ಟಿ.ಕೆ ರಾಮರಾವ್ ಎಂಬ ಹೆಸರು ಕೇಳಿದರೆ ತಕ್ಷಣ ಡಾ. ರಾಜ್ ಕುಮಾರ್ ನಟಿಸಿ, ಅದ್ಭುತ ಯಶಸ್ಸು ಗಳಿಸಿ ಸತತ ಎರಡು ವರ್ಷ ಇವರು ಬರೆದ ಕಾದಂಬರಿ "ಬಂಗಾರದ ಮನುಷ್ಯ" ಚಲನಚಿತ್ರ ಪ್ರದರ್ಶನವಾಗಿದ್ದು ದಾಖಲೆಯಾಯಿತು. ಅಂದಿನ ಕಾಲದ ಪ್ರಸಿದ್ಧ ಸಾಹಿತಿಗಳಾದ ತ.ರಾ.ಸು, ಅನಕೃ, ತ್ರಿವೇಣಿ, ಕೃಷ್ಣಮೂರ್ತಿ ಪುರಾಣಿಕ, ಟಿ.ಕೆ ರಾಮರಾವ್ ಅವರ ಕಾದಂಬರಿಗಳು ಚಲನಚಿತ್ರವಾಗಿ, ನಾಡಿನಲ್ಲಿ ಕನ್ನಡ ಸಂಸ್ಕೃತಿ ಪ್ರಚಾರವನ್ನು ಮಾಡಿದ ಅದ್ಭುತ ಕಾದಂಬರಿಗಳು.
ಟಿ ಕೆ ರಾಮರಾವ್ ಅವರು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಬ್ರಾಹ್ಮಣ ಮಾಧ್ವ ಕುಟುಂಬದಲ್ಲಿ, ಟಿ.ಕೃಷ್ಣಮೂರ್ತಿ ಮತ್ತು ನಾಗಮ್ಮ ದಂಪತಿಯ ಪುತ್ರನಾಗಿ ತಾ॥ 7-10-1929 ರಂದು ಜನಿಸಿದರು. ಇವರ ತಂದೆ ರೈಲ್ವೆ ಸ್ಟೇಷನ್ ಮಾಸ್ಟರ್ ಸೇವೆ ಸಲ್ಲಿಸಿದ್ದಾರೆ. ಟಿ.ಕೆ ರಾಮರಾವ್ ಅವರು 18 ವಷ೯ದ ವಯಸ್ಸಿನಲ್ಲಿ ತಮ್ಮ ತಂದೆಯವರನ್ನು ಕಳೆದುಕೊಂಡು ತಮ್ಮ ತಾಯಿ, ಆರು ಸಹೋದರ, ಸೋದರಿಯರನ್ನು ನೋಡಿಕೊಳ್ಳಲು ತಮ್ಮ ಶಿಕ್ಷಣ ಅಧ೯ಕ್ಕೆ ನಿಲ್ಲಿಸಿ ಚನ್ನಪಟ್ಟಣದಲ್ಲಿ ತಮ್ಮದೇ ಆದ ಟ್ಯುಟೋರಿಯಲ್ ಅನ್ನು ಮತ್ತು ಬರವಣಿಗೆ ಮುಂದುವರೆಸಿದರು. ತಮ್ಮ ಕುಟುಂಬದ ಜವಾಬ್ದಾರಿ ಹೊತ್ತು, ಒಂದು ಔಷಧಾಲಯವನ್ನು ಸಹ ಪ್ರಾರಂಭಿಸಿದರು.
ಇವರ ಅನೇಕ ಕಾದಂಬರಿಗಳು ಚಲನಚಿತ್ರವಾಗಿ ಮತ್ತು ದೂರದರ್ಶನಕ್ಕೆ ಅಳವಡಿಸಿ, ಜನ ಮೆಚ್ಚುಗೆಗೆ ಪಾತ್ರವಾಗಿವೆ. ಬಂಗಾರದ ಮನುಷ್ಯ, ಮರಳು ಸರಪಣಿ, ಕಹಳೆ ಬಂಡೆ, ಮಣ್ಣಿನ ದೋಣಿ, ಜಗದೇವರಾಯ, ಕೋವಿಕುಂಚ, ತ್ರಿಕೋಣದ ಮನೆ, ಕೆಂಪು ಮಣ್ಣು, ಗೋಳದ ಮೇಲೊಂದು ಸುತ್ತು, ಮುಂತಾದವು ಬರೆದ ಪ್ರಖ್ಯಾತ ಸಾಹಿತಿ. ಅನೇಕ ವಾರಪತ್ರಿಕೆಯಲ್ಲಿ ಇವರ ಕಾದಂಬರಿಗಳು, ಕಥೆ ಸತತ ಧಾರಾವಾಹಿಗಳಾಗಿ ಪ್ರಕಟವಾಗಿ ಜನರು ಮೆಚ್ಚಿ ಸಾಹಿತ್ಯಕ್ಕೆ ಒಂದು ಹೊಸ ರೂಪವನ್ನು ನೀಡಿದ ಮಹನೀಯರು.
ವ್ಯಕ್ತಿ ವಿಷಯಗಳು, ಪ್ರವಾಸ ಕಥೆಗಳು, ಮಕ್ಕಳ ಸಾಹಿತ್ಯ ಬರೆದು ಮನೆ ಮಾತಾದ ಮಹಾನುಭಾವರು. ಮಕ್ಕಳ ಸಾಹಿತ್ಯದಲ್ಲಿ ಶ್ಯಾಮಪ್ರಸಾದ್ ಮುಖರ್ಜಿ, ಲಾಲಾ ಲಜಪತರಾಯ್, ಜೆ ಎನ್ ಟಾಟಾ,ಸ್ವಾಮಿ ವಿವೇಕಾನಂದರು, ಟಿ.ವಿ ಸುಂದರಂ, ಅಯ್ಯಂಗಾರ್ ಮುಂತಾದವರ ಬಗ್ಗೆ ಸಾಹಿತ್ಯ ರಚಿಸಿ, ಮಕ್ಕಳ ಸಾಹಿತ್ಯ ರಚನೆ ಮಾಡಿದರು. ಕಥಾ ಸಂಕಲನಗಳಲ್ಲಿ, ಉಬ್ಬರವಿಳಿತ, ಎತ್ತರದ ಮನೆಯವರು, ಬೆಂಕಿಗೂಡು ಪ್ರಸಿದ್ಧ ಸಂಕಲನಗಳು. ಪತ್ತೇದಾರಿ ಕಾದಂಬರಿ ಬರೆದು ಥ್ರಿಲ್ಲರ್ ಕಾದಂಬರಿಗಳಾಗಿ, ಮೊದಲ ಕರ್ನಾಟಕದ ಥ್ರಿಲ್ಲರ್ ಕಾದಂಬರಿಕಾರರೆನಿಸಿದರು. ಇವರ ಕಾದಂಬರಿಯ ವಸ್ತು ಬಂದು ಸಸ್ಪೆನ್ಸ್, ಥ್ರಿಲ್ಲರ್, ಸಾಮಾಜಿಕ ವಿಷಯ ಪ್ರತಿಕ್ರಮದ ಛಾಯೆ ಹೊಂದಿದ್ದವು.
ಟಿ.ಕೆ ರಾಮರಾವ್ ಅವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಪ್ರಮುಖವಾಗಿ ಕನಾ೯ಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಮದ್ರಾಸ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಲಭಿಸಿವೆ. ದುರಂತವೆಂದರೆ ಮದ್ರಾಸ್‌ನಿಂದ ಪ್ರಶಸ್ತಿ ಸ್ವೀಕರಿಸಿ ವಾಪಸ್ ಬರುವಾಗ ಹೃದಯಾಘಾತ ಸಂಭವಿಸಿ ತಮ್ಮ 59ನೇ ವಯಸ್ಸಿನಲ್ಲಿ ನಿಧನರಾಗಿ ನಾಡು ಅಪರೂಪದ ಸಾಹಿತಿಯನ್ನು ಕಳೆದುಕೊಂಡಿತು. ಇವರ ಹತ್ತು ಕಾದಂಬರಿಗಳು ಸಿನೇಮಾ ಪ್ರದರ್ಶನಗೊಂಡು ಅದ್ಭುತ ಯಶಸ್ಸು ಗಳಿಸಿ ನಾಡಿಗೆ ಕೀರ್ತಿ ತಂದಿವೆ.
ಟಿ.ಕೆ ರಾಮರಾವ್ ಅವರು ಗ್ರೀಸ್, ಸ್ವಿಜರ್ಲೆಂಡ್, ಫ್ರಾನ್ಸ್, ಇಂಗ್ಲೆಂಡ್, ಅಮೆರಿಕಾ, ಕೆನಡಾ, ಜಪಾನ್, ಹಾಂಕಾಂಗ್, ಥಾಯ್ಲೆಂಡ್, ಸಿಂಗಪುರ, ಶ್ರೀಲಂಕಾ ಮುಂತಾದ ದೇಶಗಳನ್ನು ಸುತ್ತಿ ತಮ್ಮ ಪ್ರವಾಸದ ಅನುಭವದ "ಗೋಳದ ಮೇಲೊಂದು ಸುತ್ತು" ಪ್ರವಾಸ ಕಥನ ರಚಿಸಿದರು. ಇವರ ಈ ಪ್ರವಾಸ ಕಥನ ನಾಲ್ಕು ಮುದ್ರಣ ಕಂಡು ಜನ ಮೆಚ್ಚುಗೆಗೆ ಪಾತ್ರವಾದ ಕೃತಿ.
ಧಾರವಾಡದಲ್ಲಿ 1985 ರಲ್ಲಿ ಜರುಗಿದ ಕರ್ನಾಟಕ ರಾಜ್ಯದ ಮೊದಲ ಪ್ರಥಮ ಪತ್ತೇದಾರಿ ಲೇಖಕರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಡೆಸಿದ ಮಹಾನುಭಾವರು. 1984ರಂದು ಇವರನ್ನು ಕರ್ನಾಟಕ ಸರ್ಕಾರ, ಸಾಹಿತ್ಯ ಅಕಾಡೆಮಿ ಸದಸ್ಯರನ್ನಾಗಿ ನೇಮಿಸಿತ್ತು. ಇವರ ಕಾದಂಬರಿ ಬಂಗಾರದ ಮನುಷ್ಯ ತೆಲುಗು ಭಾಷೆಯಲ್ಲಿ ಚಲನಚಿತ್ರವಾಗಿ ದೇವುಡುಲಾಂಟಿ ಮನಿಷಿ ಶತದಿನೋತ್ಸವ ಆಚರಿಸಿ ಆಂಧ್ರದಲ್ಲಿ ಅದ್ಭುತ ಯಶಸ್ಸು ಕಂಡ ಚಿತ್ರ.
ಬಂಗಾರು ಮನಿಷಿ ಎಂಬ ತೆಲುಗು ಕಾದಂಬರಿ ಸಹ ಅನುವಾದಗೊಂಡು ಜನ ಮನ್ನಣೆಗೆ ಪಾತ್ರವಾಯಿತು. 47 ಕಾದಂಬರಿಗಳು, 12 ಪ್ರಸಿದ್ಧ ಕಥಾ ಸಂಕಲನಗಳು, ಒಂದು ಪ್ರವಾಸ ಕಥನ, 5 ಮಕ್ಕಳ ಸಾಹಿತ್ಯ, ಇವರಿಂದ ಪ್ರಕಟಗೊಂಡ ಪ್ರಸಿದ್ಧ ಕೃತಿಗಳು.
ಕನ್ನಡ ನಾಡಿನ ಪ್ರಸಿದ್ಧ ಕಾದಂಬರಿಕಾರರಾಗಿ, ಕಥೆಗಾರರಾಗಿ, ನಾಟಕಕಾರರಾಗಿ, ಸಂಪಾದಕ ಮತ್ತು ವಿಮರ್ಶಕರಾಗಿ, ಪತ್ತೇದಾರಿ ಕೃತಿಗಳ ಲೇಖಕರಾಗಿ, ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದು ಬೆಂಗಳೂರಿನಲ್ಲಿ ತಾ॥ 10-11-1988 ರಂದು ನಿಧನರಾದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ