ಬೆಂಗಳೂರು : ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ಯುವಕರಲ್ಲಿ ಶೌರ್ಯ ಮತ್ತು ಪರಾಕ್ರಮ ಜಾಗೃತಿ ಮೂಡಿಸಲು ಅವರಲ್ಲಿ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಜಾಗೃತಗೊಳಿಸಲು ಶೌರ್ಯಜಾಗೃತಿ ಶಿಬಿರವನ್ನು ಇಲ್ಲಿನ ವಿಜಯನಗರದಲ್ಲಿ ಆಯೋಜಿಸಲಾಗಿತ್ತು. ಎಲ್ಲಾ ಯುವಕರಿಗೆ ಸ್ವರಕ್ಷಣೆಯೊಂದಿಗೆ ರಾಷ್ಟ್ರರಕ್ಷಣೆ ಹಾಗೂ ಧರ್ಮರಕ್ಷಣೆಗಾಗಿ ಲಾಠಿ ತರಬೇತಿಯನ್ನು ನೀಡಲಾಯಿತು.
ಭಾರತದಾದ್ಯಂತ ಕೆಲವು ವರ್ಷಗಳಿಂದ ಸಮಿತಿಯು ಯುವಕರಿಗೆ ಶೌರ್ಯ ಜಾಗೃತಿ ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದು ಸಾವಿರಾರು ಹಿಂದೂ ಯುವಕರು ಇದರ ಲಾಭವನ್ನು ಪಡೆಯುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು, ಮಹಾರಾಣಾ ಪ್ರತಾಪ್ ಸಿಂಹ, ಶ್ರೀಕೃಷ್ಣ ದೇವರಾಯರಂತಹ ಮಹಾನ್ ಚೇತನಗಳು ತಮ್ಮ ಶೌರ್ಯ, ಸಾಹಸ, ಪರಾಕ್ರಮಗಳಿಂದ ಭಾರತವನ್ನು ದುಷ್ಟಶಕ್ತಿಗಳಿಂದ ರಕ್ಷಿಸಿ ಸದೃಢವಾಗಿ ಆಳ್ವಿಕೆಯನ್ನು ಮಾಡಿದ್ದರು.
ಅವರೆಲ್ಲರ ಶೌರ್ಯ ಪರಾಕ್ರಮ ಇಂದಿನ ಪೀಳಿಗೆಗಳಿಗೆ ಆದರ್ಶಪ್ರಾಯವಾಗಿದೆ. ಭಾರತವನ್ನು ವಿಶ್ವಗುರುವನ್ನಾಗಿಸುವಲ್ಲಿ ಇಂದಿನ ಯುವಕರ ಪಾತ್ರ ಮಹತ್ವದ್ದಾಗಿದೆ. ಅವರನ್ನು ಸದೃಢವಾಗಿಸುವ ಜೊತೆಗೆ ಆತ್ಮಸ್ಥೈರ್ಯವನ್ನು ಜಾಗೃತಗೊಳಿಸುವ ಕಾರ್ಯವು ಇಂತಹ ತರಬೇತಿ ಶಿಬಿರಗಳಿಂದ ಸಾಧ್ಯವಾಗುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ