ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಜನವರಿ 20 ರಿಂದ 29ರ ವರೆಗೆ 'ಕರ್ನಾಟಕ ಸಂಗೀತ ಪಿತಾಮಹ ' ಶ್ರೀ ಪುರಂದರದಾಸರ ಆರಾಧನೆಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಕಾರ್ಯಕ್ರಮಗಳು : (ಪ್ರತಿದಿನ ಸಂಜೆ 6-30ಕ್ಕೆ)
ಜನವರಿ 20, ಸೋಮವಾರ : ಉಡುಪಿ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರಿಂದ ಕಾರ್ಯಕ್ರಮದ ಉದ್ಘಾಟನೆ ಮತ್ತು ಅನುಗ್ರಹ ಸಂದೇಶ.
ಜನವರಿ 21, ಮಂಗಳವಾರ : ವೇಣುಗೋಪಾಲ ಭಂಡಾರಿ ಮತ್ತು ಸಂಗಡಿಗರಿಂದ "ಕೊಳಲು ವಾದನ"
ಜನವರಿ 22, ಬುಧವಾರ : ವಿ|| ಶಾಂಭವಿ ಎ.ಹೆಚ್. ಮತ್ತು ಸಂಗಡಿಗರಿಂದ "ಹರಿದಾಸ ವಾಣಿ"
ಜನವರಿ 23, ಗುರುವಾರ : ಕು|| ಅಹಿಕಾ ನಾಗದೀಪ್ ಮತ್ತು ಸಂಗಡಿಗರಿಂದ "ವೀಣಾ ವಾದನ"
ಜನವರಿ 24, ಶುಕ್ರವಾರ : ಕು|| ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ "ಸ್ಯಾಕ್ಸೋಫೋನ್ ವಾದನ"
ಜನವರಿ 25, ಶನಿವಾರ : ಗುಲ್ಬರ್ಗ ಗುರುರಾಜದಾಸರು ಮತ್ತು ಸಂಗಡಿಗರಿಂದ "ಹರಿ ಭಜನೆ"
ಜನವರಿ 26, ಭಾನುವಾರ : ಕು|| ಅಭಿಜ್ಞಾ ಪಿ. ಕಶ್ಯಪ್ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ"
ಜನವರಿ 27, ಸೋಮವಾರ : ಕು|| ಸುಶ್ರಾವ್ಯ ಆಚಾರ್ಯ ಮತ್ತು ಸಂಗಡಿಗರಿಂದ "ಹರಿದಾಸ ಮಂಜರಿ"
ಜನವರಿ 28, ಮಂಗಳವಾರ : ಕು|| ಹಂಸ ಬಿ.ಎನ್. ಮತ್ತು ಸಂಗಡಿಗರಿಂದ "ಹರಿದಾಸ ಝೇಂಕಾರ"
ಜನವರಿ 29, ಬುಧವಾರ : ಮ||ಶಾ||ಸಂ|| ಕಲ್ಲಾಪುರ ಪವಮಾನಾಚಾರ್ಯರಿಂದ "ಪುರಂದರದಾಸರು" ವಿಷಯವಾಗಿ ಧಾರ್ಮಿಕ ಪ್ರವಚನ.
ಕಾರ್ಯಕ್ರಮಗಳು ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ