ಉಜಿರೆ ಎಸ್‌ಡಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಆಯೋಜನೆ
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ 'ಔಷಧೀಯ ಸಸ್ಯಗಳ ವೈವಿಧ್ಯತೆ ಮತ್ತು ಸಂರಕ್ಷಣೆ' (Diversity and Conservation of Medicinal Plants) ಎಂಬ ವಿಷಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಶನಿವಾರ (ಜ.11) ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ.
ಎಸ್‌ಡಿಎಂಇ ಸೊಸೈಟಿಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಸ್‌ಡಿಎಂಇ ಸೊಸೈಟಿಯ ಇನ್ನೋರ್ವ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಕೇರಳ ಅರಣ್ಯ ಸಂಶೋಧನಾ ಇಲಾಖೆಯ ನಿವೃತ್ತ ಮುಖ್ಯ ವಿಜ್ಞಾನಿ ಡಾ ಯು.ಎಂ ಚಂದ್ರಶೇಖರ್, ಬೆಂಗಳೂರು ಜಿಕೆವಿಕೆಯ ವಿಜ್ಞಾನಿ ಡಾ. ಕೆ.ಎನ್. ಗಣೇಶಯ್ಯ, ಬೆಂಗಳೂರಿನ ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ. ಎಂ.ಜೆ ಪ್ರಭು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಾಟಿ ವೈದ್ಯರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.
"ಇತಿಹಾಸ ಮತ್ತು ಪುರಾಣಗಳಲ್ಲಿ ಔಷಧೀಯ ಸಸ್ಯಗಳ ಉಲ್ಲೇಖ ಮತ್ತು ಮಹತ್ವ" ವಿಷಯದಲ್ಲಿ ಡಾ. ಕೆ.ಎನ್ ಗಣೇಶಯ್ಯ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಹತ್ವದ ಮಾಹಿತಿ ನೀಡಲಿದ್ದಾರೆ.
ತಾಂತ್ರಿಕ ವಿಚಾರಗಳ ಅಧಿವೇಶನದಲ್ಲಿ "ಪಶ್ಚಿಮ ಘಟ್ಟಗಳಲ್ಲಿ ಔಷಧೀಯ ಸಸ್ಯಗಳ ವೈವಿಧ್ಯತೆ'' (Diversity of Medicinal Plants in the Western Ghats) ವಿಷಯದಲ್ಲಿ ಕೇರಳದ ಹಿರಿಯ ವಿಜ್ಞಾನಿ ಡಾ. ಯು.ಎಂ. ಚಂದ್ರಶೇಖರ್; "ಔಷಧೀಯ ಸಸ್ಯಗಳ ಸಂರಕ್ಷಣೆಯಲ್ಲಿ KMPA ಪಾತ್ರ" (Role of KaMPA in the Conservation of Medicinal Plants) ವಿಷಯದಲ್ಲಿ ಬೆಂಗಳೂರಿನ ಡಾ. ಎಂ.ಜೆ ಪ್ರಭು ಹಾಗೂ "ಔಷಧೀಯ ಸಸ್ಯ ಸಂಪನ್ಮೂಲಗಳ ಬಳಕೆ ಮತ್ತು ಸಂರಕ್ಷಣೆ - ಸಾಂಪ್ರದಾಯಿಕ ವಿಧಾನಗಳ ಒಳನೋಟಗಳು" (Use and conservation of Medicinal Plant Resources - Insights from Traditional Practices) ವಿಷಯದಲ್ಲಿ ಮಂಗಳೂರಿನ ಸರಕಾಋಇ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ್ ಭಂಡಾರಿ ಅವರು ಒಳನೋಟಗಳನ್ನು ಬೀರಲಿದ್ದಾರೆ.
ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಸ್‌ಡಿಎಂ (ಸ್ವಾಯತ್ತ) ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಟಿ.ಎನ್. ಕೇಶವ ಮುಖ್ಯ ಅತಿಥಿಯಾಗಿದ್ದು, ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಷ್ಟ್ರೀಯ ವಿಚಾರ ಸಂಕಿರಣದ ಸಂಚಾಲಕರಾಗಿ ಪ್ರಾಧ್ಯಾಪಕರಾದ ಅಭಿಲಾಶ್ ಕೆ.ಎಸ್ ಹಾಗೂ ಸಹ ಸಂಚಾಲಕರಾಗಿ ಶಕುಂತಲಾ ಬಿ ಅವರು ಹೊಣೆಗಾರಿಕೆ ನಿರ್ವಹಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ