ಮ೦ಗಳೂರು: ಮಧುವನ 110 ಕೆವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಮಂದಾರ್ತಿ ಮತ್ತು ಬಾರ್ಕೂರು ಎಕ್ಸ್ ಪ್ರೆಸ್ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ಜ. 7ರಂದು ವಿದ್ಯುತ್ ಸರಬರಾಜಿನಲ್ಲಿ ಅನಿಯಮಿತ ವ್ಯತ್ಯಯವಾಗಲಿದೆ.
ಅ೦ದು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ 110 ಕೆವಿ ಹಿರಿಯಡ್ಕ-ಬಾರ್ಕೂರು-ಮಧುವನ ವಿದ್ಯುತ್ ಮಾರ್ಗದ ಇನ್ಸುಲೇಟರ್ ಗಳ ಬದಲಾವಣೆ ಹಾಗೂ ಶಿಥಿಲಗೊಂಡ ಗ್ರೌಂಡ್ ವಯರ್ ಬದಲಾವಣೆ ಮಾಡುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಈ ಫೀಡರ್ ಗಳ ವ್ಯಾಪ್ತಿಯಲ್ಲಿ ಬರುವ ಹೊಸಾಳ,ಕಚ್ಚೂರು, ಹೇರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಶಿರೂರು, ನಂಚಾರು, ಹಿಲಿಯಾಣ, ಮಂದಾರ್ತಿ, ಹೆಬ್ಬಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅನಿಯಮಿತ ವ್ಯತ್ಯಯವಾಗುತ್ತದೆ ಎಂದು ಮೆಸ್ಕಾ೦ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ