ನಿಟ್ಟೆ: ಎಂಸಿಎ ವಿಭಾಗದ ಬೋಧಕ ಅಭಿವೃದ್ಧಿ ಕಾರ್ಯಕ್ರಮ

Upayuktha
0




ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗವು ಜ.6 ರಿಂದ 10 ರವರೆಗೆ 'ಕರೆಂಟ್ ಅಡ್ವಾನ್ಸಸ್ ಇನ್ ಸಾಫ್ಟ್‌ವೇರ್ ಟೆಸ್ಟಿಂಗ್ & ದಿ ಎಪ್ಲಿಕೇಬಲ್ ಟೂಲ್ಸ್ & ಮೆಥಡಾಲಜೀಸ್' ಎಂಬ ವಿಷಯದ ಕುರಿತು ಐದು ದಿನಗಳ ಬೋಧಕ ಅಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.


ಐಟಿ ಉದ್ಯಮದಲ್ಲಿ ವಿವಿಧ ಹುದ್ದೆಯಲ್ಲಿ 18 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ಬೆಂಗಳೂರಿನ ನುಮೋಸಿಟಿಯ ಆರ್ & ಡಿ ಉಪಾಧ್ಯಕ್ಷ ಸಂತೋಷ್ ಎನ್. ಅವರು ಮುಖ್ಯ ಅತಿಥಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.


ಸಂತೋಷ್ ಎನ್., ತಮ್ಮ ಪ್ರಮುಖ ಟಿಪ್ಪಣಿ ಭಾಷಣದಲ್ಲಿ ಸಾಫ್ಟ್ವೇರ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸುವ ಅಗತ್ಯವನ್ನು ವಿವರಿಸಿದರು ಮತ್ತು ಸಾಫ್ಟ್‌ವೇರ್ ಡೆವಲಪರ್ ಗಳು ಮತ್ತು ಪರೀಕ್ಷಾ ವೃತ್ತಿಪರರು ಸಾಫ್ಟ್‌ವೇರ್ ಪರೀಕ್ಷಾ ಪ್ರಕ್ರಿಯೆಯ ಜ್ಞಾನವನ್ನು ಹೊಂದಿರಬೇಕು ಎಂದು ಪುನರುಚ್ಚರಿಸಿದರು. 


ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಚಿಪ್ಲುಂಕರ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಈ ಬೋಧಕ ಅಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಎಂಸಿಎ ವಿಭಾಗವು ಕೈಗೊಂಡ ಉಪಕ್ರಮ ಮತ್ತು ವಿದ್ಯಾರ್ಥಿಗಳು ಸಾಫ್ಟ್‌ವೇರ್ ಟೆಸ್ಟಿಂಗ್ ಬಗ್ಗೆ ಜ್ಞಾನವನ್ನು ಹೊಂದಿರುವುದು ಮುಖ್ಯ ಎಂದು ವಿವರಿಸಿದರು.


ಎಂಸಿಎ ವಿಭಾಗದ ಮುಖ್ಯಸ್ಥೆ ಡಾ.ಮಮತಾ ಬಲಿಪ ಸ್ವಾಗತಿಸಿ, ಸಾಫ್ಟ್ ವೇರ್ ಟೆಸ್ಟಿಂಗ್ ಮಹತ್ವವನ್ನು ವಿವರಿಸಿದರು. ಎಂಸಿಎ ವಿಭಾಗದ ಸಹಪ್ರಾಧ್ಯಾಪಕಿ ಹಾಗೂ ಎಫ್ ಡಿಪಿ ಸಂಯೋಜಕಿ ಡಾ.ಪಲ್ಲವಿ ಶೆಟ್ಟಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. 


ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಎಫ್ ಡಿಪಿ ಸಂಯೋಜಕ ಅರ್ಹತ್ ಕುಮಾರ್ ವಂದಿಸಿದರು. ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೀಮಿತಾ ಕಾಮತ್ ಸಮಾರಂಭದ ನಿರೂಪಣೆಗೈದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top