ಸ.ಪ್ರ.ದ. ಕಾಲೇಜು ಪುಂಜಾಲಕಟ್ಟೆ ಎನ್ನೆಸ್ಸೆಸ್ ವಾರ್ಷಿಕ ಶಿಬಿರ ಇಂದಿನಿಂದ

Chandrashekhara Kulamarva
0


ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1&2 ಮತ್ತು ಗ್ರಾಮ ಪಂಚಾಯಿತಿ ಇರ್ವತ್ತೂರು ಹಾಗೂ ಇತರ ಸಂಘ-ಸಂಸ್ಥೆಗಳ ಸಹಕಾರದಿಂದ ದಿನಾಂಕ ಜ.25ರಿಂದ 30ರ ವರೆಗೆ ದ.ಕ. ಜಿ.ಉ.ಹಿ. ಪ್ರಾಥಮಿಕ ಶಾಲೆ ಮೂಡುಪಡುಕೋಡಿಯಲ್ಲಿ ಎನ್‌ಎಸ್‌ಎಸ್ ಕ್ಯಾಂಪ್ ಆಯೋಜಿಸಲಾಗಿದೆ.


ಇಂದು ಅಪರಾಹ್ನ 3 ಗಂಟೆಗೆ ಬಂಟ್ವಾಳದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶಿಬಿರದ ಉದ್ಘಾಟನಾ ನೆರವೇರಿಸಲಿದ್ದಾರೆ. ಶಿಬಿರದಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ಹೊಂದಿದ್ದು, ಶಿಬಿರದ ಉದ್ದಕ್ಕೂ ಪ್ರತಿದಿನ ಮಧ್ಯಾಹ್ನ 3:00 ಗಂಟೆಗೆ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ನಡೆಯಲಿವೆ.


ಕೊನೆಯ ದಿನವಾದ ಜ. 30ರಂದು ಸಮಾರೋಪ ಸಮಾರಂಭವಿದ್ದು, ವಿಶೇಷ ಅಭ್ಯಾಗತರಾಗಿ ಬೆಳ್ತಂಗಡಿ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಪೂಂಜ ಇವರು ಆಗಮಿಸಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top