ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲಿಜನ್ ವತಿಯಿಂದ ಕುತ್ಯಾಡಿ ಹೊಳೆಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷೆ ಮಲ್ಲಿಕಾ ಜೆ ರೈ ಹಾಗೂ ಸದಸ್ಯೆ ಅನ್ನಪೂರ್ಣಿಮಾ ಆರ್ ರೈ ಪರಿಸರದ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು. ರಾಜೀವ ರೈ ಕುತ್ಯಾಡಿ ಉಪಸ್ಥಿತರಿದ್ದರು.
ಕಸವನ್ನು ಹೆಕ್ಕುವುದಕ್ಕಿಂತಲೂ, ಕಸವನ್ನು ಹಾಕದ ರೀತಿಯಲ್ಲಿ ಪರಿಸರವನ್ನು ಶುದ್ಧವಾಗಿರಿಸಿಕೊಳ್ಳುವುದರ ಮೂಲಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳುವುದರ ಕುರಿತು ಮಾಹಿತಿ ನೀಡಿದರು. ಪರಿಸರದ ಚಂದ್ರ, ಹರೀಶ, ರೋಹಿಣಿ, ಸಾವಿತ್ರಿ, ವೆಂಕಮ್ಮ, ಲಕ್ಷ್ಮಿ ಹಾಗೂ ಇತರರು ಕಸ ವಿಲೇವಾರಿಗೆ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ