ಶ್ರೀ ಗಣೇಶ ನೃತ್ಯಾಲಯದ 11ನೇ ವಾರ್ಷಿಕೋತ್ಸವ

Chandrashekhara Kulamarva
0

ಯುವ ಪ್ರತಿಭೆಗಳ ಕರ್ನಾಟಕ ಶಾಸ್ತ್ರೀಯ ಸಂಗೀತ - ಭರತನಾಟ್ಯ ಕಾರ್ಯಕ್ರಮ ಮತ್ತು ಕಲಾ ಸಾಧಕರಿಗೆ 'ಕಲಾ ಕೇಸರಿ' ಪುರಸ್ಕಾರ ಪ್ರದಾನ 


 



ಬೆಂಗಳೂರು: ನೃತ್ಯಪಟು ದಂಪತಿಗಳಾದ ವಿದುಷಿ ಭಾವನ ಗಣೇಶ್ ವಿದ್ವಾನ್ ಎಂ ಡಿ ಗಣೇಶ್ ನೇತೃತ್ವದಲ್ಲಿ ಬೆಂಗಳೂರು ಅರಿಶಿನಕುಂಟೆಯ ಸಂಗೀತ ಮತ್ತು ನೃತ್ಯ ತರಬೇತಿಯ ಗಣೇಶ ನೃತ್ಯಾಲಯದ 11ನೇ ವಾರ್ಷಿಕೋತ್ಸವ ವನ್ನು ಜೆಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.

  

 ನೃತ್ಯಶಾಲೆಯ ಶಿಷ್ಯವೃಂದದ ಕಣ್ಮಣಿಗಳು ನಾಟ್ಯನಿವೇದನೆಯನ್ನು ನಡೆಸಿಕೊಟ್ಟರು. ಚೆನ್ನೈನ ಗೋಪಾಲಪುರಂ ಸಹೋದರಿಯರಾದ ಹೆಚ್ ಆರ್ ಕಾಮಾಕ್ಷಿ ಮತ್ತು ಮೀನಾಕ್ಷಿ ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ,ನೃತ್ಯಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡುತ್ತಿರುವ ಹಿರಿಯ ಕಲಾವಿದರಾದ ಚೆನ್ನೈನ ಗುರು ಕೃಪಾ ಸಂಗೀತ ಶಾಲೆಯ ನಿರ್ದೇಶಕ ತಬಲ ವಿದ್ವಾನ್ ಪಂಡಿತ್ ಎಚ್. ಪಿ ರಾಮಮೂರ್ತಿ, 


ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ಕಲಾ ನಿರ್ದೇಶಕ ನೃತ್ಯ ಉತ್ಸವ ಸಂಘಟಕ ಸಾಯಿ ವೆಂಕಟೇಶ್, ಕಲಾಯೋಗಿ ಪ್ರತಿಷ್ಠಾನದ ನಿರ್ದೇಶಕ ಕಲಾ ವಿಮರ್ಶಕ ಎಸ್ ನಂಜುಂಡ ರಾವ್, ಪ್ರಸಿದ್ಧ ಭರತನಾಟ್ಯ ನೃತ್ಯಪಟು ವಿದ್ವಾನ್ ಡಾ ಸಾಗರ್ ಟಿ ಎಸ್, ನೃತ್ಯ ಛಾಯಾಗ್ರಹಕ ಮತ್ತು ವಾಸ್ತುಶಿಲ್ಪ ವಿನ್ಯಾಸಕ ಜಯಸಿಂಹರೆಡ್ಡಿ, ನೃತ್ಯ ನಿರೂಪಕ ಸುಗ್ಗನಹಳ್ಳಿ ಷಡಕ್ಷರಿ , ಪ್ರಸಾದನ ಕಲಾವಿದ ಸೂರ್ಯದೇವ ಬಿ ರವರುಗಳಿಗೆ  'ಕಲಾ ಕೇಸರಿ' ಪುರಸ್ಕಾರ ನೀಡಿ ಗೌರವಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top