ಕರ್ಣಾಟಕ ಬ್ಯಾಂಕ್ ಚಿತ್ರಪಾಡಿ ಶಾಖೆ 53ನೇ ವಾರ್ಷಿಕೋತ್ಸವ

Chandrashekhara Kulamarva
0




ಕುಂದಾಪುರ: ಕರ್ಣಾಟಕ ಬ್ಯಾಂಕಿನ ಚಿತ್ರಪಾಡಿ- ಸಾಲಿಗ್ರಾಮ ಶಾಖೆಯ 53ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಬ್ಯಾಂಕಿನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಸಾಲಿಗ್ರಾಮ ದೇವಸ್ಥಾನದ ಅಧ್ಯಕ್ಷ ಡಾ. ಕೆ. ಎಸ್ ಕಾರಂತರು ಬ್ಯಾಂಕಿನ ಪ್ರಗತಿಯನ್ನು ಶ್ಲಾಘಿಸಿದರು. ಇನ್ನಷ್ಟು ಪ್ರಗತಿ ಸಾಧಿಸಲು ನಾವೆಲ್ಲಾ ಪ್ರಯತ್ನಿಸೋಣ ಎಂದು ತಿಳಿಸಿದರು.


ಸಮಾರಂಭದ ಅಧ್ಯಕ್ಷತೆ ವಾದಿರಾಜ್ ಕೆ. (ಎಜಿಎಂ) ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿಷ್ಣುಮೂರ್ತಿ ಉಪಾಧ್ಯರು ಉಪಸ್ಥಿತರಿದ್ದರು. ಚಂದ್ರಶೇಖರ  ಕಾರಂತ, ಚಂದ್ರಶೇಖರ ಸೋಮಯಾಜಿ, ನಿವೃತ್ತ ಡಿಜಿಎಂ ಆನಂದರಾಮ ಅಡಿಗ, ಬೈಕಾಡಿ ಸೂರ್ಯನಾರಾಯಣ ರಾವ್, ಇವರುಗಳು ಬ್ಯಾಂಕಿನ ಬೆಳವಣಿಗೆ ಇತ್ಯಾದಿ ವಿಷಯ ಮಾತಾಡಿದರು. ಇದೇ ಸಮಾರಂಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೆ. ತಾರಾನಾಥ ಹೊಳ್ಳ ಇವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.


ಬ್ಯಾಂಕಿನ ವ್ಯವಸ್ಥಾಪಕ ಅವಿನಾಶ್ ಸ್ವಾಗತಿಸಿದರು. ಶ್ರೀಮತಿ ರಶ್ಮಿಯವರು ವಂದಿಸಿದರು. ವಿನಯ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಾರ್ವಜನಿಕರು, ಬ್ಯಾಂಕಿನ ಸಿಬ್ಬಂದಿಯವರು, ಗ್ರಾಹಕರು ಎಲ್ಲರೂ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top