ಡಾ ಸುರೇಶ ನೆಗಳಗುಳಿಯವರಿಗೆ ಕಲ್ಲಚ್ಚು ಪ್ರಕಾಶನದಿಂದ ಗೌರವ ಸನ್ಮಾನ

Upayuktha
0


ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಕಲ್ಲಚ್ಚು ಪ್ರಕಾಶನವು ತನ್ನ ಸಂಸ್ಥೆಯ ಇಪ್ಪತ್ತೈದನೇ ವರ್ಷಕ್ಕೆ ಪದಾರ್ಪಣ ಮಾಡುವ ಸವಿ‌ನೆನಪಿಗಾಗಿ ಸ್ಥಳೀಯ ಓಷನ್ ಪರ್ಲ್ ಸಭಾಂಗಣದಲ್ಲಿ ರಜತ ರಂಗು ಎನ್ನುವ ಅದ್ದೂರಿಯ ಸಮಾರಂಭವನ್ನು ಏರ್ಪಡಿಸಿತ್ತು.


ಸಾಹಿತ್ಯ, ಸಂಸ್ಕೃತಿ ಕಲೆ ಸಂಘಟನೆಗಳ ನೆಲೆಯಲ್ಲಿ ಮಹೇಶ್ ನಾಯಕ್ ರವರು ಬಹಳಷ್ಟು ಪ್ರಕಟಣೆಗಳಿಗೆ ಹೆಸರಾಗಿದ್ದು ರಜತ ರಂಗು ಎಂಬ ಬೆಳ್ಳಿ ಹಬ್ಬದ ಆಚರಣೆಯನ್ನು ಕೇಂದ್ರ ಸಾಹಿತ್ಯ ಪರಿಷತ್ತಿನ ನಿವೃತ್ತ ಉಪ‌ಕಾರ್ಯದರ್ಶಿ ಡಾ ಮಹಾಲಿಂಗೇಶ್ವರ ಎಸ್ ಪಿಯವರು ಉದ್ಘಾಟಿಸಿದರು.


ಇದೇ ವೇಳೆ ಪ್ರಕಾಶಕರ ಅನುಗೂಡೂನು ಬಾ ಎಂಬ ಕಥೆ ಕವನ ಸಹಿತವಾದ ವಿಶಿಷ್ಟ ಸಂಕಲನವನ್ನು ಸಾಹಿತಿ ಡಾ ಪ್ರಭಾಕರ ನೀರು‌ಮಾರ್ಗ ಬಿಡುಗಡೆ ಗೊಳಿಸಿದರು.ಡಾ ಪೂರ್ಣಾನಂದ ಬಳ್ಕೂರರು ಕೃತಿ ಪರಿಚಯ ಮಾಡಿದರು‌. ಉದ್ಯಮಿ ಜಯಂತ ನಾಯಕ್ ಪೃಥ್ವೀರಾಜ ನಾಯಕ್ ಡಾ ಸ್ಮಿತಾ ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ಕ.ಸಾ.ಪ ಕೇಂದ್ರ ಸಮಿತಿಯ‌‌ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. 


ಇದೇ ವೇಳೆ ಸಾಹಿತ್ಯ ಮತ್ತಿತರ ಪೂರಕ ಸಾಧಕರನ್ಮು ಸನ್ಮಾನಿಸಲಾಯಿತು. ಇದಲ್ಲದೆ ಕಲ್ಕಚ್ಚು ಪ್ರಕಾಶನದಿಂದ ಹೊರತರಲಾದ ಕೃತಿಕಾರರಾದ ಮಂಗಳೂರಿನ ಕಣಚೂರು ಆಸ್ಪತ್ರೆಯ ವೈದ್ಯಕೀಯ ಸಲಹೆಗಾರ, ಮಂಗಳಾ ಆಸ್ಪತ್ರೆಯ ಕ್ಷಾರ ಚಿಕಿತ್ಸಾ ತಜ್ಞ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿ ಸಹಿತವಾಗಿ ಹಲವರನ್ನು ರಜತ ರಂಗಿನ ತಟ್ಟೆ, ಶಾಲು, ಸಹಿತವಾಗಿ ಸನ್ಮಾನಿಸಲಾಯಿತು.


ಇದೇ ವೇಳೆ ಪುತ್ತೂರು ಸಾಹಿತ್ಯ ಪರಿಷತ್ತಿನ ಅಧ್ಯಕ್ಚ ಉಮೇಶ್ ನಾಯಕ್ ರವರು ಮಹೇಶ ನಾಯಕರನ್ನು‌ಅಭಿಮಾನ‌ ಪೂರ್ವಕವಾಗಿ ಪೇಟ ಶಾಲು ಸಹಿತ ಸನ್ಮಾನಿಸಿದರು.


ಕಲ್ಕಚ್ವು ಮಹೇಶ್ ಸ್ವಾಗತಿಸಿದ ಈ ಸಮಾರಂಭದ ನಿರ್ವಹಣೆ ಹಾಗೂ ಧನ್ಯವಾದವನ್ನು ಚು.ಸಾ.ಪ ಮಾಜಿ ಅಧ್ಯಕ್ಷ ಸುಬ್ರಾಯ ಭಟ್ಟರು ನಿರ್ವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top