ಬಳ್ಲಾರಿ: ನಮ್ಮ ಭಾರತದ 76ನೇ ಗಣರಾಜ್ಯೋತ್ಸವದ ಅಂಗವಾಗಿ ಬಳ್ಳಾರಿಯಲ್ಲಿರುವ ಪ್ರತಿಷ್ಟಿತ ಮಹಾವಿದ್ಯಾಲಯದವಾದ ರಾವ್ ಬಹದ್ದೂರ್ ವೈ ಮಹಬಲೇಶ್ವರಪ್ಪ ತಾಂತಿಕ ಮಹಾವಿದ್ಯಾಲಯದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯ ಅಧ್ಯಕ್ಷರಾದ ಜಾನೇಕುಂಟೆ ಬಸವರಾಜ, ಆಡಳಿತ ಮಂಡಳಿ ಸದಸ್ಯರು ಬಾಡದ ಪ್ರಕಾಶ್ , ಪ್ರಾಂಶುಪಾಲರಾದ ಡಾ|| ಟಿ.ಹನುಮಂತರೆಡ್ಡಿ, ಇವರುಗಳ ಉಪಸ್ಥಿತಿಯಲ್ಲಿ, ಬೋಧಕ ಹಾಗೂ ಭೋಧಕೇತರ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿ ದ್ವಜಾರೋಹಣವನ್ನು ನೇರವೇರಿಸಿ, ರಾಷ್ಟçಗೀತೆಯನ್ನು ಹಾಡಿ ರಾಷ್ಟ್ರದ್ವಜಕ್ಕೆ ಗೌರವವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಾನೇಕುಂಟೆ ಬಸವರಾಜ, ಇವರು ಮಾತನಾಡಿ “ದೇಶವು ಕೃಷಿಯಲ್ಲಾಗಲೀ, ಶಿಕ್ಷಣದಲ್ಲಾಗಲೀ, ಆರ್ಥಿಕದಿಂದಾಗಲೀ ಇನ್ನೂ ಹೆಚ್ಚು ಅಭಿವೃದ್ಧಿಪಡೆಯಬೇಕಾಗಿದೆ, ಅದಕ್ಕೆ ಈಗಿನ ಯುವಜನರಲ್ಲಿ ದೇಶವನ್ನು ತಮ್ಮ ಮನೆಯೆಂದು ತಿಳಿದು ದೇಶ ಪ್ರೇಮವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ನಾವು ಈ ಹಿಂದೆ ಸಾಧಿಸಲಾಗದ, ತಲುಪದೇ ಇರುವ ಗುರಿಯನ್ನು, ಇನ್ನು ಮುಂದಿನ ದಿನಗಳಲ್ಲಿ ತಲುಪಬೇಕೆಂದರು, ಎಲ್ಲರೂ ಈ ಮಹಾವಿದ್ಯಾಲಯದ ಏಳ್ಗೆಗೆ ಇನ್ನೂ ಹೆಚ್ಚಿನ ಸೇವೆಯಿಂದ ಶ್ರಮಿಸಬೇಕು.
ಎಲ್ಲಾ ಸೌಕರ್ಯಗಳಿರುವ ಈ ಮಹಾವಿದ್ಯಾಲಯದಲ್ಲಿ ಇನ್ನು ಹೆಚ್ಚಿನ ಗುಣಮಟ್ಟದ ಶಿಕ್ಷಣವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ನೀಡಿ ಹೆಸರು ಮಾಡಬೇಕೆಂಬುದೇ ಆಸೆ ಎಂದರು.” ಈ ಕಾರ್ಯಕ್ರಮಕ್ಕೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ ಇವರು ಅತಿಥಿಗಳನ್ನು ಸ್ವಾಗತಿಸಿ, ನೆರೆದ ಎಲ್ಲಾ ಸಿಬ್ಬಂದಿವರ್ಗದವರಿಗೆ ಹಾಗು ವಿದ್ಯಾರ್ಥಿವೃಂದದವರಿಗೆ ಶುಭಕೋರಿ, ತಮ್ಮ ಮುಂದಿನ ಭವಿಷ್ಯವು ಭವ್ಯವಾಗಿರಲಿ ಎಂದು ಹೇಳಿದರು.
ಆರ್‌ವೈಎಂಇಸಿ ದೈಹಿಕ ಶಿಕ್ಷಣ ನಿರ್ದೇಶಕ ವಿಜಯ್ ಮಹಾಂತೇಶ್, ಮತ್ತು ವಿದ್ಯಾರ್ಥಿಗಳ ತಂಡದಿಂದ ಭವ್ಯವಾದ ಆಚರಣೆಗಳನ್ನು ಆಯೋಜಿಸಲಾಯಿತು, ಎಲ್ಲಾ ವಿಭಾಗದ ಮುಖ್ಯಸ್ಧರು, ಭೋಧಕ, ಭೊಧಕೇತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸುದಿನದಂದು ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾರತಾಂಬೆಗೆ ಸಮರ್ಪಿಸಲು, ಉಪನ್ಯಾಸಕರ ಪ್ರೋತ್ಸಾಹದಿಂದ ದೇಶ ಭಕ್ತಿ ಪ್ರೇರಿಸುವ ಅಭಿವೃದ್ಧಿಪಡಿಸುವ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ