ಬಳ್ಳಾರಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವ

Upayuktha
0

ಬಲಿಷ್ಠ ಮತ್ತು ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ಭಾರತ ದೇಶದ್ದಾಗಿದೆ-ಮೀನಳ್ಳಿ ತಾಯಣ್ಣ

 


   

               

ಬಳ್ಳಾರಿ: ಬಳ್ಳಾರಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ  76ನೇ ಗಣರಾಜ್ಯೋತ್ಸವವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ರಾಷ್ಟ್ರಪಿತ  ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ, ಧ್ವಜಾರೋಹಣವವನ್ನು ನೆರವೇರಿಸಿದರು.


ಬಳ್ಳಾರಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮೀನಳ್ಳಿ ತಾಯಣ್ಣ ಮಾತನಾಡಿ  ದೇಶದಲ್ಲಿ ಸಂವಿಧಾನ ಜಾರಿಯಾದ ದಿನ ಇದಾಗಿದ್ದು, ಬಲಿಷ್ಠ ಮತ್ತು ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ಭಾರತ ದೇಶದ್ದಾಗಿದೆ ಎಂದರು. ಭಾರತ ಸಂವಿಧಾನವು 1949ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂತು. 


ಪ್ರತಿ ವರ್ಷ ಜನವರಿ 26 ರಂದು  ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಲೋಕತಾಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ  ಭಾರತ ದೇಶವು ಸಂವಿಧಾನ ಜಾರಿಗೆ ಬಂದ ದಿನವನ್ನು ಸ್ಮರಿಸುತ್ತೇವೆ ಎಂದು  ಗಣರಾಜ್ಯೋತ್ಸವ'ದ ಶುಭಾಶಯಗಳು ಕೋರಿದರು  ಈ ಸಂದರ್ಭದಲ್ಲಿ ರಾಮಾಂಜನೇಯ, ಮಧುರೈ ವಿಜಯ್ ಕುಮಾರ್,  ಬಸಪ್ಪ, ಅಶೋಕ ಸಂಗನಕಲ್ಲು, ಕಿರಣ್ ಕುಮಾರ್, ರುದ್ರಮುನಿ ಮುತ್ತು, ಪ್ರದೀಪ್, ಜಾವೀದ್, ಹೊನ್ನೂರು ವಲಿ, ಜಮೀಲಾ, ಪುಷ್ಪ, ರೇಣುಕಾ, ಯಶೋಧ, ಮತ್ತು ಶಬಾನಾ ಮತ್ತು ಇತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top