ಕಲಾಕುಂಚದ ರಾಜ್ಯ ಮಟ್ಟದ ಕವನ ರಚನೆ ಉಚಿತ ಸ್ಪರ್ಧೆ ಫಲಿತಾಂಶ

Chandrashekhara Kulamarva
0




 ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಮಕರ ಸಂಕ್ರಮಣ ಪ್ರಯುಕ್ತ ರಾಜ್ಯ ಮಟ್ಟದ  ಉಚಿತ ಕವನ ರಚಿಸುವ ಸ್ಪರ್ಧೆ ಹಮ್ಮಿಕೊಂಡಿದ್ದು ಫಲಿತಾಂಶ ಈ ಕೆಳಗಿನಂತಿದೆ ಎಂದು ತೀರ್ಪುಗಾರರಲ್ಲಿ ಒಬ್ಬರಾದ ಕವಯತ್ರಿ, ಸಾಹಿತಿ  ಅನ್ನಪೂರ್ಣ ಪಾಟೀಲ್ ತಿಳಿಸಿದ್ದಾರೆ.


ಪ್ರಥಮ ಬಹುಮಾನ ಕಲಬುರ್ಗಿಯ ಡಾ. ಶಿವಕುಮಾರ ಲಾ. ಸೂರ್ಯವಂಶ, ದ್ವಿತೀಯ ಬಹುಮಾನ ದಕ್ಷಿಣ ಕನ್ನಡ ಜಿಲ್ಲೆಯ ಕರ್ಕಳದ ಡಾ. ಸುಮತಿ ಪಿ., ತೃತೀಯ ಬಹುಮಾನ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಶಿಶಿರ ರಮೇಶ್ ಪಾಟೀಲ್, ಸಮಾಧಾನಕರ ಬಹುಮಾನಗಳು ತುಮಕೂರಿನ ಚಿನ್ನಿರಿ ಅಶೋಶ್ ಪೂಜಾರ್, ಉಡುಪಿ ಜಿಲ್ಲೆಯ ಬಾರ್ಕುರಿಯ  ವನಿತಾ ಮಾರ್ಟಿಸ್, ದಾವಣಗೆರೆಯ  ಕುಸುಮಾ ಲೋಕೇಶ್, ಕೊಡುಗು ಜಿಲ್ಲೆಯ ಮಡಿಕೇರಿಯ ಎಂ.ಡಿ.ಅಯ್ಯಪ್ಪ, ಬೆಂಗಳೂರಿನ ಕನ್ನಡ ರತ್ನ ಹರೀಶ್ ಬಿ.ಎನ್. ಪಡೆದಿರುತ್ತಾರೆ.


ಸ್ಪರ್ಧೆಯ ನಿಯಮದಂತೆ ಯಾವುದೇ ಸಭೆ, ಸಮಾರಂಭ ಇಲ್ಲದೇ ಬಹುಮಾನ ವಿಜೇತರ ವ್ಯಾಟ್ಸಪ್‌ಗೆ ಅವರವರ  ಫಲಿತಾಂಶ ಅಭಿನಂದನಾ ಪತ್ರ ಕಳಿಸಲಾಗುತ್ತದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.


ಬಹುಮಾನ ವಿಜೇತರಾದ ಎಲ್ಲಾ ಕವಿ, ಕವಿಯತ್ರಿಯರಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.


إرسال تعليق

0 تعليقات
إرسال تعليق (0)
To Top