ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ಹಾಗೂ ಲಯನ್ಸ್ ಕ್ಲಬ್ ಪಾಂಡೇಶ್ವರ ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರ ಇತ್ತೀಚೆಗೆ ನಡೆಯಿತು.
ಸೇರಾಕೇರ್ ಲೈಟ್ ಆಫ್ ಲೈಫ್ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಪಾಂಡೇಶ್ವರ ಲಯನ್ಸ್ ಕ್ಲಬ್‌ನ ಕೋಶಾಧಿಕಾರಿ ಕೆ.ವಿ ಪ್ರಭು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ. ಸದಾಶಿವ ಕುಲಾಲ್ ವಹಿಸಿದ್ದರು. ಸೇರಾ ಕೇರ್ ಸಂಸ್ಥೆಯ ಮ್ಯಾನೇಜರ್ ಶ್ವೇತ ಭಂಡಾರಿ ಶಿಬಿರದ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಪೋರ್ಟ್ ವಾರ್ಡ್ ಕಾರ್ಪೊರೇಟರ್ ಅಬ್ದುಲ್ ಲತೀಫ್, ಕಾಂಟೆನ್ಮೆಂಟ್ ವಾರ್ಡ್ ಕಾರ್ಪೋರೇಟರ್ ದಿವಾಕರ್ ಪಾಂಡೇಶ್ವರ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸುರೇಂದ್ರ, ಹಳೆ ವಿದ್ಯಾರ್ಥಿ, ನ್ಯಾಯವಾದಿ ರಾಧ ಶೆಟ್ಟಿ ಉಪಸ್ಥಿತರಿದ್ದರು. ಗೀತಾ ಪ್ರಾರ್ಥಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮದ ಸ್ವಾಗತ ಮಾಡಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ