ಹಿರಿಯಡಕ ಸ.ಪ್ರ.ದ ಕಾಲೇಜ್ ವಿವೇಕಾನಂದರ ಜನ್ಮದಿನಾಚರಣೆ

Upayuktha
0

ವಿವೇಕಾನಂದರನ್ನು ಅವರದೇ ಬರಹಗಳಲ್ಲಿ ಹುಡುಕಿಕೊಳ್ಳಿ: ಪ್ರೊ. ಜಯಪ್ರಕಾಶ್ ಶೆಟ್ಟಿ

  



ಹಿರಿಯಡ್ಕ: ಮತಧರ್ಮಗಳ ಎಲ್ಲೆಗಳನ್ನು ಮೀರಿ ದಮನಿತರೆಲ್ಲರನ್ನೂ ದರಿದ್ರನಾರಾಯಣರೆಂದೇ ಸಂಬೋಧಿಸಿದ, ದೇಶ ಮತ್ತು ದೀನದಲಿತರ ಏಳಿಗೆಗಾಗಿ ದುಡಿಯುವಂತೆ ಯುವಕರಿಗೆ ಏಳಿ ಎಚ್ಚರಗೊಳ್ಳಿ ಎಂದು ಕರೆಕೊಟ್ಟ ವಿವೇಕ ಮತ್ತು ವಿವೇಚನೆಯ ವೈಚಾರಿಕ ಸನ್ಯಾಸಿ ವಿವೇಕಾನಂದರನ್ನು ಯಾರ‍್ಯಾರದೋ ಭಾಷಣಗಳಲ್ಲಿ ಕಾಣದೆ ಅವರೇ ಬರೆದ ಬರಹಗಳಲ್ಲಿ ಹುಡುಕಿಕೊಳ್ಳಿ’ ಎಂದು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಪ್ರಕಾಶ್ ಶೆಟ್ಟಿ ಹೇಳಿದರು. 


ಹಿರಿಯಡಕ ಸ.ಪ್ರ.ದ ಕಾಲೇಜಿನ ಕನ್ನಡ ವಿಭಾಗ ಹಾಗೂ ರಾಸೇಯೋ ಘಟಕಗಳು ಐಕ್ಯೂಎಸಿಯೊಂದಿಗೆ ಆಯೋಜಿಸಿದ ವಿವೇಕಾನಂದರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. 


ಬಡತನ ಮತ್ತು ಅವೈಚಾರಿಕತೆಗಳನ್ನು ಈ ದೇಶದ ಮೂಲ ಸಮಸ್ಯೆಯಾಗಿಯೇ ಕಂಡ ವಿವೇಕಾನಂದರು ಮೌಢ್ಯವನ್ನು ಬಿತ್ತುವ, ಮನುಷ್ಯರ ನಡುವೆ ಗೋಡೆಗಳನ್ನು ಕಟ್ಟುವ ರೋಗಿಷ್ಠಮನುಸ್ಸುಗಳ ವಿರುದ್ಧವಾಗಿಯೇ ಇದ್ದರೆಂಬುದನ್ನು ನಾವು ಮರೆಯಬಾರದು ಎಂಬ ಕಿವಿಮಾತನ್ನೂ ಹೇಳಿದರು.  


ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಆರಂಭವಾದ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಲಿತಿನ್ ಬಿ.ಎಮ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ರಕ್ಷಿತ್ ವಂದಿಸಿದರು. ರಾಸೇಯೋ ಯೋಜನಾಧಿಕಾರಿ ನಂದೀಶ್ ಕುಮಾರ್ ಕೆ.ಸಿ ನಿರೂಪಿಸಿದರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top