ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯದಲ್ಲಿ ಜೀವ ವಿಜ್ಞಾನ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ

Upayuktha
0


ಮಂಗಳೂರು: ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯ, ವಳಚ್ಚಿಲ್‍ನಲ್ಲಿ ಪ್ರಧಾನ ಮಂತ್ತಿ ಕೌಶಲ್ ವಿಕಾಸ್ ಯೋಜನೆ  (ಪಿಎಂಕೆವಿವೈ) 4.0 ಅಡಿಯಲ್ಲಿ ಔಷಧ ಮಾರಾಟ ಪ್ರತಿನಿಧಿಯಲ್ಲಿ (ಎಮ್.ಎಸ್.ಆರ್) ವಿಶೇಷವಾದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಯಿತು.


ಈ ಕಾರ್ಯಕ್ರಮವನ್ನು ಚಾನ್ಸೆಲರ್, ಶ್ರೀನಿವಾಸ್ ಯುನಿವರ್ಸಿಟಿ ಮತ್ತು ಎ.ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ. ಸಿಎ .ಎ ರಾಘವೇಂದ್ರರಾವ್ ಇವರು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕೌಶಲ್ಯ ಅಭಿವೃದ್ಧಿನ್ನು ಸಂಘಟಿಸುವ ಸಾಂಸ್ಥಿಕ ಬದ್ಧತೆ ಮತ್ತು ಶಿಕ್ಷಣದ ಗುಣಮಟ್ಟದ ಪರಿವರ್ತಕ ಶಕ್ತಿಯನ್ನು ಚರ್ಚಿಸುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದರು. 


ಮುಖ್ಯ ಅತಿಥಿಗಳಾಗಿ  ಟಿ.ಪಿ. ಸುಜಿತ್, ಡೆಪ್ಯುಟಿ ಡ್ರಗ್ಸ್ ಕಂಟ್ರೋಲರ್, ಕರ್ನಾಟಕ ಸರಕಾರ, ಇವರು ಆರೋಗ್ಯ ಪೂರೈಕೆದಾರರು ಮತ್ತು ರೋಗಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ನುರಿತ ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದೆ ಮತು ಔಷಧೀಯ ಕ್ಷೇತ್ರದಲ್ಲಿ ನಿರಂತರ ಕಲಿಕೆ ಮತ್ತು ವೃತಿಪರ ಬೆಳವಣಿಗೆಯ ಅಗತ್ಯವನ್ನು ಒತ್ತಿ ಹೇಳಿದರು. ಗೌರವಾನ್ವಿತ ಅತಿಥಿಗಳಾಗಿ ಡಾ. ಸಲೀಮುಲ್ಲಾ ಖಾನ್, ಸದಸ್ಯರು, ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯ, ಹೊಸ ದೆಹಲಿ, ಎಲ್‍ಎಸ್ ಎಸ್‍ಎಸ್‍ಡಿಸಿ, ಸಂಯೋಜಕರು, ಕರ್ನಾಟಕ, ಇವರು ಭಾರತ ಸರಕಾರದ ಯುವ ಪೀಳಿಗೆಗೆ ಜೀವನ ಕೌಶಲ್ಯ ತರಬೇತಿಯ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು. ಡಾ.ಎ.ಆರ್.ಶಬರಾಯ, ಪ್ರಾಂಶುಪಾಲರು ಶ್ರೀನಿವಾಸ ಫಾರ್ಮಸಿ ಕಾಲೇಜ್ ವಳಚ್ಚಿಲ್, ಮಂಗಳೂರು ಇವರು ಕಾರ್ಯಕ್ರಮ ಸಂಯೋಜಿಸಿದರು. ಡಾ.ಇ.ವಿ.ಎಸ್.ಸುಬ್ರಹ್ಮಣ್ಯಂ, ಪ್ರೊಫೆಸರ್, ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ ಇವರು ಅತಿಥಿಗಳನ್ನು ಸ್ವಾಗತಿಸಿದರು. ಪದ್ಮಾವತಿ ಪಿ.ಪ್ರಭು ಮತ್ತು ಅನ್ವಿತಾ ಡಿ.ಕೆ ಇವರು ಕಾರ್ಯಕ್ರಮ ನಿರೂಪಿಸಿದರು. ಡಾ. ಕೃಷ್ಣಾನಂದ ಕಾಮತ್, ಪ್ರೊಫೆಸರ್, ಹಾಗೂ ಕಾರ್ಯಕ್ರಮದ ಸಂಯೋಜಕರು ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯ ಇವರು ವಂದನಾರ್ಪಣೆಗೈದರು. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top