ಎಸ್‌ಡಿಎಂ ಮಹಿಳಾ ಐಟಿಐ: ಅಗ್ನಿ ಅವಘಡ ನಿರ್ವಹಣೆ ಕಾರ್ಯಾಗಾರ

Upayuktha
0

 



ಉಜಿರೆ:  ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ  (ಜ. 3) ಅಗ್ನಿ ಅವಘಡ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು.


ಬೆಳ್ತಂಗಡಿಯ ಅಗ್ನಿಶಾಮಕ ಠಾಣೆ ಹಾಗೂ ಎಸ್.ಡಿ.ಎಂ. ಬಿ.ಎಡ್. ಕಾಲೇಜು ಜಂಟಿ ಸಹಯೋಗದೊಂದಿಗೆ ಆಯೋಜಿಸಲಾದ ಕಾರ್ಯಕ್ರಮವನ್ನು ಅಗ್ನಿಶಾಮಕ ದಳದ ಠಾಣಾಧಿಕಾರಿ ನೀಲಯ್ಯ ಗೌಡ ಉದ್ಘಾಟಿಸಿದರು.   


 

ಠಾಣೆಯ ಕಛೇರಿ ಅಧಿಕಾರಿ ಉಸ್ಮಾನ್ ಅವರು ಮಾತನಾಡಿ, ವಿವಿಧ ರೀತಿಯ ಅಗ್ನಿ ಅವಘಡಗಳ ಬಗ್ಗೆ ತಿಳಿಸಿದರು. ಮಾನವ ನಿರ್ಮಿತ ಹಾಗೂ ಪ್ರಾಕೃತಿಕ ವಿಕೋಪದಿಂದ ಆಗುವ ಅವಘಡ ಕುರಿತು ವಿವಿಧ ಘಟನೆಗಳ ಕುರಿತು ವಿವರಿಸಿದರು.


 

ಬಾತ್ ರೂಂಗಳಲ್ಲಿ ಗ್ಯಾಸ್ ಗೀಸರ್ ನಿಂದ ಉಂಟಾಗುವ 'ಸ್ವೀಟ್ ಡೆತ್' ಬಗ್ಗೆ ವಿವರಿಸಿದರು. ನೀರು ಬಿಸಿಯಾಗುವ ಪ್ರಕ್ರಿಯೆಯಲ್ಲಿ ಹೊರಸೂಸುವ ಕಾರ್ಬನ್ ಮಾನಾಕ್ಸೈಡ್ ನಿಧಾನವಾಗಿ ವ್ಯಕ್ತಿಯ ಪ್ರಜ್ಞೆ ತಪ್ಪಿಸಿ ಸಾವಿಗೆ ಕಾರಣವಾಗುವ ಬಗ್ಗೆ ತಿಳಿಸಿದರಲ್ಲದೆ, ಗೀಸರ್, ಗ್ಯಾಸ್ ಸಿಲಿಂಡರ್ ಗಳನ್ನು ಸ್ನಾನದ ಕೊಠಡಿಯ ಹೊರಗೆ ಅಥವಾ ಮನೆಯ ಹೊರಗೆ ಅಳವಡಿಸುವಂತೆ ಸಲಹೆ ನೀಡಿದರು.



ಮನೆಯ ಹೊರಗಡೆ ಕಸದ ರಾಶಿಗಳಿಗೆ ಬೆಂಕಿ ಕೊಟ್ಟಾಗ, ವಿದ್ಯುತ್ ಅವಘಡ ಸಂಭವಿಸಿದಾಗ, ಬಾವಿಗೆ ಇಳಿಯುವಾಗ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿಸಿದರು. ಅಗ್ನಿ ಅವಘಡ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.ಅಗ್ನಿಶಾಮಕ ದಳದ ಇತರ ಸಿಬ್ಬಂದಿ ಹಾಗೂ ಕಾಲೇಜಿನ ಪ್ರಾಚಾರ್ಯ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.



ಕಾಲೇಜಿನ ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ಪ್ರಾಚಾರ್ಯ ಸಂತೋಷ ಸಲ್ದಾನ ವಂದನಾರ್ಪಣೆಗೈದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top