18 ವರ್ಷದ ಒಳಗಿನ ಮಕ್ಕಳಿಗೆ ಹೃದ್ರೋಗ ಚಿಕಿತ್ಸಾ ಶಿಬಿರ, ಉಚಿತ ಶಸ್ತ್ರ ಚಿಕಿತ್ಸಾ ಸೇವೆ

Upayuktha
0

ಮಾತಾ‍ ಅಮೃತಾನಂದಮಯಿ ಮಠದ ವತಿಯಿಂದ ಜರುಗುವ ಸೇವಾ ಕಾರ್ಯ ಜ. 19ಕ್ಕೆ




ಮಂಗಳೂರು: ಜನವರಿ 19 ರಂದು ಭಾನುವಾರ ಮಂಗಳೂರು ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ 18 ವರ್ಷದ ಒಳಗಿನ ಮಕ್ಕಳಿಗಾಗಿ ಉಚಿತ ಹೃದ್ರೋಗ ತಪಾಸಣಾ ಶಿಬಿರ ಜರುಗಲಿದೆ.


ಈ ಶಿಬಿರದಲ್ಲಿ ಕೊಚ್ಚಿಯ ಅಮೃತಾ ಆಸ್ಪತ್ರೆಯ ಮಕ್ಕಳ ಹೃದಯ ರೋಗ ತಜ್ಞ ವೈದ್ಯರುಗಳು ಅಗತ್ಯ ತಪಾಸಣಾ‍ ಸಾಧನಗಳೊಂದಿಗೆ ಆಗಮಿಸಲಿದ್ದು ಸೂಕ್ತ ತಪಾಸಣೆ ನಡೆಸಲಿರುವರು. ಶಸ್ತ್ರ ಚಿಕಿತ್ಸೆ ಸಹಿತ ಉನ್ನತ ಮಟ್ಟದ ಚಿಕಿತ್ಸೆ ಅಗತ್ಯವಿರುವವರನ್ನು ಗುರುತಿಸಿ ಅವರಿಗೆ ಉಚಿತವಾಗಿ ಕೇರಳದ ಕೊಚ್ಚಿಯಲ್ಲಿನ ಅಮೃತಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು.


ಆದುದರಿಂದ ತಮ್ಮ ವ್ಯಾಪ್ತಿಯಲ್ಲಿ ಇಂತಹ 18 ವರ್ಷದ ಒಳಗಿನ ಹೃದಯ ಸಂಬಂಧಿ ಸಮಸ್ಯೆ ಇರುವ ಮಕ್ಕಳು ಕಂಡು ಬಂದರೆ ಅವರನ್ನು ಈ ಶಿಬಿರಕ್ಕೆ ಬಂದು ಇದರ ಪ್ರಯೋಜನ ಪಡೆಯಲು ಸಹಕರಿಸಬೇಕಾಗಿ ಕೋರುತ್ತೇವೆ.


ನಮ್ಮ ಸುತ್ತಮುತ್ತ ಇಂತಹ ಅನೇಕರು ಇರಬಹುದು. ಆದರೆ ಸುಮಾರು 2 ರಿಂದ 10 ಲಕ್ಷ ಖರ್ಚು ಬರಬಹುದೆಂಬ ಕಾರಣದಿಂದ ಚಿಕಿತ್ಸೆ ಪಡೆಯದೆ ಸಂಕಷ್ಟದಲ್ಲಿ ಇರುವ ಸಾಧ್ಯತೆ ಇರುತ್ತದೆ. ಅಂತಹವರಿಗೆ ನೆರವಾಗಲೆಂದೇ ಅಮ್ಮನವರು ತಮ್ಮ ಆಸ್ಪತ್ರೆಯಲ್ಲಿರುವ ಅತ್ಯುನ್ನತ ಚಿಕಿತ್ಸಾ ಸೇವೆಯ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸುತ್ತಿದ್ದಾರೆ. ಈ ಪವಿತ್ರವಾದ ಸೇವಾಕಾರ್ಯದ ಪ್ರಯೋಜನವು ಜಾತಿ ಮತ ಧರ್ಮ ವರ್ಣಭೇದಗಳಿಲ್ಲದೆ ಎಲ್ಲಾ ವರ್ಗದ ಜನರಿಗೆ ಲಭ್ಯವಿರುತ್ತದೆ.ಆದುದರಿಂದ ಈ ಸೇವಾ ಕಾರ್ಯವನ್ನು ಯಶಸ್ವಿಗೊಳಿಸಲು ತಮ್ಮ ಸಹಕಾರವನ್ನು ಕೋರುತ್ತಿರುವುದಾಗಿ ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ತಿಳಿಸಿದ್ದಾರೆ.



ವಿಶ್ವದ ಶ್ರೇಷ್ಠ ಆಸ್ಪತ್ರೆಗಳಲ್ಲೊಂದಾದ ಹಾಗೂ ಅಮ್ಮ-"ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ" ಯವರ ಮಠದ ವತಿಯಿಂದ ನಡೆಸಲ್ಪಡುವ ಕೊಚ್ಚಿಯ ಪ್ರಖ್ಯಾತ ಆಸ್ಪತ್ರೆ "ಅಮೃತಾ ಆಸ್ಪತ್ರೆ". ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಆಧುನಿಕ ಉಪಕರಣಗಳ ಸಹಿತ ಖ್ಯಾತ ತಜ್ಞ ವೈದ್ಯರುಗಳ ಸೇವೆ ಲಭ್ಯವಿದೆ. ಅಮ್ಮನವರು ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಹಾಸನ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿರುವ 18 ವರ್ಷದ ಒಳಗಿನ ಮಕ್ಕಳು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರೆ ಅಂತಹ ಮಕ್ಕಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೀಡುವ ಕೊಡುಗೆಯನ್ನು ಅಮ್ಮನವರು ನೀಡಿರುತ್ತಾರೆ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸುರೇಶ್ ಅಮೀನ್, ಅಧ್ಯಕ್ಷರು, ಮಾತಾ ಅಮೃತಾನಂದಮಯಿ ಸೇವಾ ಸಮಿತಿ, ಮಂಗಳೂರು, ಮೊಬೈಲ್: 9632657740

ಡಾ. ದೇವಿಪ್ರಸಾದ್ ಹೆಜಮಾಡಿ, ಮೊಬೈಲ್: 9845761845

ಮಾತಾ ಅಮೃತಾನಂದಮಯಿ ಮಠ- 8951470744


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top