ನಾವು ಒಗ್ಗಟ್ಟಾಗದಿದ್ದರೆ ಅಸಮರ್ಥರು ಆಳುತ್ತಾರೆ: ಸಿದ್ಧನಳ್ಳದ ಡಾ. ಶಿವಕುಮಾರ ಸ್ವಾಮೀಜಿ

Upayuktha
0


ಪಣಜಿ: ಎಲ್ಲಿಯವರೆಗೂ ನಾವು ಒಗ್ಗಟ್ಟಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮನ್ನು ಅಸಮರ್ಥರು ಆಳುತ್ತಿರುತ್ತಾರೆ. ಗೋವಾದಲ್ಲಿ ಇಷ್ಟೊಂದು ಜನ ಕನ್ನಡಿಗರಿದ್ದೀರಿ. ನೀವೆಲ್ಲ ಮನಸ್ಸು ಮಾಡಿದರೆ ಗೋವಾದಲ್ಲಿ ಇಬ್ಬರು ಕನ್ನಡಿಗರು ಶಾಸಕರಾಗಿ ಆಯ್ಕೆಯಾಗುತ್ತಾರೆ. ಗೋವಾದಲ್ಲಿ ಇಬ್ಬರು ಕನ್ನಡಿಗರು ಶಾಸಕರಾಗುತ್ತಾರೆ. ಯಾವುದೇ ಮಠದ ಸ್ವಾಮೀಜಿಗಳು ಒಬ್ಬರನ್ನು ಮೇಲೆ ಮತ್ತೊಬ್ಬರನ್ನು ಕೆಳಕ್ಕೆ ಇಳಿಸುವ ಕೆಲಸ ಮಾಡಬಾರದು ಎಂದು ಕಲಾವಿದರ ಮಠ ಎಂದೇ ಪ್ರಸಿದ್ಧಿಯಾದ ಬಾಗಲಕೋಟೆಯ ಸಿದ್ಧನಳ್ಳದ ಡಾ. ಶಿವಕುಮಾರ ಸ್ವಾಮೀಜಿ ನುಡಿದರು.


ಗೋವಾದ ಮಡಗಾಂವನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯ ಘಟಕ, ಕಸಾಪ ದಕ್ಷಿಣ ಗೋವಾ ಜಿಲ್ಲಾ ಮತ್ತು ಸಾಲಸೇಟ ತಾಲೂಕಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು.


ಹೆಚ್ಚಿನ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಇದರಿಂದಾಗಿ ಕಲಾವಿದರಿಗೆ ಕೇವಲ ಸನ್ಮಾನ ಮಾಡಿದರೆ ಸಾಲದು ಅವರಿಗೆ ಶಾಲು, ಸ್ಮರಣಿಕೆ ನೀಡುವ ಬದಲು ಅದರ ಬದಲು ಅದರ ಹಣವನ್ನೇ ಅವರಿಗೆ ನೀಡಿದರೆ ಅವರಿಗೆ ಒಂದಿಷ್ಟು ಅನುಕೂಲವಾಗಲಿದೆ. ಸಿದ್ಧನಕೊಳ್ಳ ಮಠ ಕಲಾವಿದರ ಮಠ. ಕಲಾವಿದರನ್ನು ಬೆಳೆಸುವ ಮಠ ಸಿದ್ಧನಕೊಳ್ಳಮಠ. ಗೋವಾದಲ್ಲಿ ಇಬ್ಬರು ಕನ್ನಡಿಗ ಶಾಸಕರನ್ನು ಆಯ್ಕೆ ಮಾಡುವ ಶಕ್ತಿ ಇಲ್ಲಿನ ಕನ್ನಡಿಗರಿಗೆ ಇದೆ. ಗೋವಾ ಕನ್ನಡಿಗರ ಹೋರಾಟಗಾರ ಸಿದ್ಧಣ್ಣ ಮೇಟಿ ಮತ್ತು ಮೋಹನ್ ಶೆಟ್ಟಿ ಇವರಿಬ್ಬರಿಗೂ ನಾನು ಆಶೀರ್ವಾದ ಮಾಡುತ್ತೇನೆ. ನೀವು ಇವರಿಬ್ಬರನ್ನೂ ಬೆಂಬಲಿಸಿ ಆಶೀರ್ವದಿಸಿ ಎಂದು ಸಿದ್ಧನಕೊಳ್ಳ ಮಠದ ಡಾ ಶಿವಕುಮಾರ ಸ್ವಾಮೀಜಿ ನುಡಿದರು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಮಾತನಾಡಿ- ನಮ್ಮದು ಜಾತಿ ಮತ ಪಂಥ ಎಂಬ ಯಾವುದೇ ಬೇಧಭಾವವಿಲ್ಲ. ನಾವು ಹೊರ ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರು ಎಲ್ಲರೂ ಒಂದು ನಾವು ಕನ್ನಡಿಗರು. ನಾವು ಧರ್ಮ ಬಿಟ್ಟು ನಡೆಯುತ್ತಿಲ್ಲ. ನಾವು ಗೋವಾ ಕನ್ನಡಿಗರು ನಮ್ಮದು ಕನ್ನಡ ಜಾತಿ ಎಂದರು.


ವಿಶೇಷ ಅತಿಥಿಗಳಾಗಿ ಆಗಮಿಸಿದ ಇಂಡೊ ಪೋರ್ಚುಗೀಸ್ ಪ್ರತಿಷ್ಠಾನದ ನಿರ್ದೇಶಕ ಡಾ. ಅರವಿಂದ ಯಾಳಗಿ ಮಾತನಾಡಿ- ಇಂದು ಗೋವಾದಲ್ಲಿ ಕನ್ನಡಿಗರೆಲ್ಲ ಒಂದಾಗಬೇಕಾಗಿದೆ. ಅನೇಕ ಸಂದರ್ಭಗಳಲ್ಲಿ ಕನ್ನಡಿಗರು ಚದುರಿ ಹೋಗುತ್ತಿದ್ದಾರೆ. ಕನ್ನಡಿಗರ ಧ್ವನಿ ಒಂದಾಗಬೇಕಾಗಿದೆ. ಕನ್ನಡಿಗರ ಒಕ್ಕಟ್ಟಿನ ಶಕ್ತಿ ತೋರಬೇಕಾಗಿದೆ ಎಂದರು.


ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ನಾವೆಲಿಮ್ ಶಾಸಕ ಉಲ್ಲಾಸ ತುವೇಕರ್, ವಿಜಯಪುರ ಜಿಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ಕರ್ನಾಟಕ ರಾಜ್ಯೋತ್ಸವ ಸಮಿತಿ ಗೋವಾ ಅಧ್ಯಕ್ಷ ಮುರಳಿ ಮೋಹನ್ ಶೆಟ್ಟಿ, ಧಾರವಾಡದ ಶ್ರೀ ಸಾಯಿ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ವೀಣಾ ಬಿರಾದಾರ್, ಧಾರವಾಡ ಪತ್ರಗಾರ ಇಲಾಖೆಯ ಸಹ ನಿರ್ದೇಶಕಿ ಡಾ.ಮಂಜುಳಾ ಎಲಿಗಾರ ಮಾತನಾಡಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಾಪ್ಸಾ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಕಸಾಪ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಪರಶುರಾಮ ಕಲಿವಾಳ, ಸಾಲಸೇಟ ತಾಲೂಕು ಅಧ್ಯಕ್ಷ ಬಸವರಾಜ್ ಬನ್ನಿಕೊಪ್ಪ, ಕಸಾಪ ಗೌರವಾಧ್ಯಕ್ಷ ಪಡದಯ್ಯ ಹಿರೇಮಠ, ಕಸಾಪ ಪಣಜಿ ತಾಲೂಕು ಘಟಕದ ಅಧ್ಯಕ್ಷ ಹನುಮಂತ ಗೊರವರ್, ಪ್ರೊ.ಪ್ರಭುಲಿಂಗ ದಂಡಿನ್, ಮತ್ತಿತರರು ಉಪಸ್ಥಿತರಿದ್ದರು.


ಕಸಾಪ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಪರಶುರಾಮ ಕಲಿವಾಳ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು, ಶೈಲಜಾ ರವಿ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಸಾಲಸೇಟ ತಾಲೂಕು ಘಟಕದ ಅಧ್ಯಕ್ಷ ಬಸವರಾಜ್ ಬನ್ನಿಕೊಪ್ಪ ವಂದನಾರ್ಪಣೆಗೈದರು. ಕಸಾಪ ದಕ್ಷಿಣ ಗೋವಾ ಜಿಲ್ಲಾ ಘಟಕದ ಮಹಿಳಾ ಪ್ರತಿನಿಧಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗುರು ಮೆಲೊಡಿಸ್ ಆರ್ಕೆಸ್ಟ್ರಾ ಬೆಂಗಳೂರು ಇವರಿಂದ ಸುಮಧುರ ಹಾಡು, ಹಾಸ್ಯ ಕಲಾವಿದ ಕುಮಾರ್ ಸಾಗರ ತುರುವೇಕೆರೆ ರವರಿಂದ ಮಿಮಿಕ್ರಿ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕ, ಜಿಲ್ಲಾ ಮತ್ತು ತಾಲೂಕಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೋವಾ ರಾಜ್ಯದ ಮೂಲೆ ಮೂಲೆಯಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top