ಉಚಿತ ಚಿಕಿತ್ಸೆ: ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆ- ಕೆಎಸ್ಸಾರ್ಟಿಸಿ ಒಡಂಬಡಿಕೆ

Upayuktha
0


ನಾಟೆಕಲ್ (ಮಂಗಳೂರು): ಸ್ಥಳೀಯ ಕಣಚೂರು ಆಯುರ್ವೇದ ಕಾಲೇಜು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯಸ್ಥ ರಾಜೇಶ್ ಶೆಟ್ಟಿ ಕೆ ವಿಭಾಗ ನಿಯಂತ್ರಕ (ಕ.ರಾ.ರ.ಸಾ.ಸಂ) ಹಾಗೂ ಸಹಾಯಕ‌ ಕಾರ್ಮಿಕ ಕಲ್ಯಾಣ ಅಧಿಕಾರಿ ಶ್ರೀಮತಿ ಪ್ರಿಯಾ ಪವನ್ ಕುಮಾರ ಇವರ  ಸಮ್ಮುಖದಲ್ಲಿ ಸಂಸ್ಥೆಯ ಚೇರ್ಮನ್ ಡಾ । ಕಣಚೂರು ಹಾಜಿ ಮೋನು ರವರ ಅಪೇಕ್ಷೆಯಂತೆ ನೌಕರರಿಗೆ ಉಚಿತ ಆರೋಗ್ಯ ಸೇವಾ ಸವಲತ್ತು ನೀಡುವ ಕುರಿತಾದ ಮಹತ್ತರ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಪ್ರಾಚಾರ್ಯೆ ಡಾ ವಿದ್ಯಾ ಪ್ರಭಾ ಮತ್ತು ಸಾರಿಗೆ ಸಂಸ್ಥೆ ಮುಖ್ಯಸ್ಥರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದರು.


ಇದು ಆಯುರ್ವೇದ ಸಂಸ್ಥೆಗಳಲ್ಲಿ ಕ.ರಾ.ರ.ಸಾ.ಸಂಸ್ಥೆಯೊಡನೆ ಮಾಡಲಾದ ಮೊದಲ ಒಡಂಬಡಿಕೆ ಇದಾಗಿದೆ. ನಿಗಮ ಮುಖ್ಯಸ್ಥರು ಈ ಒಡಂಬಡಿಕೆಯು ಬಹಳ ಅನುಕೂಲಕರ ಎಂದು ಹೇಳಿದರು. ಹಾಜಿ ಡಾ ಕಣಚೂರು ಮೋನುರವರ ಉದಾರತೆಯ ಸಂಕೇತ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 


- ಡಾ ಸುರೇಶ ನೆಗಳಗುಳಿ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top