ದಾವಣಗೆರೆ: ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ 25ವರ್ಷಗಳಿಂದ ನಡೆದು ಬಂದ ಗಾಯತ್ರಿ ಪೂಜೆ ಉಪಾಸನೆ ಬನದ ಹುಣ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶಂಕರಮಠದ ಸಭಾಂಗಣದಲ್ಲಿ ನಿನ್ನೆ ನೆರವೇರಿತು.
ಈ ಧಾರ್ಮಿಕ ಸೇವೆ ಪೂಜೆ ಪರಿವಾರದ ಸಂಚಾಲಕ ಪೂಜಾ ಸೇವಾಕರ್ತ ವಿ. ವೀರಭದ್ರಪ್ಪ ಮತ್ತು ಕುಟುಂಬ ದವರು ನಡೆಸಿಕೊಟ್ಟರು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದರು.
ಪೂಜೆಯ ಸೇವೆಯಲ್ಲಿ ಗಾಯತ್ರಿ ಪರಿವಾರದ ಅಧ್ಯಕ್ಷ ಡಾ. ರಮೇಶ್ ಪಟೇಲ್, ಖಜಾಂಚಿ ಪುರುಷೋತ್ತಮ ಪಟೇಲ್, ಗೌರವ ಅಧ್ಯಕ್ಷ ಕೆ.ಹೆಚ್.ಮಂಜುನಾಥ್, ಸಂಚಾಲಕ ಭಾವನ್ನಾರಾಯಣ, ಎಂ.ಎಸ್.ಪ್ರಸಾದ್, ಪರಿವಾರದ ಸಮಿತಿ ಸದಸ್ಯರಾದ ವಿ.ಕೃಷ್ಣಮೂರ್ತಿ, ಬಿ.ಸತ್ಯನಾರಾಯಣ, ಡಿ.ಹೆಚ್. ಚನ್ನಬಸಪ್ಪ, ವಿಕ್ರಂಜೈನ್, ಸತೀಶ್ ಆರ್.ಎಂ. ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ