ಅಯೋಧ್ಯೆಯ ಬಾಲರಾಮನ ಭವ್ಯಮಂದಿರಕ್ಕೆ ಮೊದಲ ವರ್ಷ; ಜಗಕೆಲ್ಲ ಪಸರಿಸೋಣ ಹರ್ಷ
ಭಾರತದ ಅಸ್ಮಿತೆ, ಅಯೋಧ್ಯಾಪತಿ ಶ್ರೀರಾಮಚಂದ್ರನ ಭವ್ಯ ಮಂದಿರವು ರಾಮಜನ್ಮಭೂಮಿಯಲ್ಲಿ ಪ್ರಾಣಪ್ರತಿಷ್ಠೆಯಾಗಿ ಮೊದಲ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಉಪಯುಕ್ತ ನ್ಯೂಸ್ ಬಳಗವು ಒಂದು ವಿಶೇಷ ಸಂಚಿಕೆಯನ್ನು ಪ್ರಕಟಿಸುತ್ತಿದೆ.
ಅಯೋಧ್ಯೆಯ ಬಾಲರಾಮನ ಮಂದಿರ ಪ್ರಾಣ ಪ್ರತಿಷ್ಠೆಗೆ ಒಂದು ತಿಂಗಳು ಮೊದಲೇ ಆರಂಭಿಸಿ ಸತತ 150 ದಿನಗಳ ಕಾಲ ಪ್ರತಿದಿನವೂ ರಾಮಾಯಣದ ಕಥಾ ಲೇಖನ ಸರಣಿಯನ್ನು ಉಪಯುಕ್ತ ನ್ಯೂಸ್ ಪ್ರಕಟಿಸಿದ್ದು ಡಿಜಿಟಲ್ ಮಾಧ್ಯಮಗಳಲ್ಲೇ ಮೊದಲ ದಾಖಲೆಯಾಗಿದೆ. ಈ ಹಿನ್ನೆಲೆಯಲ್ಲಿ ಈಗ ರಾಮ ಮಂದಿರದ ಪ್ರಾಣಪ್ರತಿಷ್ಠೆಯ ಮೊದಲ ವರ್ಷಾಚರಣೆ ಸಂದರ್ಭಕ್ಕೆ ವಿಶೇಷ ಸಂಚಿಕೆ ಪ್ರಕಟಣೆಗೆ ಮುಂದಾಗಿದ್ದೇವೆ.
ರಾಮಾಯಣದ ಸನ್ನಿವೇಶಗಳ ಕುರಿತು ವರ್ಣಮಯ ಚಿತ್ರಗಳ ರಚನೆ ಹಾಗೂ 15 ವರ್ಷದ ಒಳಗಿನ ಮಕ್ಕಳಿಗೆ ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯನ ಪಾತ್ರಗಳ ವೇಷ ಹಾಕಿಸಿ ಫೋಟೋ ತೆಗೆಸಿ ಕಳುಹಿಸಿದರೆ ಉಪಯುಕ್ತ ನ್ಯೂಸ್ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
ರಾಮಾಯಣದ ಸನ್ನಿವೇಶಗಳ ಚಿತ್ರಗಳನ್ನು ರಚಿಸಿ ಸಾರ್ವಜನಿಕ ಓದುಗರೂ ಕಳುಹಿಸಬಹುದು. ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯನ ಪಾತ್ರಗಳ ವೇಷದಲ್ಲಿ ಫೋಟೋ ಕಳುಹಿಸಲು 15 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶವಿದೆ.
ಆಸಕ್ತರು ಜನವರಿ 12, 2025ರ ಒಳಗಾಗಿ ವರ್ಣಮಯ ಚಿತ್ರಗಳು ಮತ್ತು ಫೋಟೋಗಳನ್ನು ನಮಗೆ ತಲುಪುವಂತೆ ಇ-ಮೇಲ್ ಮೂಲಕ ಕಳುಹಿಸಬೇಕು.
ಕಳುಹಿಸುವ ವಿಳಾಸ: editor.upayuktha@gmail.com
ಹೆಚ್ಚಿನ ಮಾಹಿತಿಗೆ- 9448726723 / 7019126946 ಸಂಖ್ಯೆಗಳನ್ನು ಸಂಪರ್ಕಿಸಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ