ಯಕ್ಷಗಾನೀಯ ಪರಂಪರೆಗೆ ಎಲ್ಲರ ಸಹಯೋಗ ಮುಖ್ಯ: ಡಾ. ಪಿ. ವಿ. ಶೆಣೈ

Upayuktha
0




ಮಂಗಳೂರು: ಮ್ಮ ಭಾರತೀಯ ಸಂಸ್ಕೃತಿಗಳನ್ನು ಯಕ್ಷಗಾನ ಪ್ರತಿಪಾದಿಸುತ್ತಿದೆ ದೈಹಿಕ ಶ್ರಮದ ಮೂಲಕ, ಅದರಲ್ಲಿನ ಲಾಸ್ಯದ ಮೂಲಕ, ನಾಟ್ಯದ ಮೂಲಕ ಭಿನ್ನಭಿನ್ನ ಪರಂಪರೆಯನ್ನು ಒಂದೇ ಸುತ್ತಿನಡಿ ತಂದು ಅದು ಬೆಳಗುತ್ತದೆ. 


ಶಿಕ್ಷಣದ ಪ್ರತಿಯೊಂದು ರೆಂಬೆಗಳೂ ತುಂಬಿಕೊಂಡಿರಬೇಕಾದರೆ ಈ ರೀತಿಯ ಸಾಂಸ್ಕೃತಿಕ ಪುನರುತ್ಥಾನ ಈ ವಿಶಿಷ್ಠ ಕಲೆಯಲ್ಲಿದೆ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಉದಿಸಿದ ನಮ್ಮ ನವಭಾರತ ಎಜ್ಯುಕೇಶನ್ ಸೊಸೈಟಿಯಲ್ಲಿ ಯಕ್ಷಗಾನ ಅಕಾಡೆಮಿಯನ್ನು ನಡೆಸುತ್ತಾ ಇದೀಗ ಹತ್ತರ ಸಂಭ್ರಮದಲ್ಲಿದೆ. 


ನಗರದ ಬೇರೆ ಬೇರೆ ಶಾಲೆಗಳಿಂದ ಇಲ್ಲಿ ಯಕ್ಷ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ನಾವು ಮುಕ್ತವಾಗಿ ಶಿಕ್ಷಣ ನೀಡುತ್ತಿದ್ದೇವೆ. ಈ ಪ್ರಕ್ರಿಯೆಗಾಗಿ ನಾವೆಲ್ಲರೂ ಕೈಜೋಡಿಸಿ ಸಹಯೋಗಿಗಳಾಗೋಣ - ಎಂದು ಡಾ. ಪಿ.ವಿ ಶೆಣೈ ನುಡಿದರು.

ಅವರು ನವ ಭಾರತ ಯಕ್ಷಗಾನ ಅಕಾಡೆಮಿಯ ದಶಮಾನೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸಂಘನಿಕೇತನದ "ಸುಜ್ಞಾನ" ಸಭಾಭವನದಲ್ಲಿ ಜರಗಿದ ನವ ಭಾರತ ಯಕ್ಷಗಾನ ಅಕಾಡೆಮಿಯ ದಶಮಾನೋತ್ಸವದ ಸಮಾರಂಭದಲ್ಲಿ ನುಡಿದರು.


ಮುಖ್ಯ ಅತಿಥಿಯಾಗಿ ಮಧೂಸೂದನ ಅಯಾರ್ ರವರು ನವ ಭಾರತ ಎಜ್ಯುಕೇಶನ್ ಸೊಸೈಟಿಯ ಸ್ಥಾಪನೆಯ ಉದ್ದೇಶ ಎಂದುಅ ದರ ಬೆಳವಣಿಗೆಗಳ ಬಗ್ಗೆ ಪ್ರಸಾವಿಸಿದರು. ಎಲ್ಲಾ ವರ್ಗಗಳವರನ್ನೂ ತಲುಪುವ ಸಿ.ಎ. ತರಗತಿಗಳು, ಯಕ್ಷಗಾನ, ವೇದಿಕ್ ಮ್ಯಾಥ್ಸ್. ಯೋಗ ಇತ್ಯಾದಿಗಳನ್ನು ಕಲಿಸುವ ವ್ಯವಸ್ಥೆ ಇದೆ. ಅದರಲ್ಲೂ ಯಕ್ಷಗಾನ ಅಕಾಡೆಮಿ ಕೂಡಾ ದಶಮಾನೋತ್ಸವ ವರ್ಷ ಆಚರಿಸುತ್ತಿರುವುದು ಹರ್ಷದ ವಿಚಾರ ಎಲ್ಲರನ್ನೂ ತಲಪಲಿ ಎಂಬುದೇ ಸೊಸೈಟಿಯ ಆಶಯ" ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಹೇಳಿದರು.


ರೊ// ಜೆ. ವಿ.ಶೆಟ್ಟಿ, ಸೊಸೈಟಿ ಸದಸ್ಯ RM ಬಸವರಾಜು, ಅಂತಾರಾಷ್ಟ್ರೀಯ ಈಜುಪಟು ನಾಗರಾಜ ಖಾರ್ವಿ, ಕಿರಣ್ ಕುಮಾರ್, ಕೋಡಿಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ  ನವ ಭಾರತ ಯಕ್ಷಗಾನ ಅಕಾಡೆಮಿಯ ಹಿರಿಯ ಸದಸ್ಯೆ, ಹಾಗೂ ಕಲಾವಿದೆ  ಸಾವಿತ್ರಿ ಎಸ್. ಮಲ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಭಾರತೀ ಪ್ರಮೋದ್‌ರವರು ವಾಚಿಸಿದರು. 


ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯರು ನಿರ್ವಹಿಸಿದರು. ದಿನೇಶ್ ಕುಮಾರ್ ರವರು ಧನ್ಯವಾದವಿತ್ತರು. ಬಳಿಕ ನವ ಭಾರತ ಯಕ್ಷಗಾನ ಅಕಾಡೆಮಿಯ ಶಿಕ್ಷಣಾರ್ಥಿ ವಿದ್ಯಾರ್ಥಿಗಳಿಂದ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಜರಗಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top