ಎಳ್ಳಾಮಾಸಿ ಎಲ್ಲಾರು ಬರ್ರಿ
ಎತ್ತಿನ ಗಾಡಿ ಹೂಡ್ಕೊಂಡು
ಹೊಲಕ್ಕ್ ಹೋಗೂಣು ಬರ್ರಿ
ಅಕ್ಕಾ ತಂಗಿ ಅಣ್ಣಾ ತಮ್ಮಂದ್ರು
ಎಲ್ಲಾರೂ ಬರ್ರಿ ಲಗೂನೆ
ಎಳ್ಳ ಹೊಳ್ಗಿ, ಕರ್ಜಿಕಾಯಿ
ಪಲ್ಯ ಎಣ್ಣಿಗಾಯಿ ತುಂಬಗಾಯಿ
ಸೆಜ್ಜಿ ರೊಟ್ಟಿ ಕಾರೆಳ್ಳು, ಶೇಂಗಾ ಹಿಂಡಿ, ಕೆಂಪು ಚಟ್ನಿ, ಮೆಣಸಿನಕಾಯಿ ಚಟ್ನಿ, ಬಾನ
ಎಲ್ಲಾನೂ ನೆಪ್ಲೆ ಕಟಗೊಂಡು ಹೋಗೂಣು
ಎಲ್ಲಾನೂ ವೈನಾಗಿ ಮಾಡ್ಕೊಂಡು
ಎತ್ತಿನ ಕೊರಳಿಗೆ ಗೆಜ್ಜಿ ಕಟ್ಟಿ,
ಬೆನ್ನ ಮ್ಯಾಲ ಝುಲಾ ಹಾಕಿ
ಶಿಂಗಾರ್ ಮಾಡ್ಕೊಂಡು ಎಲ್ಲಾರೂ
ಹುರುಪಿಂದ ಹೋಗೂಣು ಬರ್ರಿ
ಹಿಂದಿನ ಮನಿ ಮಲ್ಲಕ್ಕ,
ಮುಂದಿನ ಮನಿ ಬಸಕ್ಕ
ಮಗ್ಗಲ ಮನಿ ಗುಂಡಕ್ಕ
ಹಿತ್ತಿಲ ಮನಿ ಕಲ್ಲಕ್ಕ
ಮ್ಯಾಗಲ ಮನಿ ಶಾಂತಕ್ಕ
ಎಲ್ಲಾರೂ ಕೂಡಿ ಹೋಗೋಣು
ಹೊಲಕ್ಕ್ ಹೋಗಿ ಭೂಮ್ತಾಯಿಗೆ
ನಮಸಗಾರ ಮಾಡಿ ಭಗತಿಯಿಂದ
ಹೋಳಗಿ ಕಡಬು ರೊಟ್ಟಿ ಎಲ್ಲ
ನೆವೇದ್ಯ ಮಾಡಿ ಛಂದಾಗಿ ಉಂಡು
ಹೊಲಕ್ಕ್ ಹೋಗಿ ಬರುಣಂತ
ಸುಲಗಾಯಿ, ಸೀತನಿ, ಬಾರಿಕಾಯಿ
ತಿನ್ಕೊಂತ ಎತ್ತಿನ ಗಾಡ್ಯಾಗ ಕುಂತು
ಹಾಡ್ ಹಾಡ್ಕೊಂತ ಬರುಣಾಂತ
ಪರತ ಮನೀಗೆ ಬರ್ರಿ ಎಲ್ಲಾರೂ
- ರೇಖಾ ಮುತಾಲಿಕ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ