ಓದಿಗೆ ಮಾನವೀಯತೆ ಸ್ಪರ್ಶ ಇರಲಿ: ಎಸ್ಕೆ ಕೊನೆಸಾಗರ

Upayuktha
0


ಹುನಗುಂದ: ಇಂದಿನ ಯುವ ಜನಾಂಗ ತೋರಿಕೆಯ ಮೋಹದ ಬಲೆಯಲ್ಲಿ ಸಿಲುಕಿದೆ. ಅವರು ನೈತಿಕ ಮತ್ತು ಮಾನವೀಯ ಮೌಲ್ಯಗಳಿಂದ ವಿಮುಖರಾಗುತ್ತಿದ್ದಾರೆ. ಇದು ತುಂಬಾ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪಿ.ಬಿ. ಧುತ್ತರಗಿ ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ಹೇಳಿದರು.


ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಓದಿಗೆ ನಾಗರಿಕ ಮತ್ತು ಮಾನವೀಯತೆಯ ಸ್ಪರ್ಶ ಬೇಕು. ಪಾಲಕರು ಆಕಾಂಕ್ಷೆ ಹಾಗೂ ಶಿಕ್ಷಕರ ಭರವಸೆಗೆ ಚ್ಯುತಿ ಬರದಂತೆ ಕಲಿಕೆ ಇರಲಿ ಎಂದರು. ಸಿಡಿಸಿ ಉಪಾಧ್ಯಕ್ಷ ಮಹಾಂತೇಶ ಪರೂತಿ ಅಧ್ಯಕ್ಷತೆ ವಹಿಸಿದ್ದರು. ಸಿಡಿಸಿ ಸದಸ್ಯೆ ರೇಖಾ ಬ್ಯಾಳಿ ಮಾತನಾಡಿದರು. ಸದಸ್ಯ ಚಂದ್ರಶೇಖರ ಚಟ್ನಿಹಾಳ, ಹುಚ್ಚೇಶ ಕಾಳಹಸ್ತಿಮಠ ಮತ್ತು ರವಿ ಹಳಪೇಟಿ ಉಪಸ್ಥಿತರಿದ್ದರು.


ವಿದ್ಯಾರ್ಥಿ ಪ್ರತಿನಿಧಿ ವಾಹಿದ್ ಕಡಿವಾಲ, ವಿಜಯಲಕ್ಷ್ಮಿ ಉಪನಾಳ ಮತ್ತು ಉಪನ್ಯಾಸಕಿ ಛಾಯಾ ಪುರಂದರೆ ಅನಿಸಿಕೆ ಹೇಳಿದರು. ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಸ್ವಾಗತಿಸಿದರು. ಶ್ರೀಧರ ಕಾವಲಿ ವಂದಿಸಿದರು. ಎಚ್.ಟಿ. ಅಗಸಿ ಮುಂದಿನ ವಾರ್ಷಿಕ ವರದಿ ಓದಿದರು. ಐ.ಎಚ್. ನಾಯಿಕ ಮತ್ತು ವಿದ್ಯಾ ಬೀಳಗಿ ನಿರೂಪಿಸಿದರು. ಸೇವಂತಿ ಬೆಣಗಿ ಪ್ರಾರ್ಥಿಸಿದರು. ಕಾರ್ಯಕ್ರಮ ಮುನ್ನ ಸರಸ್ವತಿ ಪೂಜೆ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top