ಹಸುಗಳ ಕೆಚ್ಚಲು ಕೊಯ್ದ ಜಿಹಾದಿಗಳನ್ನು ಕೂಡಲೇ ಬಂಧಿಸಿ: ಹಿಂದೂ ಜನಜಾಗೃತಿ ಸಮಿತಿ

Upayuktha
0



ಬೆಂಗಳೂರು: ಚಾಮರಾಜಪೇಟೆಯಲ್ಲಿ ಜಿಹಾದಿಗಳು ರಾತ್ರೋರಾತ್ರಿ ಮಲಗಿದ್ದ ಹಸುಗಳ ಕೆಚ್ಚಲನ್ನು ಕೊಯ್ಯುವ ಕುಕೃತ್ಯ ಎಸಗಿದ್ದಾರೆ. ಇದೊಂದು ಭಯೋತ್ಪಾದನೆ ಕೃತ್ಯವೇ ಆಗಿದೆ. ಇದನ್ನು ಸಂಪೂರ್ಣ ಹಿಂದೂ ಸಮಾಜ ಖಂಡಿಸುತ್ತದೆ ಎಂದು  ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಹೇಳಿದ್ದಾರೆ.

ಗೋವಿಗೆ ಭಾರತದಲ್ಲಿ ಪೂಜನೀಯ ಸ್ಥಾನ ನೀಡಲಾಗಿದೆ. ಸಂಪೂರ್ಣ ಹಿಂದೂ ಸಮಾಜವು ಗೋವನ್ನು ಮಾತೆಯ ರೂಪದಲ್ಲಿ ನಿತ್ಯ ಪೂಜಿಸುತ್ತಾರೆ. ಹೀಗಿರುವಾಗ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತರಲೆಂದೇ ಇಂತಹ ಅಮಾನುಷ ಕೃತ್ಯ ನಡೆಸಲಾಗಿದೆ.   ಸೆಕ್ಯುಲರ್ ಹೇಳಿಕೊಳ್ಳುವ ರಾಜ್ಯ ಕಾಂಗ್ರಸ್ ಆಡಳಿತದಲ್ಲಿ ನಿರಂತರವಾಗಿ ಹಿಂದೂ  ಸಮಾಜದ ಮೇಲೆ ಈ ರೀತಿಯ ಆಘಾತಗಳು ನಡೆಯುತ್ತಿವೆ. ಪ್ರಾಣಿಗಳ ಮೇಲೆ ಹಲ್ಲೆಯಾದಾಗ ಕೂಡಲೇ ಬೊಬ್ಬೆ ಹಾಕುವ PETA (ಪ್ರಾಣಿ ದಯಾ ಸಂಘ) ಈ ಘಟನೆಯ ಬಗ್ಗೆ ಮೌನವಹಿಸಿದೆ, ಇದೊಂದು ದುರ್ದೈವದ ಸಂಗತಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಹಿಂದೂ ಸಮಾಜವು ಇನ್ನು ಇಂತಹ ದಾಳಿಗಳನ್ನು ನೋಡಿ ಸುಮ್ಮನೆ ಕೂರುವುದಿಲ್ಲ. ರಾಜ್ಯ ಸರಕಾರವು ಕೂಡಲೇ ಜಿಹಾದಿಗಳ ಬಂಧನ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ..




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top