ಶ್ರೀನಿವಾಸ ಫಾರ್ಮಾ ಕಾಲೇಜಿನಲ್ಲಿ ಜೀವ ವಿಜ್ಞಾನ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ

Upayuktha
0


ಮಂಗಳೂರು: ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯ, ವಳಚ್ಚಿಲ್‍ನಲ್ಲಿ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ  (ಪಿಎಂಕೆವಿವೈ) 4.0 ಅಡಿಯಲ್ಲಿ ಔಷಧ ಮಾರಾಟ ಪ್ರತಿನಿಧಿಯಲ್ಲಿ (ಎಮ್.ಎಸ್.ಆರ್) ವಿಶೇಷವಾದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನುಜ.15 ರಿಂದ 28ರ ವರೆಗೆ ಆಯೋಜಿಸಲಾಗಿದೆ.


ಈ ಕಾರ್ಯಾಗಾರವು ಫಾರ್ಮಸಿ ಪದವೀಧರರಿಗೆ ಮತ್ತು ಔಷಧ ಮಾರಾಟ ಪ್ರತಿನಿಧಿಗಳಿಗೆ ಮುಕ್ತವಾಗಿದೆ. ಆಸಕ್ತ ಅಭ್ಯರ್ಥಿಗಳು ಬೇಗನೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಜ.15ರಂದು ಈ ಕಾರ್ಯಕ್ರಮವನ್ನು  ಟಿ.ಪಿ. ಸುಜಿತ್, ಡೆಪ್ಯುಟಿ ಡ್ರಗ್ಸ್ ಕಂಟ್ರೋಲರ್, ಕರ್ನಾಟಕ ಸರಕಾರ ಇವರು ಉದ್ಘಾಟಿಸಲಿರುವರು, ಗೌರವಾನ್ವಿತ ಅತಿಥಿಗಳಾಗಿ  ಬಿ. ಎನ್ ಬಾಬು, ಅಸಿಸ್ಟೆಂಟ್ ಡ್ರಗ್ಸ್ ಕಂಟ್ರೋಲರ್, ಮಂಗಳೂರು ಇವರು ಭಾಗವಹಿಸಲಿರುವರು.


ಈ ಕಾರ್ಯಾಗಾರವು ಔಷಧ ಮಾರಾಟ ಪ್ರತಿನಿಧಿಯಲ್ಲಿ ಇರಬೇಕಾದ ಕೌಶಲ್ಯದ ಬಗ್ಗೆ ಕೇಂದ್ರೀಕರಿಸುತ್ತದೆ. ಪಿಎಂಕೆವಿವೈ 4.0 ಮೂಲಕ ನಾವು ಕೌಶಲ್ಯದ ಅಂತರವನ್ನು ಕಡಿಮೆ ಮಾಡಲು ಮತ್ತು ಭಾರತ ರಾಷ್ಟ್ರವನ್ನು ಆತ್ಮ ನಿರ್ಭರ್ ಭಾರತ್ ಮಾಡುವ ಗುರಿಯನ್ನು ಹೊಂದಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಡಾ.ಎ.ಆರ್.ಶಬರಾಯ, ಪ್ರಾಂಶುಪಾಲರು ಶ್ರೀನಿವಾಸ ಫಾರ್ಮಸಿ ಕಾಲೇಜ್ ವಳಚ್ಚಿಲ್, ಮಂಗಳೂರು ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top