ಚಳಿಗಾಲದಲ್ಲಿ ಮೂಳೆ ಆರೋಗ್ಯ ಕಾಪಾಡುವುದು ಹೇಗೆ?

Upayuktha
0

 




ಸಾಮಾನ್ಯವಾಗಿ ಚಳಿಗಾಲದಲ್ಲಿ ಗಂಟುನೋವು, ಮಂಡಿ ನೋವು ಮುಂತಾದವುಗಳ ಗರಿಗೆದರುವುದು ಸಹಜ. ಚಳಿಗಾಲದಲ್ಲಿ ರಕ್ತನಾಳಗಳು ಕುಗ್ಗಿಕೊಂಡು ಗಂಟುಗಳಿಗೆ ರಕ್ತದ ಪೂರೈಕೆಯಲ್ಲಿ ವ್ಯತ್ಯಯವಾದಾಗ ದೇಹದ ಎಲ್ಲಾ ಪ್ರಮುಖ ಗಂಟುಗಳು, ಕುತ್ತಿಗೆಯ ಭಾಗದ ಎಲುಬುಗಳು, ಗಂಟುನೋವಿರುವ ಮಂಡಿ ಚಿಪ್ಪು ಮುಂತಾದ ಜಾಗಗಳು ಸೆಟೆದುಕೊಂಡು, ಚಲನೆಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡಲಿಕ್ಕಿಲ್ಲ.


ಗಂಟುಗಳಲ್ಲಿ ಶಬ್ದ ಬರುವುದು, ವಿಪರೀತ ನೋವು, ಯಾತನೆಯಿಂದಾಗಿ ಚಲನೆಯಲ್ಲಿ ಸಂಪೂರ್ಣವಾಗಿ ಗಂಟುಗಳನ್ನು ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ. ಸಂಧಿವಾತ, ಗಂಟು ವಾತ ಮತ್ತು ಕುತ್ತಿಗೆಯ ಸರ್ವೈಕಲ್ ಸ್ಪೊಂಡಿಲೈಟಿಸ್ ಇರುವವರಂತೂ ಬಹಳಷ್ಟು ಕಷ್ಟಪಡುತ್ತಾರೆ.


ಚಳಿಗಾಲದಲ್ಲಿ ಹಗಲಿನ ಅವಧಿ ಕಡಿಮೆ ಮತ್ತು ರಾತ್ರಿಯ ಅವಧಿ ಜಾಸ್ತಿ ಇರುತ್ತದೆ. ವಾತವರಣ ಹಿತಕರವಾಗಿರುವುದರಿಂದ ಅಥವಾ ವಿಪರೀತ ತಂಪು ಹವೆಯಿಂದಾಗಿ ಜನರು ಹೆಚ್ಚು ಸೋಮಾರಿಗಳಾಗುತ್ತಾರೆ. 


ಈ ಕಾರಣದಿಂದಲೂ ಮೊದಲೇ ಇಂತಹಾ ಎಲುಬು ಸಂಬಂಧಿ ಗಂಟುನೋವು ಇರುವ ರೋಗಿಗಳು ಬಹಳ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಮತ್ತು ಸೂಕ್ತ ವೈದ್ಯಕೀಯ ಸಲಹೆ ಮತ್ತು ದೈಹಿಕ ವ್ಯಾಯಾಮ ಮಾಡಿ ಗಂಟುಗಳಿಗೆ ಸಾಕಷ್ಟು ರಕ್ತ ಪರಿಚಲನೆಯಾಗುವಂತೆ ನೋಡಿಕೊಳ್ಳಬೇಕು.


ವಿಟಮಿನ್  D ದೇಹದ ಮೂಳೆಯ ಆರೋಗ್ಯಕ್ಕೆ ಅತೀ ಅವಶ್ಯಕ. ಚಳಿಗಾಲದಲ್ಲಿ ಹಗಲು ಹೊತ್ತಿನ ಕಡಿಮೆ ಅವಧಿ ಮತ್ತು ಸೂರ್ಯನ ಬೆಳಕು ಕಡಿಮೆ ಇರುವುದರಿಂದ ವಿಟಮಿನ್ ಡಿ ದೇಹಕ್ಕೆ ಕಡಿಮೆ ಸಿಗುವ ಸಾಧ್ಯತೆ ಇರುತ್ತದೆ.


ಈ ಕಾರಣದಿಂದಲೇ ಆಹಾರ ಪದಾರ್ಥಗಳಲ್ಲಿ ವಿಟಮಿನ್ ಆಯಡಿ  ಹೆಚ್ಚು ಇರುವಂತೆ ನೋಡಿಕೊಳ್ಳಬೇಕು. ದೇಹದಲ್ಲಿ ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ವಿಟಮಿನ್ ಡಿ  ಅತೀ ಅವಶ್ಯಕ. ವಿಟಮಿನ್ ಡಿ ಕೊರತೆ ಉಂಟಾದಲ್ಲಿ, ಮೂಳೆಗಳಿಗೆ ಸರಿಯಾಗಿ ಕ್ಯಾಲ್ಸಿಯಂ ಅಂಶ ಸಿಗದೆ, ಟೊಳ್ಳು ಮೂಳೆ ರೋಗ ಉಂಟಾಗುವ ಸಾದ್ಯತೆ ಇದೆ. 


ಈ ಕಾರಣದಿಂದಲೇ ಚಳಿಗಾಲದಲ್ಲಿ ಉತ್ತಮ ದೈಹಿಕ ವ್ಯಾಯಮ ಮತ್ತು ಆಹಾರದಲ್ಲಿ ವಿಟಮಿನ್ ಡಿ ಪೂರೈಕೆ, ಮೂಳೆ ಆರೋಗ್ಯಕ್ಕೆ ಅತೀ ಅವಶ್ಯಕ. ನಿಯಮಿತವಾದ ದೈಹಿಕ ವ್ಯಾಯಾಮ ಮಾಡುವುದರಿಂದ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ.


ದೇಹದಲ್ಲಿ ಕೊಬ್ಬಿನ ಅಂಶ ಕರಗುತ್ತದೆ. ಅಧಿಕ ದೇಹದ ತೂಕ ದೇಹದ ಎಲುಬಿನ ಮೇಲೆ, ಮಂಡಿಗಳ ಮೇಲೆ, ಕಾಲುಗಳ ಗಂಟುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಿಯಮಿತ ದೈಹಿಕ ಕಸರತ್ತು ಮಾಡುವುದರಿಂದ ದೇಹದ ರಕ್ಷಣಾ ವ್ಯವಸ್ಥೆಯ ಮೇಲೆ ಧನಾತ್ಮಕ ಪರಿಣಾಮ ಬೀರಿ ಎಲುಬುಗಳ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.


ಎಲುಬಿನ ಸಾಂದ್ರತೆ, ಎಲುಬಿನ ರಚನೆ ಮತ್ತು ಗಂಟುಗಳ ಕಾರ್ಯಕ್ಷಮತೆ ಎಲ್ಲವೂ ದೈಹಿಕ ವ್ಯಾಯಾಮದಿಂದಗಿ ಸುಧಾರಿಸುತ್ತದೆ ಮತ್ತು ಪರೋಕ್ಷವಾಗಿ ಎಲುಬುಗಳ ಆರೋಗ್ಯಕ್ಕೆ ಕಾರಣವಾಗುತ್ತದೆ.


ತಡೆಗಟ್ಟುವುದು ಹೇಗೆ?


1. ದಿನವೊಂದರಲ್ಲಿ ಕನಿಷ್ಠ 45 ನಿಮಿಷಗಳ ಬಿರುಸುನಡಿಗೆ, ಸೈಕ್ಲಿಂಗ್ ಅಥವಾ ಇನ್ಯಾವುದೇ ದೈಹಿಕ ವ್ಯಾಯಮ ಮಾಡಬೇಕು.

2. ದಿನದಲ್ಲಿ ಕನಿಷ್ಠ ಅರ್ದ ಗಂಟೆಗಳ ಕಾಲ ಸೂರ್ಯನ ಬೆಳಕಿಗೆ ಮೈಯೊಡ್ಡಬೇಕು ಹೀಗೆ ಮಾಡಿದಲ್ಲಿ ವಿಟಮಿನ್ D ಕೊರತೆ ಬಾದಿಸದು.

3. ಸಾಕಷ್ಟು ಕ್ಯಾಲ್ಸಿಯಂ ಇರುವ ಆಹಾರವನ್ನು ಸೇವಿಸಬೇಕು. ಇದು ಮಾಡಲು ಕಷ್ಟವಾದಲ್ಲಿ ಕ್ಯಾಲ್ಸಿಯಂ ಗುಳಿಗೆಗಳನ್ನು ತೆಗೆದುಕೊಳ್ಳಬೇಕು.


4. ಸಾಕಷ್ಟು ದೇಹ ಮುಚ್ಚುವ ಬಟ್ಟೆ, ಗ್ಲೌವ್ಸ್, ಟೋಪಿ ಇತ್ಯಾದಿ ಬಳಸಿ ದೇಹದ ಆತಂರಿಕ ಉಷ್ಣತೆಯನ್ನು ಕಾಪಾಡಿಕೊಳ್ಳಬೇಕು.


5. ಮದ್ಯಪಾನ ಮತ್ತು ಧೂಮಪಾನವನ್ನು ಕಡಿಮೆ ಮಾಡಬೇಕು. ಅದೇ ರೀತಿ ಅತೀಯಾದ ಕೆಫೇನ್‍ಯುಕ್ತ ಕಾಫಿ ಅಥವಾ ಇನ್ನಿತರ ಪೇಯಗಳನ್ನು ಸೇವಿಸಬಾರದು. ಅತಿಯಾದ ಕೆಫೇನ್ ಕ್ಯಾಲ್ಸಿಯಂ ಹೀರುವಿಕೆಯನ್ನು ತಡೆಯುತ್ತದೆ.


6. ಗ್ಲೂಕೋಸಮೈನ್ ಎಂಬ ಶಿಲೀಂಧ್ರಗಳಿಂದ ಶೋಧಿಸಿ ಸಂಸ್ಕರಿಸಿದ ‘ಅಮಿನೋ ಆಸಿಡ್’ ಇರುವ ಉತ್ಪನ್ನವನ್ನು ಹೆಚ್ಚು ಬಳಸಿದಲ್ಲಿ, ಗಂಟು ನೋವು ಮತ್ತು ಗಂಟುಗಳ ಬಿಗಿಹಿಡಿತವನ್ನು ಕಡಿಮೆ ಮಾಡುತ್ತದೆ.


7. ನೀವು ಮಾಂಸಾಹಾರಿಗಳಾಗಿದ್ದಲ್ಲಿ, ಹೆಚ್ಚು ಓಮೇಗಾ -3 ಪ್ಯಾಟೀ ಆಸಿಡ್ ಇರುವ ಸಾಲೋಮನ್ ಮೀನುಗಳನ್ನು ತಿನ್ನಬಹುದು. ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಆ368 ಇರುತ್ತದೆ. ಶಾಖಾಹಾರಿಗಳಾಗಿದ್ದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಬಳಸಬೇಕು. ಹಸಿರು ಸೊಪ್ಪು, ತರಕಾರಿಗಳಲ್ಲಿಯೂ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ.


8. ಸೋಮಾರಿಯಾಗಿ ಜೀವನ ಶೈಲಿ ಅಳವಡಿಸಿಕೊಂಡು, ಜಾಸ್ತಿ ಕರಿದ ಜಂಕ್ ಆಹಾರ ತಿಂದಲ್ಲಿ ದೇಹದ ತೂಕ ಹೆಚ್ಚಾಗಿ ಗಂಟುನೋವು ಜಾಸ್ತಿಯಾಗುತ್ತದೆ. ನಿಯಮಿತವಾಗಿ ನಿರ್ದಿಷ್ಟವಾದ ಆಹಾರ ಪದಾರ್ಥಗಳನ್ನು ತಿಂದು ದೇಹದ ತೂಕವನ್ನು ಕಡಿಮೆ ಮಾಡಬೇಕು. ನಿಮ್ಮ BMI ಅಥವಾ ದೇಹದ ತೂಕದ ಸಾಂಧ್ರತೆ 25ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಿ.

  

9. ಗಂಟುನೋವು ನಿವಾರಣೆಗಳಿಗೆ ಅನಗತ್ಯವಾಗಿ ನೋವು ನಿವಾರಕ ಔಷಧಿ ತೆಗೆದುಕೊಳ್ಳಬಾರದು.. ಗಂಟುಗಳಿಗೆ ಶಾಖ ನೀಡಬೇಕು ಅಥವಾ ಬಿಸಿನೀರಿನಲ್ಲಿ ಕಾಲುಗಳನ್ನು ಮತ್ತು ಗಂಟುಗಳನ್ನು ಅದ್ದಿ ನೋವು ನಿವಾರಿಸಬೇಕು.


10. ಗಂಟುಗಳ ಉರಿಯೂತಕ್ಕೆ ಯಾವುದೇ ಕಾರಣಕ್ಕೂ ಸ್ಟಿರಾಯ್ಡಿಗಳ ಮೊರೆ ಹೋಗಬಾರದು. ಈ ಸ್ಟಿರಾಯ್ಡಗಳು ಎಲುಬಿನ ಕ್ಯಾಲ್ಸಯಂನ್ನು ರಕ್ತಕ್ಕೆ ಸೇರುವಂತೆ ಮಾಡಿ ಟೊಳ್ಳು ಮೂಳೆರೋಗಕ್ಕೆ ಕಾರಣವಾಗುತ್ತದೆ.


11. ಸಾಕಷ್ಟು ದ್ರವಾಹಾರ ಸೇವಿಸಿ, ನಿರ್ಜಲೀಕರಣದಿಂದ ಗಂಟುನೋವು ಜಾಸ್ತಿಯಾಗುತ್ತದೆ.


12. ಹಸಿತರಕಾರಿ, ತಾಜಾ ಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್‍ಗಳು ಜಾಸ್ತಿ ಇರುತ್ತದೆ. ಇವುಗಳು ಗಂಟುಗಳ ಉರಿಯೂತವನ್ನು ಕಡಿಮೆಮಾಡುತ್ತದೆ.


ಚಳಿಗಾಲದಲ್ಲಿ ಗಂಟುಗಳಲ್ಲಿ ರಕ್ತದ ಪರಿಚಲನೆ ಕಡಿಮೆಯಾಗಿ ನೋವು ಯಾತನೆ ಸರ್ವೆಸಾಮಾನ್ಯ ಸಮತೋಲನವಾದ ಆಹಾರವನ್ನು ಸೇವಿಸಿದಲ್ಲಿ ಎಲುಬಿನ ಆರೋಗ್ಯಕ್ಕೆ ಪೂರಕವಾದ ಲವಣಗಳು ವಿಟಮಿನ್‍ಗಳು ಮತ್ತು ಪೋಷಕಾಂಶಗಳು ದೊರೆತು ಎಲುಬು ಸದೃಡವಾಗುತ್ತದೆ.


ವಿಟಮಿನ್  ಅ,ಆ ಮತ್ತು ಏ ಜಾಸ್ತಿ ಇರುವ ಆಹಾರಗಳಾದ ಕ್ಯಾಬೇಜ್, ಟೊಮೆಟೊ, ಸ್ಪಿನಾಚ್ (ಬಸಳೆ), ಕಿತ್ತಳೆ ಮುಂತಾದವುಗಳನ್ನು ಜಾಸ್ತಿ ಸೇವಿಸಬೇಕು. ಇವುಗಳಲ್ಲಿ ವಿಟಮಿನ್ ಮತ್ತು ಲವಣಾಂಶಗಳು ಹೇರಳವಾಗಿ ಸಿಗುತ್ತದೆ. ನಿಯಮಿತ ದೈಹಿಕ ವ್ಯಾಯಾಮ ಮಾಡುವುದರಿಂದಲೂ ಎಲುಬುಗಳು ಗಟ್ಟಿಯಾಗುತ್ತದೆ.


ಚಳಿಗಾಲದಲ್ಲಿ ತಣ್ಣೀರಿನಲ್ಲಿಸ್ನಾನ ಮಾಡುವುದು ಒಳ್ಳೆಯದಲ್ಲ. ದಿನವೊಂದರಲ್ಲಿ ಕನಿಷ್ಠ 1  ಗಂಟೆಗಳ ಕಾಲ ಎಳೆ ಬಿಸಿಲಿಗೆ ಮೈಯೊಡ್ಡಿ ಸೂರ್ಯಸ್ನಾನ ಮಾಡುವುದರಿಂದ ವಿಟಮಿನ್ ಆ ಸಾಕಷ್ಟು ದೊರೆತು ಎಲುಬು ಆರೋಗ್ಯವಂತವಾಗಿರುತ್ತದೆ. 


ಕೆಲಸದ ಸಮಯದಲ್ಲಿ, ದೇಹದ ಗಂಟುಗಳ ಮೇಲೆ ಅಥವಾ ಬೆನ್ನು ಹುರಿ, ಕುತ್ತಿಗೆಯ ಗಂಟುಗಳ ಮೇಲೆ ವಿಪರೀತ ಒತ್ತಡ ಬೀಳುವ ದೇಹದ ಚಲನೆಯನ್ನು ಕಡಿಮೆ ಮಾಡತಕ್ಕದ್ದು. ಇಲ್ಲವಾದಲ್ಲಿ ಚಳಿಗಾಲದ ಗಂಟುನೋವು ಕುತ್ತಿಗೆಯ ನೋವು ಅಥವಾ ಬೆನ್ನು ನೋವು ಉಲ್ಭಣಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದಲ್ಲಿ ಎಲುಬು ಆರೋಗ್ಯವನ್ನು ಚಳಿಗಾಲದಲ್ಲಿ ಹತೋಟಿಯಲ್ಲಿಡಲು ಖಂಡಿತ ಸಾಧ್ಯವಿದೆ.

.

-ಡಾ|| ಮುರಲಿ ಮೋಹನ್ ಚೂಂತಾರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top