಿಸುತ್ತಾ ಬಂದಿದ್ದಾಳೆ. ಆದಾಗ್ಯೂ 33 ಕೋಟಿ ದೇವತೆಗಳ ಆವಾಸಸ್ಥಾನ ಎನಿಸಿದ ಗೋವುಗಳ ಹತ್ಯೆ, ಗೋಹಿಂಸೆಯ ಕ್ರೌರ್ಯ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಗೋವುಗಳ ಮೇಲೆ ದುರಾಕ್ರಮಣ ನಡೆಸುವವರಿಗೆ ಕಾನೂನಿನ ಅಂಕುಶವಿಲ್ಲ; ಶಿಕ್ಷೆಯೂ ಆಗುತ್ತಿಲ್ಲ.


ಮನುಕುಲದ ಸುರಕ್ಷೆಗೆ ಗೋಮಾತೆಯ ರಕ್ಷಣೆ ಅನಿವಾರ್ಯ. ಗೋವಿನ ಮೇಲೆ ನಡೆಯುತ್ತಿರುವ ಪೈಶಾಚಿಕ ಕೃತ್ಯಗಳನ್ನು ತಡೆಯುವುದು ಸಮಸ್ತ ಮನುಕುಲದ ಹೊಣೆ. ಗೋಮಾತೆಯ ಹಾಲಿನ ಋಣ ತೀರಿಸುವ ಪುಟ್ಟ ಪ್ರಯತ್ನ ಗೋಮಾತೆಯ ಮಕ್ಕಳೆಲ್ಲ ಸೇರಿ ಆಕೆಗಾಗಿ ಒಂದು ದಿನ ಉಪವಾಸ ಕೈಗೊಂಡು ಸಾಮೂಹಿಕವಾಗಿ ಪ್ರಾರ್ಥನೆ ಮಾಡುವುದು.


ರಾಮಚಂದ್ರಾಪುರ ಮಠದ ಶ್ರೀ ಹವ್ಯಕ ಮಹಾಮಂಡಲ, ಮಾಣಿ ಮಠ ಸೇವಾ ಸಮಿತಿ, ಓಂ ಶ್ರೀ ಹರಿಃ ಓಂ ತತ್ಸತ್ ಮತ್ತಿತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಈ ತಿಂಗಳ 25ರಂದು ಬೆಳಿಗ್ಗೆ 9.30ಕ್ಕೆ ಮಾಣಿ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸಮಾವೇಶಗೊಂಡು ಎಲ್ಲರೂ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಿಸುವ ಮೂಲಕ ಗೋವಿನ ಜತೆಗೆ ನಾವಿದ್ದೇವೆ ಎಂಬ ಸಂದೇಶವನ್ನು ಆಳುವವರ್ಗಕ್ಕೆ ತಲುಪಿಸೋಣ. 


ಮಧ್ಯಾಹ್ನ 12.30ರವರೆಗೆ ವಿಷ್ಣು ಸಹಸ್ರನಾಮ ಪಠಣ, ಬಳಿಕ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.

ಸಮಸ್ತ ಗೋವಂಶದ ಉಳಿವಿಗಾಗಿ ಮಂಗಳೂರು ಹೋಬಳಿಯ ಸಮಸ್ತ ಶಿಷ್ಯಭಕ್ತರು ಜಾತಿ ಮತ ಬೇಧವಿಲ್ಲದೇ ಮಾಣಿಮಠದಲ್ಲಿ ಸಮಾವೇಶಗೊಂಡು ಗೋಮಾತೆಯ ಸಂರಕ್ಷಣೆಗೆ ಪಣ ತೊಡೋಣ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬನ್ನಿ. ಇದು ಜಗಜ್ಜನನಿಯ ಜಗದಾಂಬೆಯ ಕರೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top