ಪರಿಸರ ಸಂರಕ್ಷಣೆ, ಆದಾಯ ಗಳಿಕೆಯಲ್ಲಿ ಜೇನು ಸಾಕಾಣಿಕೆ ಮಹತ್ವ

Upayuktha
0


ಲೆನಾಡು ಪ್ರಸಿದ್ಧ ಜೇನು ಕೃಷಿಕ ಮಾರುತಿ ಇವರು ಕಾನಗೋಡ ಗ್ರಾಮದವರು. ಕೆಎಸ್ಸಾರ್ಟಿಸಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಕೆಲಸದಿಂದ ನಿವೃತ್ತರಾಗಿ ಜೇನು ಕೃಷಿ ಆರಂಭಿಸಿದರು. 10 ವರ್ಷದ ಅನುಭವವಿದೆ. ಇವರಿಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಜೇನು ದುಂಬಿಗಳು ಮಾನವ ಸಮುದಾಯಕ್ಕೆ ಸಹಕಾರ ಜೀವಿಗಳು ಸಾವಿರಾರು ವರ್ಷಗಳಿಂದಲೂ ಜೇನು ಕೃಷಿಯನ್ನು ರೈತರು ಉಪಕಸುಬಾಗಿ ಮಾಡಿಕೊಂಡಿದರು. ಜೇನಿಂದ ನಮಗೆ ಔಷಧಿ ರೂಪದ ಜೇನುತುಪ್ಪ, ಪರಾಗ, ಜೇನುಮೇಣ ಸಿಗುತ್ತದೆ.


ಜೇನು ತುಪ್ಪ ಬಾಲ್ಯದ ಮಗುವಿನಿಂದ ಹಿಡಿದು ವಯಸ್ಸಾದವರಿಗೂ ಆರೋಗ್ಯಕರ. ಆಯುರ್ವೇದದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಜೇನು ದುಂಬಿಗಳಿಂದ ಹೂಗಳಲ್ಲಿ ಪರಾಗ ಸ್ಪರ್ಶಕ್ರಿಯೆ ಇದೊಂದು ದೈವದತ್ತ ಕೊಡುಗೆ ಆಗಿದೆ. ಜೇನುಗಾರಿಕೆ, ತೋಟಗಾರಿಕೆ ಕೃಷಿ ಇಲಾಖೆ ಅರಣ್ಯ ಬೆಳೆಗಳ ಇಳುವರಿಯಲ್ಲಿ ಗಣನೀಯ ಪಾತ್ರವಹಿಸುತ್ತದೆ. ಜೇನು ಕೃಷಿಯನ್ನು ಕೃಷಿಕರು ಅತಿ ಸಣ್ಣ ರೈತರು ಮಹಿಳೆಯರು ವಯಸ್ಸಾದವರು ನೌಕರರು ಬಿಡುವಿನ ವೇಳೆಯಲ್ಲಿ ಕೈಗೊಳ್ಳಬಹುದು.


ಒಂದು ಜೇನು ಕುಟುಂಬದಲ್ಲಿ 20,000 ಮೇಲ್ಪಟ್ಟು ಜೇನು ದುಂಬಿಗಳಿರುತ್ತವೆ. ‍ಸದರಿ ಜೇನು ದುಂಬಿಗಳು ತಮ್ಮ ಗೂಡಿನಿಂದ 3 ಕಿ ಮೀ ಸುತ್ತ ಬೆಳೆದ ಬೆಳೆಗಳಿಗೆ ಪರಾಗ ಸ್ಪರ್ಶಮಾಡಿ ಪರಾಗ ಸಂಗ್ರಹಿಸಿಕೊಂಡು ತಮ್ಮ ಗೂಡಿಗೆ ಮರಳಿ ಬರುತ್ತವೆ. ಜೇನು ಕೃಷಿಯು ಇದೊಂದು ಸಮಾಜ ಸೇವೆಯಲ್ಲಿ ಮತ್ತು ಸಾವಯವ ಕೃಷಿಯ ಅವಿಭಾಜ್ಯ ಅಂಗವಾಗಿದೆ.


ಜೇನು ತುಪ್ಪವನ್ನು ನಾವು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಒಂದು ಚಮಚ ಜೇನು ತುಪ್ಪ ಶೇಖರಣೆಗೆ ನೂರಾರು ಹೂಗಳಿಂದ ಜೇನು ಹುಳುಗಳು ಜೇನು ಸಂಗ್ರಹಿಸಬೇಕಾಗುತ್ತದೆ. ಜೇನು ಹುಳುಗಳ ಶ್ರಮದಿಂದ ಮನುಷ್ಯನು ಜೇನು ತುಪ್ಪ ಸವಿಯುತ್ತಿದ್ದಾನೆ. ಪರಿಸರ ವ್ಯವಸ್ಥೆ ಸಮತೋಲನವಾಗಿರಲು ಜೇನು ಹುಳುಗಳು ಅತ್ಯವಶ್ಯಕ. ಹೆಜ್ಜೇನು, ಕೋಲಜೇನು, ಮಲಿಫೆರಾ, ತುಡುವೆ, ಮಿಶ್ರೀಜೇನು ಎಂಬ ವಿವಿಧ ತಳಿಯ ಜೇನು ಹುಳುಗಳಿವೆ. ಜೇನಿನ ಸಂತತಿ ಅಭಿವೃದ್ದಿ ಪಡಿಸೋಣ. ನಾಡಿನ ಬೆಳೆಗಳ ಇಳುವರಿ ಹೆಚ್ಚಿಸೋಣ.



- ಮಂಜುಳಾ ಪ್ರಕಾಶ್


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top