ಕಂಬಾರು ಕ್ಷೇತ್ರ ಬ್ರಹ್ಮಕಲಶೋತ್ಸವ: ಹಸಿರುವಾಣಿ ಹೊರೆ ಕಾಣಿಕೆ ಶೋಭಾಯಾತ್ರೆ

Upayuktha
0


ಪೆರ್ಮುದೆ: ಕಂಬಾರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕುಂಭಾಭಿಷೇಕ ಹಾಗೂ ಜಟಾಧಾರಿ ಪರಿವಾರ ಸಾನಿಧ್ಯಗಳ ಪುನಃ ಪ್ರತಿಷ್ಠೆ ಕಾರ್ಯಕ್ರಮಗಳ ಅಂಗವಾಗಿ ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಿಂದ ಮಂಗಳವಾರ ಅಪರಾಹ್ನ ಬೃಹತ್ ಹಸಿರುವಾಣಿ ಹೊರೆ ಕಾಣಿಕೆ ಜರಗಿತು.


ಕುಡಾಲು- ಬಾಡೂರು ಎರಡೂ ಗ್ರಾಮಸ್ಥರ ಹಾಗೂ ಸಂಘ ಸಂಸ್ಥೆ ಸಮಿತಿಗಳ ನೇತೃತ್ವದಲ್ಲಿ ಸಾಗರೋಪಾದಿಯಾಗಿ ಸಾಗಿ ಬಂದ ಮೆರವಣಿಗೆಯಲ್ಲಿ ಸಿಂಗಾರಿ ಮೇಳ, ಮುತ್ತು ಕೊಡೆ, ಸಮವಸ್ತ್ರಧರಿಸಿದ ಮಹಿಳೆಯರು ಹಾಗೂ ವಾಹನಗಳಲ್ಲಿ ಸುವಸ್ತು ಸಾಮಾಗ್ರಿಗಳು ಸಾಗಿ ಬಂದವು. ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಪ್ರಾರ್ಥನ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕ್ಷೇತ್ರ ಆಡಳಿತ ಸಮಿತಿ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಮೆರವಣಿಗೆಗೆ ನೇತೃತ್ವವಹಿಸಿದ್ದರು. 


ಸೌಹಾರ್ದತೆಯೊಂದಿಗೆ ಜತೆಗೂಡಿದ ಪೆರ್ಮುದೆ ಚರ್ಚ್ ಹಸಿರುವಾಣಿ 

ಪೆರ್ಮುದೆ ಭಜನಾ ಮಂದಿರದಿಂದ ಹೊರಟ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಯು ಪೆರ್ಮುದೆ ಪೇಟೆ ದಾಟಿ ಸಂತ ಲಾರೆನ್ಸರ ಚರ್ಚ್ ನ‌ ಮುಂಭಾಗಕ್ಕೆ ಆಗಮಿಸಿದಾಗ ಚರ್ಚ್ ಧರ್ಮಗುರುಗಳು ಪದಾಧಿಕಾರಿಗಳ ಸಹಿತ ಉಪಸ್ಥಿತರಿದ್ದು ಇಗರ್ಜಿಯ ವತಿಯಿಂದ ಹೊರೆ ಕಾಣಿಕೆಯ ಸಾಮಾಗ್ರಿಗಳನ್ನು ಕಳುಹಿಸಿ ಸೌಹರ್ದತೆಯ ಸಂದೇಶಕ್ಕೆ ಸಾಕ್ಷಿಯಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top