ಬಳ್ಳಾರಿ: ಶ್ರೀ ಮೇಧಾ ಕಾಲೇಜಿನಲ್ಲಿ ಗುರುವಂದನಾ

Upayuktha
0
ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ಆಯೋಜನೆ


ಬಳ್ಳಾರಿ: ಸಮರ್ಥನಂ ಅಂಗವಿಕಲರ ಸಂಸ್ಥೆಯು ವರ್ಷಕ್ಕೆ ಭಾರತಧ್ಯಾಂತ 5,000ಕ್ಕಿಂತ ಹೆಚ್ಚು ವಿಕಲಚೇತನರಿಗೆ ಉನ್ನತ ಶಿಕ್ಷಣವನ್ನು ಒದಗಿಸುತ್ತಾ ಬಂದಿದೆ, ಹಾಗೂ ಬಳ್ಳಾರಿ ಸಮರ್ಥನಂ ಅಂಗವಿಕಲರ ಸಂಸ್ಥೆಯು ಕಳೆದ ಮೂರು ನಾಲ್ಕು ವರ್ಷಗಳಿಂದ 800 ಕ್ಕೂ ಹೆಚ್ಚು ವಿಕಲಚೇತನರಿಗೆ ಶಿಕ್ಷಣ ಒದಗಿಸಿದೆ, ಈ ವ್ಯವಸ್ಥೆಯಲ್ಲಿ ಶಾಲಾ ಶುಲ್ಕ, ಊಟ, ವಸತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಠ್ಯಪುಸ್ತಕ ಇನ್ನು ಮುಂತಾದ ಸೌಲಭ್ಯಗಳನ್ನು ಒದಗಿಸುತ್ತಾ ಬರುತ್ತಿದೆ. 


ಕಳೆದ ನಾಲ್ಕು ವರ್ಷಗಳಿಂದ ಬಳ್ಳಾರಿ ಅಂಗವಿಕಲರ ಸಂಸ್ಥೆಯ ವಿದ್ಯಾರ್ಥಿಗಳು ಬಳ್ಳಾರಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಮತ್ತು ವಿದ್ಯಾಭ್ಯಾಸ ಮುಗಿಸಿ ಕೆಲವರು ಉದ್ಯೋಗದಲ್ಲಿ ಸೇರ್ಪಡೆಯಾಗಿದ್ದಾರೆ. ಈ ವಿದ್ಯಾರ್ಥಿಗಳ ಯಶಸ್ವಿ ದಾರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣರಾದ ಸುಮಾರು 15 ಕ್ಕೂ ಹೆಚ್ಚು ಗುರು ವೃಂದಕ್ಕೆ ಗುರು ವಂದನ ಕಾರ್ಯಕ್ರಮವನ್ನು ಬಳ್ಳಾರಿ ನಗರ ಕೋಟೆಯ ಶ್ರೀ ಮೇಧಾ ಪದವಿ ಮಹಾವಿದ್ಯಾಲಯದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆಯು ಹಾಗೂ ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕಿನವರು ಆಯೋಜಿಸಿದ್ದರು.


ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕರು ಮತ್ತು ಭಾರತ ಅಂಧರ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಡಾ: ಮಹಾಂತೇಶ್ ಜಿಕೆ ಉದ್ಘಾಟಿಸಿ, ವಿದ್ಯಾರ್ಥಿ ಜೀವನದ ಬದುಕು ಬೆಳಗುವುದು ಸಮರ್ಪಕ ಶಿಕ್ಷಕರಿಂದ ಮಾತ್ರ ಸಾಧ್ಯ ಉತ್ತಮ ಶಿಕ್ಷಕರ ಸಮಾಜಕ್ಕೆ ಮಾದರಿ ಆಗುತ್ತಾರೆ ಎಂದು ಹೇಳಿದರು.


ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್  ನಿರ್ದೇಶಕ ಪೃಥ್ವಿರಾಜ್ ವೈಜೆ ಮಾತನಾಡಿ, ವಿಶೇಷ ಚೇತನರು ಯಾವ ರೀತಿಯಲ್ಲೂ ಇತರರಿಗೆ ಕಡಿಮೆ ಸಾಮರ್ಥ್ಯ  ಹೊಂದಿಲ್ಲ. ಭಾರತೀಯ ಆಡಳಿತಾತ್ಮಕ ಸೇವೆ ಸೇರಿ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಜನಸೇವೆ ಮಾಡುವ ಅರ್ಹತೆ ಅವರಲ್ಲಿ ಇದೆ ಎಂದು ತಿಳಿಸಿದರು.


ಬಳ್ಳಾರಿ ನಗರದ ಸುಪ್ರಸಿದ್ಧ ದಂತ ವೈದ್ಯರು ಡಾ. ಮಿತೇಶ್ ಕಠಾರಿಯ ಮಾತನಾಡಿ, ಭಾರತೀಯ ಇತಿಹಾಸದಲ್ಲಿ ಗುರುಪರಂಪರೆಯು ಸನಾತನವಾದದ್ದು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಮತ್ತು ಶ್ರೇಷ್ಠವಾದದ್ದು ವಿದ್ಯಾರ್ಥಿಗಳ ಆಸಕ್ತಿಗಳನ್ನು ವೃದ್ಧಿಸುವ ಅವರ ಬದುಕಿಗೆ ಗುರಿಯನ್ನು ರೂಪಿಸಿಕೊಡುವ ಶಿಕ್ಷಕರ ಪಾತ್ರವೂ ಮಹತ್ವದ್ದು ಎಂದು ಹೇಳಿದರು.


ಈ ಕಾರ್ಯಕ್ರಮದಲ್ಲಿ ರಾಮ್ ಕಿರಣ್ ಕೆ ಸಂಸ್ಥಾಪಕರು & ಪ್ರಾಂಶುಪಾಲರ್ ಶ್ರೀ ಮೇಧಾ ಪದವಿ ಮಹಾವಿದ್ಯಾಲಯ ಬಳ್ಳಾರಿ, ಮಾತನಾಡಿ ವಿಶೇಷಚೇತನರು ಎಲ್ಲಾ ಕ್ಷೇತ್ರದಲ್ಲಿ ತಮ್ಮದೇ ಆದ ಯಶಸ್ಸು ಅನ್ನು ಹೊಂದಲು ಸಮರ್ಥನಂ ಅಂಗವಿಕಲರ ಸಂಸ್ಥೆಯು ದಾರಿದೀಪವಾಗಿದೆ ಎಂದು ಈ ಕಾರ್ಯಕ್ರಮದ ಮೂಲಕ ತಿಳಿಸಲು ಇಚ್ಚಿಸುತ್ತೇನೆ ಎಂದರು.


ಈ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿದ ನಗರದ ಶ್ರೀ ಗುರು ಕೊಟ್ಟೂರು ಸ್ವಾಮಿ ಪದವಿ ಪೂರ್ವ ಕಾಲೇಜ್, ಬಳ್ಳಾರಿ ಉಪನ್ಯಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ (ರಿ.) ಜಿಲ್ಲಾ ಅಧ್ಯಕ್ಷರು ಬಳ್ಳಾರಿ ಶ್ರೀಯುತ ಪಂಚಾಕ್ಷರಯ್ಯ ಸಮರ್ಥನಂ ಅಂಗವಿಕಲರ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು. 


ಮಂಜೇಶ್ ಆರ್ಕಿಟೆಕ್ ಬಳ್ಳಾರಿ, ಡಾ. ರೇಣುಕಾದೇವಿ ಕಠಾರಿಯ,ಬಿ. ಎಸ್. ರಾಘವೇಂದ್ರ ಮತ್ತು ಸಮರ್ಥನಂ ಸಂಸ್ಥೆಯ ಬಳ್ಳಾರಿ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಸುನಾದ ತಂಡದ ಸಂಯೋಜರಾದ ಅನುಷ ಹಿರೇಮಠ ಮತ್ತು ಅವರ ತಂಡದವರು ಉಪಸ್ಥಿತರಿದ್ದರು.


ಜ.5ರಂದು ರಂದು ಬಳ್ಳಾರಿ ನಗರದ ಶ್ರೀ ಸದ್ಗುರು ಮಹಾದೇವ ತಾತ ಮಠದ ಆವರಣದಲ್ಲಿ, ಆಯೋಜಿಸುವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆಯ ಅನುಷ ಹಿರಮಠ ಮತ್ತು ಸುನಾದ ತಂಡದಿಂದ ವಚನ, ಗಾಯನ ಮತ್ತು ನೃತ್ಯದ ಮೂಲಕ ನೇರದ ಭಕ್ತಾದಿಗಳಿಗೆ ಮನರಂಜನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಡಾ: ಮಹಾಂತೇಶ್ ಜಿ.ಕೆ. ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕರು ಹಾಗೂ ಭಾರತ ಅಂಧರ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು. ಮತ್ತು ಬಸವರಾಜ್ ಹಿರೇಮಠ ಗುರುಗಳು ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆಯ ಬಳ್ಳಾರಿಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top