ಮಂಗಳೂರು; 9ನೇ ವಾರ್ಷಿಕ ಶಿಷ್ಯವೇತನ

Upayuktha
0

 



ಮಂಗಳೂರು: ಪ್ರಭು ಫ್ಯಾಮಿಲಿ ಚಾರಿಟಬಲ್ ಟ್ರಸ್ಟಿನ ಅಜಿತ್ ಪ್ರಭು ಫೌಂಡೇಷನ್ ಜಿ.ಎಸ್.ಬಿ. ಸ್ಕಾಲರ್ಶಿಪ್ ಲೀಗ್ ಜೊತೆಯಲ್ಲಿ ಇತ್ತೀಚೆಗೆ ಅವರ 9ನೇ ವಾರ್ಷಿಕ ಸ್ಕಾಲರ್ ಶಿಪ್ ಕಾರ್ಯಕ್ರಮವನ್ನು ಮಂಗಳೂರಿನ ಟಿ.ವಿ. ರಮಣ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಿದ್ದು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಿಷ್ಯವೇತನಗಳನ್ನು ವಿತರಿಸಿತು. 


ಈ ಶಿಷ್ಯವೇತನ ಮುಂಚೂಣಿಯ ಜಾಗತಿಕ ಉತ್ಪನ್ನ ಎಂಜಿನಿಯರಿಂಗ್ ಸೇವೆಗಳ ಕಂಪನಿ ಕ್ವೆಸ್ಟ್ ಗ್ಲೋಬಲ್ ಸಹ-ಸಂಸ್ಥಾಪಕ ಮತ್ತು ಸಿಇಒ  ಅಜಿತ್ ಪ್ರಭು ಅವರು ಪ್ರಾರಂಭಿಸಿದ್ದು ಅಸಾಧಾರಣ ವಿದ್ಯಾರ್ಥಿಗಳ ಆರ್ಥಿಕ ಹೊರೆಯನ್ನು ನಿವಾರಿಸುವ ಅವರಿಗೆ ಆರ್ಥಿಕ ಸಂಕಷ್ಟಗಳಿಲ್ಲದೆ ಅವರ ಶೈಕ್ಷಣಿಕ ಗುರಿಗಳನ್ನು ಸಾಧಿಸುವ ಅವಕಾಶ ಕಲ್ಪಿಸುತ್ತದೆ. 


ಜಿ.ಎಸ್.ಬಿ.ಎಲ್. ಚೇರ್ ಪರ್ಸನ್ ಗೀತಾ ಪೈ, ಶೈಕ್ಷಣಿಕ ವರ್ಷ ಮತ್ತು ಸ್ಕಾಲರ್ ಶಿಪ್ ಕಾರ್ಯಕ್ರಮದ 9ನೇ ಆವೃತ್ತಿಯ್ಲಿ 83 ವಿದ್ಯಾರ್ಥಿಗಳು ಅಜಿತ್ ಪ್ರಭು ಫೌಂಡೇಷನ್ ಮೂಲಕ ಶಿಷ್ಯವೇತನಗಳನ್ನು ಸ್ವೀಕರಿಸಿದರು. ಪ್ರಾರಂಭದಿಂದಲೂ 332 ವಿದ್ಯಾರ್ಥಿಗಳಿಗೆ ಒಟ್ಟು 754 ಶಿಷ್ಯವೇತನಗಳನ್ನು ನೀಡಿದೆ ಎಂದರು. ಕಾರ್ಯಕ್ರಮದಲ್ಲಿ ಪಿ.ಎಫ್.ಸಿ.ಟಿ. ಟ್ರಸ್ಟೀಗಳಾದ  ಪೂನಂ ಅಜಯ್ ಪ್ರಭು,  ಸುರೇಶ್ ವಿ , ಶಾಲಿನಿ ಅರವಿಂದ್ ಪ್ರಭು,ಅವಿನಾಶ್ ಗೀತಾ ಪೈ ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top