ಸೋಮೇಶ್ವರದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ: 3,000ಕ್ಕೂ ಹೆಚ್ಚು ಮಂದಿ ಸಾಮೂಹಿಕ ಪ್ರಾರ್ಥನೆ

Upayuktha
0


ಬಂಟ್ವಾಳ: ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿ ಉಡುಪಿ, ದಕ್ಷಿಣ ಕನ್ನಡ , ಕಾಸರಗೋಡು, ಕಣ್ಣೂರು ಜಿಲ್ಲೆ ಇವರ ಕರೆಯ ಮೇರೆಗೆ ಸೋಮೇಶ್ವರ ಸಮುದ್ರ ಕಿನಾರೆಯಲ್ಲಿ ಭಾನುವಾರ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದಲ್ಲಿ 3,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಸಂಜೆ 4 ಗಂಟೆಯಿಂದ  ಸೂರ್ಯಾಸ್ತದವರೆಗೆ 6 ಬಾರಿ ಶ್ರೀ ವಿಷ್ಣು ನಾಮ ಸ್ತೋತ್ರ ಪಠಣ ಮಾಡಿ ಕೊನೆಗೆ ಓಂ ನಮೋ ವಾಸುದೇವಾಯ ನಮಃ ಮಂತ್ರದ ಮೂಲಕ ಸಮಾಪನಗೊಂಡಿತು.


ಸೋಮೇಶ್ವರ ದೇವಾಲಯದ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ ಮೂರ್ಕಜೆ ಗುರುಕುಲದ ಪ್ರಮುಖರಾದ ಸೀತಾರಾಮ ಕೆದಿಲಾಯರು ಮಾತನಾಡಿದರು. ವಿನಮ್ರತೆಯಿಂದ ಪ್ರಕೃತಿ ಮಾತೆಯಲ್ಲಿ ಪ್ರಾರ್ಥನೆ ಮಾಡುವುದರಿಂದ ಪ್ರಕೃತಿ ವಿಕೋಪ ಮೊದಲಾದ ಸಂಕಷ್ಟಗಳು ದೂರವಾಗುತ್ತವೆ. ಸಮುದ್ರ ಕೊರೆತವನ್ನು ತಡೆಯುವಂತೆ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಮಾಡಿರುವುದು ಸಕಾಲಿಕವಾಗಿದೆ. ಸಮಸ್ತ ಸಮಾಜ, ಭಾರತ ದೇಶ ಒಳಿತಾಗುವಂತೆ  ಸಾಮೂಹಿಕವಾಗಿ ಪ್ರಾರ್ಥನೆ ಮಾಡುವುದರಿಂದ ವಿಶ್ವಕ್ಕೇ ಒಳಿತಾಗುವುದು ಎಂದರು.

 


ಕೇಂದ್ರ ಸಮಿತಿ ಸಂಯೋಜಕ ಕೈಯೂರು ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಪುತ್ತೂರು ತಾಲೂಕು ಸಂಚಾಲಕರಾದ ಚಂದ್ರಶೇಖರ ಆಳ್ವ, ಸದಾನಂದ ರಾವ್, ಉಳ್ಳಾಲ ತಾಲೂಕು ಸಂಚಾಲಕ ರವಿ ಮಂಜನಾಡಿ, ಬೆಳ್ತಂಗಡಿ ತಾಲೂಕು ಸಂಯೋಜಕ ಗಣೇಶ ಭಟ್ ಪುತ್ರೋಟು, ಜಿಲ್ಲಾ ಸಂಚಾಲಕ ಫ್ರೊ. ವೇದವ್ಯಾಸ ರಾಮಕುಂಜ  ನೇತೃತ್ವ ವಹಿಸಿದ್ದರು. ಸಂಘಟಕರಾದ ಅನಾರು ಕೃಷ್ಣ ಶರ್ಮ, ರಾಜಾರಾಮ ಐತಾಳ್, ಪ್ರೊ. ರಾಜಮಣಿ ರಾಮಕುಂಜ, ಫ್ರೊ. ಸುಬ್ರಾಯ ಮಡಿವಾಳ, ಡಾ. ಪ್ರದೀಪ್ ಕುಮಾರ್ ಬೆಳ್ತಂಗಡಿ,  ತೇವು ತಾರನಾಥ ಕೊಟ್ಟಾರಿ, ಜಯಾನಂದ ಪೆರಾಜೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಮಂಗಳೂರು, ಉಳ್ಳಾಲ ತಾಲೂಕುಗಳಿಂದ ಸಹಸ್ರಾರು ಮಂದಿ ಮಾತೆಯರೂ, ವಿದ್ಯಾರ್ಥಿಗಳು ಸೇರಿ ವಿಷ್ಣು ಸಹಸ್ರನಾಮ ಪಠಣ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top