ಪುರಭವನದಲ್ಲಿ ವೈಭವದ ಶ್ರೀಚಕ್ರ ನೃತ್ಯೋತ್ಸವ

Upayuktha
0


ಮಂಗಳೂರು: ಹೊಸ ವರ್ಷದ ಆರಂಭವನ್ನು ಹೆಜ್ಜೆ ಗೆಜ್ಜೆ ನೃತ್ಯ ನಾದಗೊಳೊಂದಿಗೆ "ಚಕ್ರಪಾಣಿ ನೃತ್ಯ ಕಲಾ ಕೇಂದ್ರ" ಅತ್ತಾವರ ಮಂಗಳೂರು ಇಲ್ಲಿನ ನಾಟ್ಯ ಗುರುಗಳಾದ ವಿದ್ವಾನ್ ಸುರೇಶ್ ಅತ್ತಾವರ್ ಅವರ ನಿರ್ದೇಶನದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಅತ್ಯಂತ ವೈಭವದಿಂದ ಜರುಗಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನ ಅತ್ತಾವರ ಇಲ್ಲಿನ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ನೆರವೇರಿಸಿ ಬದುಕಿನಲ್ಲಿ ಭರವಸೆ ಮೂಡಲು ಒಂದಷ್ಟು ಹೊತ್ತು ಮನಸ್ಸು ಪ್ರಪುಲ್ಲಗೊಳ್ಳಲು ನೃತ್ಯ, ಸಂಗೀತ, ಚಿತ್ರಕಲೆ, ಬರವಣಿಗೆಯಂತಹ ಹವ್ಯಾಸಗಳು ಬೇಕು. ಈ ದಿನ ನೃತ್ಯ ಹಾಗೂ ಸಂಗೀತದಲ್ಲಿ ಕಾರ್ಯಕ್ರಮ ನೀಡುವ ಎಲ್ಲರಿಗೂ ದೇವರು ಶುಭವನ್ನೇ ಕರುಣಿಸಲಿ, ಚಕ್ರಪಾಣಿ ನೃತ್ಯ ಕಲಾ ಕೇಂದ್ರ ಇನ್ನಷ್ಟು ಉತ್ತಮ ನೃತ್ಯ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಒದಗಿಸಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ ಆರ್ ಅವರು ಮಾತನಾಡುತ್ತಾ, ನಾಟ್ಯಕಲಾ ರತ್ನ ವಿದ್ವಾನ್ ಸುರೇಶ್ ಅತ್ತಾವರ ಅವರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಅರಳಿಸಿ ಬೆಳೆಯುವಂತೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೇ ಅನೇಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಾ ತಮ್ಮಲ್ಲಿರುವ ನಾಟ್ಯ ಪ್ರತಿಭೆಯನ್ನು ವಿದ್ಯಾರ್ಥಿಗಳಿಗೆ ಧಾರೆಯರೆದು ಪ್ರತಿಭಾ ಸಂಪನ್ನರನ್ನಾಗಿ ಮಾಡುತ್ತಿರುವ ನಿಮಗೆ ದೇವರು ಉತ್ತಮ ಭಾಗ್ಯ ಕರುಣಿಸಲಿ ಎಂದು ಶುಭ ಹಾರೈಸಿದರು.


ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ಮಾಲತಿ ಶೆಟ್ಟಿ ಮಾಣೂರು ಸಾಹಿತಿ, ಸಮಾಜ ಸೇವೆಕಿ, ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿಯು ಆಗಿರುವ ಇವರು ಮಾತನಾಡುತ್ತಾ ವಿದ್ಯೆಯಿಂದ ಕಲಿತದ್ದು ಅಲ್ಪಕಾಲದ ವರೆಗೆ, ಅದೇ ವಿದ್ಯೆಯನ್ನು ಗುರುವಿನಿಂದ ಗುರುವಿನ ಸಮ್ಮುಖದಲ್ಲಿ ತಾಳ್ಮೆಯಿಂದ ಕಲಿತರೆ ಅದು ಅನಂತಕಾಲದವರೆಗೆ. ಹಾಗೆ ನಾಟ್ಯ ಕಲಾರತ್ನ ವಿದ್ವಾನ್ ಸುರೇಶ್ ಅತ್ತಾವರ ಅವರ ನೃತ್ಯ ನಿರ್ದೇಶನದಲ್ಲಿ ನಡೆಯುತ್ತಿರುವ ನೃತ್ಯ ಹಾಗೂ ಗಾಯನ ಅತ್ಯಂತ ಯಶಸ್ವಿಯಾಗಿ ಜರುಗಲಿ, ಗುರುಗಳಿಂದ ಇನ್ನಷ್ಟು ಶಿಷ್ಯರ ಬಳಗ ಬೆಳೆಯಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಶ್ರೀಮತಿ ಮಲ್ಲಿಕಾ ಸುರೇಶ್ ಅತ್ತಾವರ ಹಾಗೂ ಸಂಗೀತ ಗುರುಗಳಾದ ಶ್ರೀಮತಿ ರಶ್ಮಿ ರವಿಕುಮಾರ್ ಅವರು ಭಾಗವಹಿಸಿದ್ದರು.  ಚಕ್ರಪಾಣಿ ನೃತ್ಯ ಕಲಾ ಕೇಂದ್ರದ ನೃತ್ಯ ನಿರ್ದೇಶಕ ಸುರೇಶ ಅತ್ತಾವರ ಪ್ರಾಸ್ತಾವಿಕದೊಂದಿಗೆ ಸ್ವಾಗತ ಕೋರಿದರು. ಕಾರ್ಯಕ್ರಮಕ್ಕೆ ಧನ್ಯವಾದ ಶ್ರೀಮತಿ ಸುಚೇತ ಅರ್ಪಿಸಿದರು. ನಿರೂಪಣೆಯನ್ನು ಸುರೇಖಾ ಯಾಳವಾರ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ 150 ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ಈ ಎಲ್ಲಾ ಮಕ್ಕಳ ವರದಿಯನ್ನು ಶ್ರೀಮತಿ ಶೃತಿ ಚಂದ್ರು ಅವರು ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top