ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ 90 ವರ್ಷದ ಮಹಿಳೆಗೆ ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ

Upayuktha
0




ಮಂಗಳೂರು: ಮುಕ್ಕದ ಶ್ರೀನಿವಾಸ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 90 ವರ್ಷದ ಮಹಿಳೆಗೆ ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಯಿತು. 90 ವರ್ಷದಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆ ನಡೆಸುವುದು ತೀರಾ ವಿರಳ. 


ಮಂಜೇಶ್ವರದ ರಾಧಾ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಶ್ರೀನಿವಾಸ ಆಸ್ಪತ್ರೆಗೆ ಇತ್ತೀಚಿಗೆ ದಾಖಲಾಗಿದ್ದರು.  ಅವರಿಗೆ ಹೃದಯದ ಒಳಗೆ ಎಡ ಭಾಗದಲ್ಲಿ ಗಡ್ಡೆಅಂಶ ಕಂಡು ಬಂತು. ಈ ಅಡಚಣೆಯಿಂದಾಗಿ ರೋಗಿಗೆ ಉಸಿರಾಟದ ತೊಂದರೆ, ಎದೆ ಬಡಿತದಲ್ಲಿ ಏರಿಳಿತ ಆಗುತ್ತಿತ್ತು.


ಒಂದು ಹೆಜ್ಜೆ ಇಡಲು ಹಾಗೂ ಮಲಗಲು ತುಂಬಾ ಕಷ್ಟ ತುಂಬಾ ಕಷ್ಟವಾಗಿ ಒದ್ದಾಡುತ್ತಿದ್ದರು. ಆಸ್ಪತ್ರೆಯಲ್ಲಿ ಏಕೋ ಕಾರ್ಡಯೋಗ್ರಫಿಯಲ್ಲಿ ಹೃದಯದ ಎಡ ಭಾಗದಲ್ಲಿ ಗಡ್ಡೆಯು ಆರು ಸೆಂಟಿಮೀಟರ್ X ಐದು ಸೆಂಟಿಮೀಟರ್ ಗಾತ್ರದಲ್ಲಿ ಆವರಿಸಿದ್ದು ಎಡ ಭಾಗದಲ್ಲಿರುವ ಮೈಟ್ರಲ್ ಕವಾಟದ ಮೂಲಕ ಎಡ ವೆಂಟ್ರಿಕಲ್ ಗೆ ಬರುತ್ತಿತ್ತು.


ಇದರಿಂದಾಗಿ ಮೈಟ್ರಲ್  ಕಾರ್ಯ ವೈಕರಿಗೆ ಧಕ್ಕೆ ವಾಗುತ್ತಿತ್ತು ಇದನ್ನು ಮನಗಂಡ ವೈದ್ಯರು ತುರ್ತು ರೀತಿಯಲ್ಲಿ ತೆರೆದ ಹೃದಯದ  ಶಸ್ತ್ರಚಿಕಿತ್ಸೆಯನ್ನು ನಡೆಸಿ ಯಶಸ್ವಿಯಾಗಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಕೇವಲ ಐದು ದಿನಗಳಲ್ಲಿ ರೋಗಿಯು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

 

ಶಸ್ತ್ರಚಿಕಿತ್ಸೆಯಲ್ಲಿ ಹೃದಯ ಶಸ್ತ್ರಚಿಕಿತ್ಸಾ ತಜ್ಞ  ಡಾ. ಅಮಿತ್ ಕಿರಣ್, ಅರೆವಳಿಕೆ ತಜ್ಞ  ಡಾ. ಬಾಲಕೃಷ್ಣ ಭಟ್, ಸಹಾಯಕ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಹರೀಶ್ ಶೆಟ್ಟಿ,  ಡಾ. ಸಿದ್ದಾರ್ಥ್ ಎಸ್, ಡಾ. ಮಧು ಭಾಗವಹಿಸಿದ್ದರು. ಆಸ್ಪತ್ರೆಯ ಆಡಳಿತ ಮಂಡಳಿಯ ಸಹಕಾರದಿಂದ ಬಹಳ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆಯು ನೆರವೇರಿತು.



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top