ಬಳ್ಳಾರಿ: ಜಿಲ್ಲೆಯ ಗಡಿಭಾಗವಾದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ, ಆಲೂರು ತಾಲೂಕಿನ ಮೆದೆಹಾಳು ಗ್ರಾಮದಲ್ಲಿ ಜ 21 ಮತ್ತು 22 ರಂದು ಶ್ರೀ ದೇವಮ್ಮ ದೇವಿ ಮತ್ತು ಶ್ರೀ ಮಾರೆಮ್ಮ ದೇವಿಯ ಕುಂಭೋತ್ಸವ, ದೇವರ ಕಾರ್ಯಕ್ರಮವನ್ನು ಗ್ರಾಮದ ಗುರು ಹಿರಿಯರು, ಸದ್ಭಕ್ತರು ಹಮ್ಮಿಕೊಂಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಶ್ರೀ ಅಜಾತ ಶಂಭುಲಿಂಗ ಸ್ವಾಮಿಗಳು, ಜಂಗಮರ ಹೊಸಹಳ್ಳಿ, ಇವರ ಆಶೀರ್ವಾದದಿಂದ ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1946ನೇ ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಠ ಮಾಸ ಬಹುಳ ಸಪ್ತಮಿ ಮಂಗಳವಾರ ಬೆಳಿಗ್ಗೆ 7.30 ರಿಂದ 9.00 ರವರೆಗೆ ಗಂಗೆಪೂಜೆ ಕಳಸ ತರುವುದು. ತದನಂತರ ಶ್ರೀ ದೇವಮ್ಮ ದೇವಿ ಮತ್ತು ಶ್ರೀ ಮಾರೆಮ್ಮ ದೇವಿಯ ಮೆರವಣಿಗೆ ಜರಗುವುದು. ಬುಧವಾರ ಬೆಳಗಿನಜಾವ 1.45 ರಿಂದ 2.45 ರವರೆಗೆ ಸಲ್ಲುವ ಶುಭ ಸಮಯದಲ್ಲಿ ಮೇಟಿಕುಂಭ ಜರುಗುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ