ಜ. 25, ಕ.ಸು.ಸ.ಪ.ದಿಂದ ಸಂಗೀತ ಉಚಿತ ಸ್ಪರ್ಧೆಯ ಬಹುಮಾನ ವಿತರಣೆ

Upayuktha
0

ದಾವಣಗೆರೆ: ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಹರಿಹರ ತಾಲ್ಲೂಕು ಘಟಕದ ಆಶ್ರಯದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ದಾವಣಗೆರೆ ಜಿಲ್ಲಾ ಮಟ್ಟದಲ್ಲಿ ಅಂತರ್ಜಾಲ ತಾಣದಲ್ಲಿ ಉಚಿತವಾಗಿ ದೇಶಭಕ್ತಿ ಗೀತೆ, ಸಮೂಹ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಜನವರಿ 25 ರಂದು ಶನಿವಾರ ಸಂಜೆ 4 ಗಂಟೆಗೆ ಹರಿಹರದ ಮುಖ್ಯ ರಸ್ತೆಯಲ್ಲಿರುವ ಗಿರಿಯಮ್ಮ ಕಾಂತಪ್ಪ ಶ್ರೇಷ್ಠಿ ಪ್ರೌಢಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನಿ ಅರುಣಕುಮಾರ್ ತಿಳಿಸಿದ್ದಾರೆ.


ಸಮಾರಂಭದ ಉದ್ಘಾಟನೆಯನ್ನು ಹರಿಹರ ನಗರಸಭೆಯ ಮಾಜಿ ಅಧ್ಯಕ್ಷರಾದ ಬಿ.ರೇವಣಸಿದ್ದಪ್ಪ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಾಧುರಿ ಶೇಷಗಿರಿ ವಹಿಸಿಕೊಳ್ಳಲಿದ್ದಾರೆ. 


ಮುಖ್ಯ ಅತಿಥಿಗಳಾಗಿ ಕ.ಸು.ಸ.ಪ.ಜಿಲ್ಲಾ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್‌ಶೆಣೈ, ಅತಿಥಿಗಳಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಹರಿಹರ ತಾಲ್ಲೂಕು ಘಟಕದ ಗೌರವಾಧ್ಯಕ್ಷರಾದ ಶಿವಕುಮಾರ ಬಿ.ಕರಡಿ, ಕಲಾ ಪೋಷಕರಾದ ಪಿ.ಶ್ರೀನಿವಾಸಮೂರ್ತಿ, ಸಮಿತಿಯ ಸದಸ್ಯರಾದ ಡಾ. ಕೆ.ಜೈಮುನಿ, ಹರಿಹರ ಮಹಿಳಾ ಸಮಾಜದ ಕಾರ್ಯದರ್ಶಿ ಗಾಯತ್ರಿ ನಾಯಕ್. ಆಗಮಿಸಲಿದ್ದಾರೆ. 


ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಂದ ಸಮೂಹ ಸಂಗೀತ ನಡೆಯಲಿದೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಮಾರಂಭವನ್ನು ಯಶಸ್ವಿಗೊಳಿಸಬೆಕಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಹರಿಹರ ತಾಲ್ಲೂಕು ಘಟಕದ ಪದಾಧಿಕಾರಿಗಳು, ಸರ್ವ ಸದಸ್ಯರು ವಿನಂತಿಸಿದ್ದಾರೆ.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top