ಮಂಗಳೂರು: ತುಳು ಭಾಷಿಗರು ವಿಶ್ವದಾದ್ಯಂತ ಪಸರಿಸಿದ್ದಾರೆ. ಪರಸ್ಪರ ಭೇಟಿಯಾದಾಗ ಭಾಷಾ ಪ್ರೇಮವನ್ನು ಮೆರೆದು ಹರ್ಷಿಸುತ್ತಾರೆ. ಹೀಗೆ ಹೃದಯವನ್ನು ಬೆಸೆಯುವ ಭಾಷೆ ತುಳು ಆಗಿದೆ ಎಂಬುದೇ ನಮಗೆ ಹೆಮ್ಮೆ. ಕುಡ್ಲದ ತುಳುಕೂಟದಿಂದಾಗಿ ನಾವು ಮತ್ತೊಮ್ಮೆ ಒಂದಾಗುವ ಅವಕಾಶವೇ ಈ ಕೂಟದ ಸುವರ್ಣ ಮಹೋತ್ಸವ. ಇದನ್ನು ಯಶಸ್ವಿಗೊಳಿಸೋಣ" ಎಂದು ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿಯವರು ಹೇಳಿದರು.
ಅವರು ಹೋಟೆಲ್ ವುಡ್ ಸೈಡ್ ನ ಸಭಾಂಗಣದಲ್ಲಿ ಜರಗಿದ ತುಳು ಕೂಟ ಕುಡ್ಲದ ಬಂಗಾರ್ ಪರ್ಬದ ಸಮಾರೋಪ ಸಮಾರಂಭದ ವಿಶೇಷ ಸಭೆಯಲ್ಲಿ ಮಾತನಾಡಿದರು.
ತುಳು ಸಾಹಿತಿ ಮುದ್ದು ಮೂಡುಬೆಳ್ಳೆ, ರಾಜೇಶ್ ಆಳ್ವ ಬದಿಯಡ್ಕ, ಪಿ.ಎ. ಪೂಜಾರಿ ಸಲಹೆಗಳನ್ನಿತ್ತರು. ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದರ್ಶಿ ನಾಗೇಶ್ ದೇವಾಡಿಗ ಕದ್ರಿ ಪ್ರಾರ್ಥನೆ ನಡೆಸಿಕೊಟ್ಟರು.
ಉಪಾಧ್ಯಕ್ಷ ಪೆಲತ್ತಡಿ ಪದ್ಮನಾಭ ಕೋಟ್ಯಾನರು ಪ್ರಸ್ತಾವನೆಗೈದರು ಉಪಾಧ್ಯಕ್ಷ ರೊ. ಜೆ. ವಿ.ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿದರು. ಖಚಾಂಚಿ ಚಂದ್ರಶೇಖರ ಸುವರ್ಣರು ಧನ್ಯವಾದವಿತ್ತರು. ಕೂಟದ ಸದಸ್ಯ- ಸದಸ್ಯೆಯರು ಸಕಾಲಿಕ ಸಲಹೆಯಿತ್ತು ಸಮಾರಂಭದ ಯಶಸ್ಸಿಗಾಗಿ ಎಲ್ಲರೂ ಶ್ರಮವಹಿಸಲು ಸಿದ್ದ ಎಂದೂ ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ