ಕೂಡಿ ಬಾಳಿದರೆ ಸ್ವರ್ಗ ಸುಖ

Upayuktha
0


ಮ್ಮ ಭಾರತೀಯ ಸಮಾಜದಲ್ಲಿ ಕುಟುಂಬ ವ್ಯವಸ್ಥೆಯು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಅವಿಭಕ್ತ ಕುಟುಂಬ ಮತ್ತು ವಿಭಕ್ತ ಕುಟುಂಬ ನಾವು ಚಿಕ್ಕದಿಂದಲೇ ಕಂಡು ಬಂದಂತಹ ಎರಡು ಪ್ರಮುಖ ಕುಟುಂಬ ವ್ಯವಸ್ಥೆ. ಆದರೆ ಅದಕ್ಕಿಂತಲೂ ಮುಂದೆ ಹೋಗಿ ಇಂದು ನಾವು ಸಮಾಜದಲ್ಲಿ ಬೇರೆ ಬೇರೆ ತರಹದ ಜೀವ  ನಡೆಸುವವರನ್ನು ನೋಡುತ್ತಿದ್ದೇವೆ. ಅದು ಏನೇ ಇದ್ದರೂ ಎಲ್ಲವೂ ಅವರವರ ಆಯ್ಕೆಗೆ ಒಳಗಾಗಿರುತ್ತವೆ. ಅವೆಲ್ಲದಕ್ಕೂ ಅದರದೇ ಆದ ಗೌರವಗಳಿರುತ್ತದೆ.


ಅಂತೆಯೇ ನನ್ನದು ಒಂದು ಅವಿಭಕ್ತ ಕುಟುಂಬ. ಬಾಲ್ಯದಿಂದಲೇ ನನ್ನ ಅಜ್ಜ, ಅಜ್ಜಿ,ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ, ಅತ್ತೆ, ಮಾವ, ಸಹೋದರ ಸಹೋದರಿಯರ ಒಡನಾಟದಿಂದ ಬೆಳೆದವಳು ನಾನು. ಜೀವನದಲ್ಲಿ ಅವಿಭಕ್ತ ಕುಟುಂಬದ ಪ್ರಾಮುಖ್ಯತೆಯನ್ನು ಅತಿ ಚೆನ್ನಾಗಿ ಅರಿತವಳು ನಾನು. ನನ್ನ ಅಪ್ಪ ಅಮ್ಮನಷ್ಟೇ ಪ್ರೀತಿ ವಾತ್ಸಲ್ಯವನ್ನು ನೀಡಿ ಬೆಳೆಸಿದವರು ನನ್ನ ಕುಟುಂಬದವರು. ಒಂದು ಮನೆಯಲ್ಲಿ ಕೂಡು  ಕುಟುಂಬದ ವ್ಯವಸ್ಥೆ ಇದ್ದರೆ ಅಲ್ಲಿ ಒಬ್ಬರಿಂದ ಒಬ್ಬರು ಸಹಾಯಕ್ಕೆ ಬರುತ್ತಾರೆ. ಕಷ್ಟ ಬಂದಾಗ ಮತ್ತೊಬ್ಬರು ಜೊತೆಯಲ್ಲಿ ಇರುತ್ತಾರೆ. ಅನಾರೋಗ್ಯದ ಸಂದರ್ಭದಲ್ಲಿ ಅಂತೂ ಮನೆ ಮಂದಿಯಲ್ಲ ಆರೈಕೆಯಲ್ಲಿ ತೊಡಗುತ್ತಾರೆ. ಅದಕ್ಕಿಂತಲೂ, ಹೆಚ್ಚಾಗಿ ತಮ್ಮ ಮನೆಯವರು ಎಂದು ಬಂದಾಗ ಎಲ್ಲರೂ ಒಗ್ಗಟ್ಟನ್ನು ಕೂಡಿರುತ್ತೇವೆ. ಅಂಥ ಸಂಬಂಧವನ್ನು ನೋಡುವುದೇ ಆನಂದ. ಹಗಲಿಡಿ ಹಂಚಿಕೊಂಡು ಕೆಲಸ ಮಾಡಿ ತಮ್ಮ ಕೆಲಸ ಕಾರ್ಯಗಳೆಲ್ಲ ಮುಗಿದ ಮೇಲೆ ರಾತ್ರಿಯ ಹೊತ್ತು ಒಂದಿಷ್ಟು ಮಾತುಕತೆಗಳೊಂದಿಗೆ ಹರಟೆ ಹೊಡೆಯುವುದು, ಕೊನೆಗೆ ಎಲ್ಲರೊಂದಿಗೆ ಕುಳಿತು ಊಟ ಮಾಡುವುದೇ ಜೀವನದಲ್ಲಿ ಬಹುದೊಡ್ಡ ಸಂತೋಷ.


ಪ್ರಸ್ತುತ ಕಾಲ ಅದೆಷ್ಟೋ ಬದಲಾಗಿದೆ. ಹಿಂದಿನ ಅದ್ಯಾವುದೇ ಖುಷಿ- ಸಂತೋಷಗಳು ಈಗ ಉಳಿದಿಲ್ಲ. ಜಾಗತೀಕರಣ ಹೊಂದುತ್ತಿರುವ ಸಮಾಜದಲ್ಲಿ ಎಲ್ಲರೂ ಅವರವರ ಕೆಲಸಗಳಲ್ಲಿ ಮುಳುಗಿ ಹೋಗುತ್ತಾರೆ ಅದು ಅನಿವಾರ್ಯವಾಗಿದೆ ಕೂಡ. ಬದುಕಲು ಬೇಕಾಗಿ ಸಂಪಾದನೆ ಮಾಡಲೇಬೇಕು ಈ ಕಾರಣಕ್ಕಾಗಿ ನಗರವನ್ನು ಹಿಡಿಯುವ ಅನಿವಾರ್ಯತೆ ನಮ್ಮ ಬದುಕಿನಲ್ಲಿ ಉಂಟಾಗಿದೆ. ಜೀವನದಲ್ಲಿ ಖುಷಿ ದುಃಖಗಳಿಗೆ ಜಾಗವೇ ಇಲ್ಲದಂತಾಗಿದೆ.


ಮನೆಯಲ್ಲಿ ಯಾರೂ ಇಲ್ಲದ ವಾತಾವರಣ ತಂದೆ ತಾಯಿ ತಮ್ಮ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಮಕ್ಕಳ ಕೈಯಲ್ಲಿ ಮೊಬೈಲ್ ಫೋನ್ ಇಂದಿನ ಮಕ್ಕಳಿಗೆ ಯಾರೊಂದಿಗೂ ಮಾತನಾಡಲು ತಿಳಿದಿಲ್ಲ. ಸಂಬಂಧದ ಬೆಲೆಯಂತೂ ಖಂಡಿತವಾಗಿಯೂ ತಿಳಿದಿಲ್ಲ. ಹಿರಿಯರು ಹೇಳುವ ಕಥೆ ಹರಟೆಗಳನ್ನು ಕೇಳಲು ಮನೆಯಲ್ಲಿ ಹಿರಿಯರೇ ಇಲ್ಲ. ಇದ್ದರೂ ಅವರ ಮಾತಿಗೆ ಕಿವಿ ಕೊಡುವಷ್ಟು ತಾಳ್ಮೆ ಇಲ್ಲದಂತಾಗಿದೆ. ಜೀವನದ ಬಹುದೊಡ್ಡ ತಿಳುವಳಿಕೆ ಮೂಲವನ್ನೇ ನಾವು ಕಳೆದುಕೊಂಡಿದ್ದೇವೆ. ಹಳ್ಳಿಗಳಲ್ಲಿ ಕಾಣುವ ಅಲ್ಲೊಂದು ಇಲ್ಲೊಂದು ಕೂಡು ಕುಟುಂಬ ಬಿಟ್ಟರೆ ಮತ್ತೆಲ್ಲೂ ನಾವು ಅವಿಭಕ್ತ ಕುಟುಂಬವನ್ನು ಕಾಣಲು ಸಾಧ್ಯವಿಲ್ಲ.


ಎಷ್ಟೇ ಅವಸರದ ಜೀವನವಿದ್ದರೂ ಹಬ್ಬ ಹರಿದಿನಗಳಲ್ಲಿ ಒಂದಾಗೋಣ ಅವರಿಂದಲೂ ಜೀವನದ ಮೌಲ್ಯದ ಸಾರಗಳನ್ನು ಕಲಿತುಕೊಳ್ಳಲು ಸಾಕಷ್ಟು ಇರುತ್ತದೆ ಅಲ್ಲವೇ? ಸಂಬಂಧದ ಮೌಲ್ಯಗಳನ್ನು ಉಳಿಸಿಕೊಂಡಾಗಲೇ ನಮ್ಮ ಬದುಕು ಸಂತೋಷದಿಂದ ಕೂಡಿರುವುದು. ಜೀವನದಲ್ಲಿ ಒಬ್ಬ ವ್ಯಕ್ತಿ ಎಷ್ಟು ಆರ್ಥಿಕ ಸಂಪಾದನೆಯನ್ನು ಮಾಡಿದರೂ ಅವರಿಗೆ ಮಾನಸಿಕ ನೆಮ್ಮದಿ ಎಂಬುದು ಬಲುಮುಖ್ಯ. ಅಂತಹ ನೆಮ್ಮದಿಯನ್ನು ಕಾಣಲು ತುಂಬಿದ ಕುಟುಂಬದಲ್ಲಿ ಸಾಧ್ಯವಿದೆ.




- ತೃಪ್ತಿ ಕಟ್ಟಕೋಡಿ 

 ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ

 ವಿವೇಕಾನಂದ ಕಾಲೇಜು ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top