ಮಕ್ಕಳಿಗೆ ಅಪ್ಪ-ಅಮ್ಮನ ಬಗ್ಗೆ ಗೌರವ ಇರಲಿ

Upayuktha
0


ಸಾಗರ: ಮಕ್ಕಳು ಅಪ್ಪ ಅಮ್ಮನ ಬಗ್ಗೆ ಗೌರವ ಇಟ್ಟು ಕೊಳ್ಳಬೇಕು. ಅಪ್ಪ, ಅಮ್ಮ ಮಕ್ಕಳಿಗಾಗಿ ಮಾಡುವ ತ್ಯಾಗ ಬಹಳ ಬೆಲೆಉಳ್ಳದ್ದು. ಇಂದು ಮಕ್ಕಳು ಅಪ್ಪ ಅಮ್ಮನನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡುವ ಸಂಸ್ಕೃತಿ ಬೆಳೆದು ಬಂದಿದೆ. ಹೆತ್ತವರನ್ನು ಗೌರವದಿಂದ ಕಾಣುತ್ತಿರುವ ಸಂಸ್ಕೃತಿ ಉಳ್ಳ ದೇಶವೆಂದರೆ ಭಾರತ ಒಂದೇ. ಇದು ಎಲ್ಲರಿಗೂ ಮಾದರಿಯಾಗಿದೆ. ಇತ್ತೀಚೆಗೆ ಹೆತ್ತವರ ಮಾತು ನಿರ್ಲಕ್ಷ ವಾಗುತ್ತಿದೆ. ಸಂಬಂಧಗಳು ದೂರವಾಗುತ್ತಿದೆ. ತಂದೆ, ತಾಯಿಯರ ಮಾತನ್ನು ಪರಿಪಾಲನೆ ಮಾಡಿದ ಅನೇಕ ಉದಾಹರಣೆಗಳಿವೆ. ಆದ್ದರಿಂದ ಅವರನ್ನು ಗೌರವಿಸುವ ಮಹತ್ವ ಚಿಕ್ಕಂದಿನಿಂದಲೇ ಬೆಳೆಸಿಕೊಳ್ಳಬೇಕು ಎಂದು ಶಿವಮೊಗ್ಗ ಬಿ.ಜೆ.ಎಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಂದೀಪ ಶೆಟ್ಟಿ ತಿಳಿಸಿದರು.


ಅವರು ಸಾಗರ ತಾಲೂಕಿನ ಯಡಜಿಗಳೆಮನೆ ಇಕ್ಕೇರಿ ತುಂಬೆ ಸುಬ್ಬರಾವ್ ಸಭಾಂಗಣದಲ್ಲಿ ಆರ್ಯಮಿತ್ರ ನೀಡಿದ ಅಪ್ಪ, ಅಮ್ಮದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಪರಿಷತ್ಅಧ್ಯಕ್ಷ ವಿ.ಟಿ. ಸ್ವಾಮಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಕೆಲಸಆಗಬೇಕು. ಮಕ್ಕಳನ್ನು ಅಂಕಗಳ ಹಿಂದೆ ಬೀಳಿಸದೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕಲಿಸಬೇಕು ಎಂದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ದತ್ತಿದಾನಿ ಜಿ.ಸ್. ಆರ್ಯಮಿತ್ರ ಬಾಲ್ಯದಲ್ಲಿಯೇ ಹೆತ್ತವರನ್ನು ದೇವತೆಗಳಂತೆ ಆದರಿಸಬೇಕು. ಮಕ್ಕಳಿಗೆ ಅದರ ಅರಿವು ಮೂಡಿಸಲು ಶಾಲಾ ಮಕ್ಕಳಿಗಾಗಿ ಅಪ್ಪ, ಅಮ್ಮ ದತ್ತಿನಿಧಿ ಇಟ್ಟಿರುತ್ತೇನೆ ಎಂದರು.


ಪ್ಲೇ ಇಕ್ಕೇರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ರತ್ನಾಕರ ಎಸ್.ಟಿ., ಕ.ಸಾ.ಪ. ಸಾಗರ ಸಂಘಟನಾ ಕಾರ್ಯದರ್ಶಿ ಡಾ. ಪ್ರಸನ್ನ ಟಿ, ನಾರಾಯಣಮೂರ್ತಿ ಕಾನಗೋಡು ಉಪಸ್ಥಿತರಿದ್ದರು. ರಕ್ಷಾ, ಸೋನು ಪ್ರಾರ್ಥಿಸಿದರು. ಅಧ್ಯಾಪಕರಾದ ಶ್ರೀಕಾಂತ ಸ್ವಾಗತಿಸಿದರು. ರಾಮಚಂದ್ರ ಹೆಗಡೆ ವಂದನಾರ್ಪಣೆ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top