ಬಳ್ಳಾರಿ: ನಗರದ ಹೊರವಲಯದಲ್ಲಿರುವ ಬೆಸ್ಟ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ' ಬೀಳ್ಕೊಡುಗೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಬೆಸ್ಟ್ ಸಂಸ್ಥೆಯ ಸಂಸ್ಥಾಪಕರಾದ ಕ್ಷೊನಂಕಿ ರಾಮಪ್ಪರವರು ಆಗಮಿಸಿ ಉದ್ಘಾಟಿಸಿದರು.
ಕಾಲೇಜಿನ ಪ್ರಾಚಾರ್ಯ ಕೆ ವೆಂಕಟೇಶ್ವರ್ ರಾವ್ ಅವರು, ವಿದ್ಯಾರ್ಥಿಗಳೇ ಶಿಸ್ತು ಸಮಯಪ್ರಜ್ಞೆ, ಯಶಸ್ಸು ಗಳಿಸಲು ಆತ್ಮವಿಶ್ವಾಸ ಬಹಳ ಆ ಮುುಖ್ಯ ದಿಸೆಯಲ್ಲಿ ಓದಬೇಕು, ಜೀವನದಲ್ಲಿ ಮುಂದೆ ಬರಬೇಕು ಎಂದು ಹೇಳಿದರು. ಉಪಪ್ರಾಚಾರ್ಯ ಜಿ ಶ್ರೀನಿವಾಸ ರೆಡ್ಡಿಯವರು ತಮಗೆ ಸಿಗುವ ಅವಕಾಶವನ್ನು ಶ್ರದ್ಧೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ಮನ್ನೆ ಶ್ರೀನಿವಾಸುಲು ಅವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸುತ್ತಾ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕೆು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಭರತನಾಟ್ಯ ಕಥಕ್ಕಳಿ, ಜನಪದ ನೃತ್ಯ ತುಂಬಾ ಅದ್ಭುತವಾಗಿ ನಡೆದು ಬಂದವು. ರಾಜ್ಯ ಮತ್ತು ವಲಯಮಟ್ಟದ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಟ್ರೋಫಿಗಳನ್ನು ನೀಡಲಾಯಿತು. ವಿದ್ಯಾರ್ಥಿನಿಯಾದ ಅದಮ್ಯ ಸ್ವಾಗತಿಸಿದರು, ಕಾಲೇಜಿನ ಹಳೆಯ ವಿದ್ಯಾರ್ಥಿ ಡಾ|| ಶಿವಶರಣ್ ರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಕೆ. ರಾಮಪ್ಪ, ಶ್ರೀಮತಿ ನಿರ್ಮಲಾ ರಾಮಪ್ಪ, ಕಾರ್ಯದರ್ಶಿ ಎಮ್. ಶ್ರೀನಿವಾಸುಲು , ಪ್ರಾಚಾರ್ಯ ಕೆ. ವೆಂಕಟೇಶ್ವರರಾವ್, ಉಪ ಪ್ರಾಚಾರ್ಯ ಜಿ. ಶ್ರೀನಿವಾಸರೆಡ್ಡಿ, ರಾಜ್ಯ ಪಠ್ಯಕ್ರಮ ಶ್ರೀಮತಿ ವಿಜಯಲಕ್ಷ್ಮಿ, ಮುಖ್ಯೋಪಾಧ್ಯಾಯ ಅರುಣಾ ಕುಮಾರಿ ಹಾಗೂ ಐ.ಸಿ.ಎಸ್.ಇ. ಶಾಲೆಯ ಪ್ರಾಂಶುಪಾಲ ಲೋಕಪ್ಪ ಮೈಲಾಪುರ , ಶ್ರೀವ್ಶತಿ ಮತ್ತು ವಸತಿನಿಲಯ ಪಾಲಕ ಸುಬ್ಬಾ ರಾಯುಡು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯಾದ ಅನನ್ಯ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ